ಬೆಳಗಾವಿ:ಉತ್ತರ ಕರ್ನಾಟಕದ ಪ್ರಸಿದ್ಧ ಭರತೇಶ ಶಿಕ್ಷಣ ಸಂಸ್ಥೆ ಇಂಜಿನಿಯರಿಂಗ್ ಶಿಕ್ಷಣ ಕ್ಷೇತ್ರದಲ್ಲಿ ಮತ್ತೊಂದು ಹೆಜ್ಜೆ ಇಟ್ಟಿದ್ದು, ಹೊಸ ಇಂಜಿನಿಯರಿಂಗ್ ಕಾಲೇಜು ಪ್ರಾರಂಭಿಸುತ್ತಿದೆ.
1962 ರಲ್ಲಿ ಭರತೇಶ ಎಜ್ಯುಕೇಶನ್ ಟ್ರಸ್ಟ್ ಸ್ಥಾಪನೆಯಾದ ನಂತರದಿಂದ ಬೆಳಗಾವಿ, ಹಲಗಾ ಮತ್ತು ಬಸವನ ಕುಡಚಿಯ ಮೂವರು ಸುಸಜ್ಜಿತ ಕ್ಯಾಂಪಸ್‌ಗಳಲ್ಲಿ 20 ಶಿಕ್ಷಣ ಸಂಸ್ಥೆಗಳನ್ನು ನಡೆಸಿ, ಶ್ರೇಷ್ಠತೆಯನ್ನು ಸಾಧಿಸುತ್ತಿದೆ.
ಭರತೇಶ ಶಿಕ್ಷಣ ಸಂಸ್ಥೆಯು ಕಳೆದ 40 ವರ್ಷಗಳಿಂದ ಮೋತಿಚಂದ ಲಿಂಗಡೆ ಭರತೇಶ ಪಾಲಿಟೆಕ್ನಿಕ್ ಮಹಾವಿದ್ಯಾಲಯದ ಮೂಲಕ ಇಂಜಿನಿಯರಿಂಗ್ ಶಿಕ್ಷಣದಲ್ಲಿ ತೊಡಗಿಸಿಕೊಂಡಿದೆ.
ಇದೀಗ, ಭರತೇಶ ಸಂಸ್ಥೆ ಬಸವನ ಕುಡಚಿಯಲ್ಲಿ ಭರತೇಶ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಎಂಬ ಹೊಸ ಇಂಜಿನಿಯರಿಂಗ್ ಕಾಲೇಜು ಪ್ರಾರಂಭಿಸಿದೆ. ಈ ಕಾಲೇಜಿಗೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE) ಅನುಮೋದನೆ ದೊರೆತಿದ್ದು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದೊಂದಿಗೆ ಸಂಯೋಜಿತವಾಗಿದೆ.
ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕ ವಸತಿಗೃಹಗಳು, ನಿರಂತರ ಸಾರಿಗೆ ಸೌಲಭ್ಯಗಳು ಈ ಕ್ಯಾಂಪಸ್‌ನ ವೈಶಿಷ್ಟ್ಯಗಳಾಗಿವೆ. ಅರ್ಹ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಶುಲ್ಕದಲ್ಲಿ ಇಂಜಿನಿಯರಿಂಗ್ ಶಿಕ್ಷಣವನ್ನು ನೀಡಲಾಗುತ್ತಿದೆ.
ಮ್ಯಾನೇಜ್‌ಮೆಂಟ್ ಸೀಟುಗಳ ಪ್ರವೇಶಾತಿ ಭರದಿಂದ ಸಾಗುತ್ತಿದೆ. ಅದೇ ರೀತಿ, ಭರತೇಶ ಇಂಜಿನಿಯರಿಂಗ್ ಕಾಲೇಜು ಹಲವು ಕೈಗಾರಿಕೆಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡು, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮತ್ತು ಕೈಗಾರಿಕಾ ಭೇಟಿಗಳು, ಪ್ರಾಜೆಕ್ಟ್ ಆಧಾರಿತ ಕಲಿಕೆ ಮತ್ತು ಕೌಶಲ್ಯ ಪ್ರಯೋಗಾಲಯಗಳನ್ನು ಹೊಂದಿಸಿದೆ.
ಹೆಚ್ಚಿನ ಮಾಹಿತಿಗಾಗಿ 9071015777ನಂಬರ್‌ನಲ್ಲಿ ಸಂಪರ್ಕಿಸಬಹುದಾಗಿದೆ.