ಟಿಬಿ ಡ್ಯಾಂ ಕ್ರಷ್ಟ್ ಗೇಟ್ ಅವಘಢಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ : ಶ್ರೀನಾಥ್

  • shivaraj B
  • 11 Aug 2024 , 8:37 PM
  • Koppal
  • 541

ಗಂಗಾವತಿ: ತುಂಗಭದ್ರ ಜಲಾಶಯ 19 ನೇ ಕ್ರಷ್ಟ್ ಗೇಟ್ ಕಿತ್ತು ಹೋಗಲು  ಟಿಬಿ ಡ್ಯಾಂ ಅಧಿಕಾರಿಗಳ ದಿವ್ಯ ನಿರ್ಲಕ್ಯವೆ ಕಾರಣ ಎಂದು ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗು ಕಾಡಾ ಮಾಜಿ ಅಧ್ಯಕ್ಷ ಹೆಚ್.ಆರ್.ಶ್ರೀನಾಥ್ ಹೇಳಿದರು

ಅವರು ತಮ್ಮ ನಿವಾಸದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದರು. 

ತಮ್ಮ ಅವಧಿಯಲ್ಲಿ ಪ್ರತಿ ವರ್ಷ ಅನುದಾನ ಕಾಯ್ದಿರಿಸಿ ಎಲ್ಲಾ 32 ಗೇಟ್ ಗಳ ದುರಸ್ತಿ ಮಾಡಲಾಗುತ್ತಿತ್ತು, ಹತ್ತು ತಿಂಗಳು ನೀರಿಲ್ಲದಿದ್ದರೂ ತಾತ್ಸಾರ ಮಾಡಿರುವುದು ದುರಾದೃಷ್ಟಕರ ಕೂಡಲೆ ಅಧಿಕಾರಿಗಳ ಅಮನತ್ತು ಮಾಡಬೇಕು ಎಂದು ಕಿಡಿಕಾರಿದರು.

ಮೂರು ರಾಜ್ಯಗಳು ರೈತರಿಗೆ ಪರಿಹಾರ ನೀಡಬೇಕು, ಸುಮಾರು 70 ಟಿಎಂಸಿ ನೀರು ಪೋಲಾಗುತ್ತದೆ,   ಒಂದು ಬೆಳೆ ತೆಗೆಯುವುದು ಕಷ್ಟವೆ ಸರಿ, ಕಾವೇರಿ ಅಭಿವೃದ್ಧಿ ಪ್ರಾಧಿಕಾರದ ಮಾದರಿಯಲ್ಲಿ ರಾಜ್ಯ ಸರಕಾರ ಮಂಡಳಿ ರಚಿಸಿ ನಿಗ ವಹಿಸಬೇಕು, ವಿಜಯ ನಗರ ಕಾಲದ ರಾಯ ಬಸವ ಕಾಲುವೆಗಳಿಗೆ ಹನ್ನೆರಡು ತಿಂಗಳು ನೀರು ಹರಿಸಬೇಕು, ಬೋರ್ಡ್ ವ್ಯಾಪ್ತಿಗೆ ಒಳಪಡಿಸಬಾರದು ಈ ನೀರು ನದಿಯಿಂದ ಹರಿಯುವ ಕಾರಣ ನಿಯಮ ವಿಧಿಸದಂತೆ ತಿಳಿಸಿದರು.

ನದರ್ ಲ್ಯಾಂಡ್ ಮಾದರಿಯಲ್ಲಿ ಪೈಬರ್ ಗ್ಲಾಸ್ ಅಳವಡಿಸಿ ಶಾಶ್ವತ ಕಾಮಗಾರಿ ನಡೆಸಬೇಕು, ದೇಶದಲ್ಲೇ ಇಂಥ ದುರಂತ ನಡೆದ ಉದಾಹರಣೆ ಇಲ್ಲ, ಎಪ್ಪತ್ತುವರ್ಷದ ಈ ಜಲಾಶಯಕ್ಕೆ ಜನ ಪ್ರತಿನಿಧಿಗಳು ಹಾಗು ಅಧಿಕಾರಿಗಳಿಂದಾದ ಘೋರ ದುರಂತ ಮರುಗಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಮುಕುಂದರಾವ್ ಭವಾನಿಮಠ, ಹಿದುಳಿದ ವರ್ಗದ ರಾಜ್ಯ ಕಾಂಗ್ರೆಸ್ ಪ್ರಧಾನ  ಕಾರ್ಯದರ್ಶಿ ರಾಜಶೇಖರ್ ಮುಷ್ಟೂರ್, ಅಯುಬ್ ಖಾನ್, ಅಬ್ದುಲ್ ಪೈಲ್ವಾನ್ ಹಾಗು ಹನುಂತರಾಯ ವಡ್ಡರಹಟ್ಟಿ ಇತರರಿದ್ದರು.

ವರದಿ : ರವಿಚಂದ್ರ  ಬಡಿಗೇರ 

Read All News