ಇವತ್ತಿನಿಂದ ದೇಶದಲ್ಲಿ ಹೊಸ ಕಾನೂನುಗಳು ಜಾರಿ ! ಹುಷಾರಾಗಿರಿ

  • shivaraj bandigi
  • 1 Jul 2024 , 12:16 AM
  • Bailhongal
  • 9899

ಬೈಲಹೊಂಗಲ : ಇವತ್ತಿನಿಂದ ಭಾರತ ದೇಶದಲ್ಲಿ ನೂತನ ಕಾನೂನಿನ ಕಲರವ. ಬ್ರಿಟಿಷರು ಸನ್ 1860 ರಲ್ಲಿ ಜಾರಿಗೆ ತಂದಿರುವ ಕಾನೂನುಗಳನ್ನು ರದ್ದುಗೊಳಿಸಿ ಕೇಂದ್ರದ ಮೋದಿ ಸರ್ಕಾರ ಜುಲೈ ಒಂದರಿಂದ ದೇಶದಲ್ಲಿ ಹೊಸ ಕಾನೂನುಗಳ ಜಾರಿಗೆ ಮುಂದಾಗಿದೆ. ಐಪಿಸಿ, ಸಿಆರ್ ಪಿಸಿ ಸಾಕ್ಷ್ಯ ಅಧಿನಿಯಮಗಳನ್ನು ಹಲವು ಬದಲಾವಣೆ ಮತ್ತು ಕಠಿಣ ಕಾನೂನು ಕ್ರಮಗಳ ಮೂಲಕ ಪರಿಚಯಿಸಲಾಗಿದೆ. ಹಲವು ಮಹತ್ತರ ಬದಲಾವಣೆಗಳೊಂದಿಗೆ ಜಾರಿಯಾಗುತ್ತಿರುವ ನೂತನ ಕಾನೂನುಗಳು ನಾಗರಿಕರಿಗೆ ಹಲವು ಸಡಲಿಕೆಗಳ ಜೊತೆಗೆ ಕಠಿಣ ಕ್ರಮಗಳನ್ನು ಎದುರಿಸಬೇಕಾಗುತ್ತದೆ. 

ಬ್ರಿಟಿಷ್‌ ಕಾಲದ ಕಾನೂನಿಗೆ ಮುಕ್ತಿ ನೀಡಿ, ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ ಎಂಬ ಹೊಸ ಕಾಯ್ದೆಗಳ ಜಾರಿಗಾಗಿ ಕಳೆದ ಡಿಸೆಂಬರ್ ತಿಂಗಳಲ್ಲಿ ರಾಷ್ಟ್ರಪತಿಗಳ ಅಂಕಿತ ಪಡೆದ ಈ ಹೊಸ ಕಾನೂನುಗಳು ಇವತ್ತಿನಿಂದ ದೇಶ್ಯಾದಂತ್ಯ ಜಾರಿಗೆ ಬರಲಿವೆ.

ವರದಿ : ರವಿಕಿರಣ್  ಯಾತಗೇರಿ

Read All News