ಜಿಲ್ಲಾ ಉಸ್ತುವಾರಿ ಸಚಿವರ ನಕಾರಾತ್ಮಕ ಹೇಳಿಕೆ. ಅಥಣಿ ಜಿಲ್ಲೆಗೆ ಹೆಚ್ಚಿದ ಕೂಗು

  • shivaraj B
  • 23 Sep 2024 , 5:50 PM
  • Athani
  • 1051

ಅಥಣಿ :  ಬೆಳಗಾವಿ ಜಿಲ್ಲೆ ವಿಭಜನೆ ಕೂಗು ಎಲ್ಲೆಡೆ ಕೇಳಿಬರುತ್ತಿದ್ದೂ, ಚಿಕ್ಕೋಡಿ, ಗೋಕಾಕ್, ಅಥಣಿ ಪ್ರತ್ಯೇಕ ಜಿಲ್ಲೆಗೆ ಬೇಡಿಕೆ ಹೆಚ್ಚಾಗಿದೆ.

ಅಥಣಿ ಪ್ರತ್ಯೇಕ ಜಿಲ್ಲೆಗೆ ಇಲ್ಲಿನ ಜನರು ದಶಕಗಳಿಂದ ಹೋರಾಟ ಮಾಡುತ್ತಾ ಬಂದಿದ್ದರೆ. ಅಥಣಿ ಪ್ರತ್ತೇಕ ಜಿಲ್ಲೆಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ನಕಾರಾತ್ಮಕ ಹೇಳಿಕೆ ನೀಡಿರುವದು ಅಥಣಿ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಅಥಣಿ ಪಟ್ಟಣದ ಪ್ರವಾಶಿ ಮಂದಿರದಲ್ಲಿ ಸಾರ್ವಜನಿಕರ ಕುಂದು ಕೊರತೆ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡುತ್ತ. ಅಥಣಿ ಜಿಲ್ಲೆ ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದರು.

ವರದಿ : ರಾಹುಲ್ ಮಾದರ

Read All News