ಬೆಳಗಾವಿಯ ವಿಮಾನಯಾನ ಸೇವೆಗಳ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ, ಬಿಜೆಪಿ ನಾಯಕ ಈರಣ್ಣ ಕಡಾಡಿ ಸ್ಪಷ್ಟ ಉತ್ತರ ನೀಡದೇ,ನಾವು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು. ಬೆಳಗಾವಿ ವಿಮಾನಯಾನ ಸೇವೆಗಳು ಮುಂದುವರಿಯಬೇಕೆಂದು ನಿರೀಕ್ಷಿಸಿದ್ದ ಜನರಿಗೆ ಈ ಕುರಿತು ಯಾವುದೇ ಸ್ಪಷ್ಟತೆ ಇಲ್ಲದಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ಇದರ ಜೊತೆಗೆ, ಬೆಳಗಾವಿಯ ರೈಲು ಸೇತುವೆಯ ಅವ್ಯವಸ್ಥಿತ ಕಾಮಗಾರಿ ಕುರಿತು ಕೇಳಿದ ಪ್ರಶ್ನೆಗೆ,ಈ ವಿಷಯವನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಎಂಬ ಸಾಮಾನ್ಯ ಉತ್ತರ ನೀಡಿದರು. ಇದರಿಂದ ಬೇಸತ್ತ ಜನರು, ರಾಜಕೀಯ ನಾಯಕರು ಬೆಳಗಾವಿಯ ಮೂಲಸೌಲಭ್ಯ ಸಮಸ್ಯೆಗಳಿಗೆ ಗಂಭೀರವಾಗಿ ಸ್ಪಂದಿಸಿಲ್ಲವೆಂಬ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಬೆಳಗಾವಿಯ ಅಭಿವೃದ್ಧಿ, ವಿಮಾನಯಾನ ಸೇವೆಗಳು, ಮತ್ತು ಮೂಲಸೌಲಭ್ಯಗಳ ದುರ್ಬಲ ಸ್ಥಿತಿ ಜನರಿಗೆ ಅನೇಕ ತೊಂದರೆಗಳನ್ನು ಉಂಟುಮಾಡಿದ್ದು, ಇದರ ಬಗ್ಗೆ ರಾಜಕೀಯ ನಾಯಕರಿಂದ ಯಾವುದೇ ಗಂಭೀರ ಸ್ಪಂದನೆ ಇಲ್ಲದಿರುವುದು ನಿರ್ಲಕ್ಷ್ಯತೆ ಎಂಬ ಅಭಿಪ್ರಾಯವನ್ನು ಹೆಚ್ಚಿಸಿದೆ.