Lunar Eclipse: ನ.8 ರಾಹುಗ್ರಸ್ತ ಗ್ರಸ್ತೋದಯ ಚಂದ್ರ ಗ್ರಹಣದ ಪರಿಣಾಮ ಮತ್ತು ವಿಶೇಷತೆ

  • 14 Jan 2024 , 5:55 AM
  • Bengaluru
  • 587

ಈ ವರ್ಷದ ದೀಪಾವಳಿ ಸೂರ್ಯಗ್ರಹಣದ ಕರಿ ನೆರಳಿನಲ್ಲಿ ಕಳೆದುಹೋಗಿದೆ. ಆದರೆ, ಈ ವರ್ಷದ ದೇವ ದೀಪಾವಳಿಯೂ ಕೂಡ ಸೂರ್ಯಗ್ರಹಣದ ಕರಿ ನೆರಳಲ್ಲಿ ಕಳೆದುಹೋಗಲಿದೆ. ಕೆಲವೇ ದಿನಗಳ ಅಂತರದಲ್ಲಿ ಎರಡು ಗ್ರಹಣಗಳು 4 ರಾಶಿಗಳ ಜಾತಕದವರ ಮೇಲೆ ಭಾರಿ ಪ್ರಭಾವ ಬೀರಲಿವೆ.ಹಿಂದೂ ಧರ್ಮದಲ್ಲಿ ಕಾರ್ತಿಕ ಮಾಸವನ್ನು ಹಬ್ಬಗಳ ಮಾಸ ಎಂದು ಕರೆಯಲಾಗುತ್ತದೆ. ಈ ವರ್ಷ ಕಾರ್ತಿಕ ಮಾಸವು ಕೆಲವು ಕಾರಣಗಳಿಂದ ವಿಶೇಷವಾಗಿದೆ. ಈ ವರ್ಷ, ದೀಪಾವಳಿಯ ಸಮಯದಲ್ಲಿ ಸೂರ್ಯಗ್ರಹಣ ಸಂಭವಿಸುವುದು ಮತ್ತು ನಂತರ ದೇವ ದೀಪಾವಳಿಯಂದು ಚಂದ್ರಗ್ರಹಣ ಸಂಭವಿಸುವುದು ಒಂದು ಅನನ್ಯ ಕಾಕತಾಳೀಯವಾಗಿದೆ.

ಕೇವಲ 15 ದಿನಗಳ ಅಂತರದಲ್ಲಿ ಸಂಭವಿಸುವ ಎರಡು ಗ್ರಹಣಗಳು ಎಲ್ಲಾ ರಾಶಿಗಳ ಜನರ ಜೀವನದ ಮೇಲೆ ಭಾರಿ ಪ್ರಭಾವ ಬೀರಲಿವೆ.  ಆದರೆ ಮುಂಬರುವ ಚಂದ್ರ ಗ್ರಹಣ ನಾಲ್ಕು ರಾಶಿಗಳ ಜಾತಕದವರ ಮೇಲೆ ಸ್ವಲ್ಪ ಜಾಸ್ತಿಯೇ ಪರಿಣಾಮ ಬೀರಲಿವೆ.  
ನವೆಂಬರ್ 8 ರಂದು ಚಂದ್ರಗ್ರಹಣ ಇರುವುದರಿಂದ ಈ ಬಾರಿ ದೇವ ದೀಪಾವಳಿಯನ್ನು ಒಂದು ದಿನ ಮುಂಚಿತವಾಗಿ ನವೆಂಬರ್ 7 ರಂದು ಆಚರಿಸಲಾಗುವುದು ಎನ್ನಲಾಗಿದೆ. ದೇವ ದೀಪಾವಳಿಯ ದಿನ ಚಂದ್ರ ಗ್ರಹಣವು ನವೆಂಬರ್ 8, 2022 ರಂದು ಮಂಗಳವಾರ ಹಗಲು 02-38 ರಿಂದ 06-19 ಗಂಟೆ ಯವರೆಗೆ ಇರಲಿದೆ. ಈ ಗ್ರಹಣವು ಭಾರತದಲ್ಲಿ ಹಗಲಿನಲ್ಲಿ ‌ ಕರ್ನಾಟಕದಲ್ಲಿ ಚಂದ್ರೋದಯವಾದ ನಂತರ ಗ್ರಹಣ ಮೋಕ್ಷ ಮಾತ್ರ ಕಾಣಿಸುತ್ತದೆ.‌

ಚಂದ್ರಗ್ರಹಣದ ಸೂತಕ ಯಾವಾಗ ಪ್ರಾರಂಭವಾಗುತ್ತದೆ?ಚಂದ್ರಗ್ರಹಣದ ಸೂತಕವು ಬೆಳಿಗ್ಗೆ 09:21 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಸೂತಕ ಅವಧಿಯು ಸಂಜೆ 06.19 ಕ್ಕೆ ಕೊನೆಗೊಳ್ಳುತ್ತದೆ.

ಚಂದ್ರಗ್ರಹಣ ಎಲ್ಲಿ ಗೋಚರಿಸುತ್ತದೆ : ನವೆಂಬರ್ 8 ರಂದು ಚಂದ್ರಗ್ರಹಣವನ್ನು ಭಾರತದ ಕೋಲ್ಕತ್ತಾ, ಸಿಲಿಗುರಿ, ಪಾಟ್ನಾ, ರಾಂಚಿ, ಗುವಾಹಟಿ ಮುಂತಾದ ಸ್ಥಳಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣಬಹುದು.

ಚಂದ್ರಗ್ರಹಣವು ಉತ್ತರ ಮತ್ತು ಪೂರ್ವ ಯುರೋಪ್, ಏಷ್ಯಾ, ಆಸ್ಟ್ರೇಲಿಯಾ, ಪೆಸಿಫಿಕ್ ಮಹಾಸಾಗರ, ಹಿಂದೂ ಮಹಾಸಾಗರ, ಉತ್ತರ ಅಮೆರಿಕಾ ಮತ್ತು ದಕ್ಷಿಣ ಅಮೆರಿಕಾದ ಬಹುತೇಕ ಭಾಗಗಳಲ್ಲಿ ದೇವ ದೀಪಾವಳಿಯ ಮರುದಿನ ಜಗತ್ತಿನಲ್ಲಿ ಗೋಚರಿಸುತ್ತದೆ.

ಚಂದ್ರಗ್ರಹಣಕ್ಕೆ ಸಂಬಂಧಿಸಿದ ವಿಶೇಷ ಸಂಗತಿಗಳು

ಹಿಂದೂ ಧರ್ಮದ ನಂಬಿಕೆಗಳ ಪ್ರಕಾರ, ಗ್ರಹಣದ 9 ಗಂಟೆಗಳ ಮೊದಲು ಚಂದ್ರಗ್ರಹಣದ ಸೂತಕ ಅವಧಿಯು ಪ್ರಾರಂಭವಾಗುತ್ತದೆ. ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣವನ್ನು ಭಾರತದಲ್ಲಿ ಕಾಣಬಹುದು.

ನಂಬಿಕೆಯ ಪ್ರಕಾರ, ವಿಶೇಷವಾಗಿ ಗರ್ಭಿಣಿಯರು ಗ್ರಹಣ ಅವಧಿಯಲ್ಲಿ ವಿಶೇಷ ಕಾಳಜಿ ವಹಿಸಬೇಕು.

ಚಂದ್ರಗ್ರಹಣದ ಸೂತಕ ಅವಧಿಯನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಈ ಗ್ರಹಣದ ಸೂತಕ ಕಾಲವು 09 ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ ಮತ್ತು ಗ್ರಹಣ ಮುಗಿದ ನಂತರ ಕೊನೆಗೊಳ್ಳುತ್ತದೆ.

ಸೂತಕ ಕಾಲದ ಆರಂಭದ ನಂತರ, ಪೂಜೆ ಇತ್ಯಾದಿ ಶುಭ ಮತ್ತು ಶುಭ ಕಾರ್ಯಗಳನ್ನು ಮಾಡಲಾಗುವುದಿಲ್ಲ.

ಚಂದ್ರಗ್ರಹಣದ ಸಮಯದಲ್ಲಿ ಪ್ರಯಾಣ ಮಾಡುವುದು ತುಂಬಾ ಅಶುಭವೆಂದು ಪರಿಗಣಿಸಲಾಗಿದೆ.ಆದ್ದರಿಂದ, ಗ್ರಹಣ ಅವಧಿಯಲ್ಲಿ ಪ್ರಯಾಣವನ್ನು ತಪ್ಪಿಸಬೇಕು.

ಚಂದ್ರಗ್ರಹಣದ ಸಮಯದಲ್ಲಿ ಮಲಗಬಾರದು ಅಥವಾ ಚೂಪಾದ ವಸ್ತುಗಳನ್ನು ಬಳಸಬಾರದು.‌‌

ಬೆಂಗಳೂರಿನಲ್ಲಿ ಗ್ರಹಣ ಸ್ಪರ್ಶ ಸಂಜೆ 5:11 ರಿಂದ ಗ್ರಹಣ ಮೋಕ್ಷ ಸಂಜೆ 6:19 ಕ್ಕೆ 

ಭೋಜನ ನಿಯಮ:

ಈ ದಿನ ಹಗಲು ಭೋಜನ ನಿಷಿದ್ಧವಾಗಿರುತ್ತದೆ.
ಉಪಹಾರ ಮಧ್ಯಾಹ್ನ 11-50 ಘಂಟೆ ಒಳಗೆ ತದ ನಂತರ ಆಹಾರ ಸೇವನೆ ಇಲ್ಲ.
ಗ್ರಹಣ ಮೋಕ್ಷ ನಂತರ ರಾತ್ರಿ 6:19 ರ ನಂತರ ಮಕ್ಕಳು, ವೃದ್ಧರು ಮತ್ತು ಅನಾರೋಗ್ಯ ವ್ಯಕ್ತಿಗಳು ಆಹಾರ ಸೇವನೆ ಮಾಡಬಹುದು.

ಗ್ರಹಣ ಶಾಂತಿ: ಗ್ರಹಣ ಸಮಯದಲ್ಲಿ ಗ್ರಹಣ ಶಾಂತಿ ಹಾಗೂ ಜಪ - ತಪ, ಅನುಷ್ಠಾನ, ವಿಷ್ಣು ಸಹಸ್ರ ನಾಮ ಪಠಣ ಮಾಡುವುದು ಉತ್ತಮ.
ದಾನ ಮಾಡಿ. ( ಅರಿಷ್ಟ ಪ್ರಭಾವದಿಂದ ಮುಕ್ತಿ ಪಡೆಯಲು ನವಗ್ರಹ ಸಹಿತ ಗ್ರಹಣ ಶಾಂತಿ ಮಾಡಿಸಬಹುದು).

ಗ್ರಹಣ ಮಂತ್ರ
ಈ ಕೆಳಗಿನ ಶ್ಲೋಕವನ್ನು ಗ್ರಹಣಕಾಲದಲ್ಲಿ ಪಠಿಸುವುದರಿಂದ ಶುಭವಾಗುವುದು.

ಶ್ಲೋಕ 

ಯೋ ಸೌ ವಜ್ರಧರೋ ದೇವಃ ಆದಿತ್ಯಾನಾಂ ಪ್ರಭುರ್ಮತಃ|
ಚಂದ್ರ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು|
 ಯೋ ಸೌ ದಂಡಧರೋ ದೇವಃ ಯಮೋ ಮಹಿಷವಾಹನಃ ಚಂದ್ರ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು|| ಯೋ ಸೌ ಶೂಲಧರೋ ದೇವಃ ಪಿನಾಕೀ ವೃಷವಾಹನಃ| ಚಂದ್ರ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು|

ಗ್ರಹಣಕಾಲದಲ್ಲಿ ಪಾಲಿಸಬೇಕಾದ ಆಚರಣೆಗಳು :ಗ್ರಹಣ ಸ್ಪರ್ಶ ಸ್ನಾನ. (ಹಿಡಿಯುವ ಸಮಯ) ಮತ್ತು ಮೋಕ್ಷ ಸ್ನಾನ.(ಮುಗಿದ ನಂತರ) ಸ್ನಾನ ಮಾಡಲೇಬೇಕು.

ಗ್ರಹಣದ ಆರಂಭದಲ್ಲಿ ಮಾಡುವ ಸ್ನಾನದಿಂದ ಜಪ-ಪಾರಾಯಣ-ದಾನಾದಿಗಳಿಗೆ ಮಾತ್ರ ಅಧಿಕಾರ. ಊಟ, ಉಪಾಹಾರಗಳಿಗಿಲ್ಲ. ‌ ‌

ಗ್ರಹಣದ ಸೂತಕವು ಗ್ರಹಣ ಆರಂಭದ ಹನ್ನೆರಡು ಗಂಟೆಗಳ ಮೊದಲು ಆರಂಭವಾಗುತ್ತದೆ. ಗ್ರಹಣ ಮೋಕ್ಷ ಕಾಲದ ನಂತರ ಮಾಡುವ ಸ್ನಾನವು ಸೂತಕದ ಮುಕ್ತಾಯವಾಗಿರುತ್ತದೆ.

ಗ್ರಹಣ ಕಾಲದಲ್ಲಿ ಯಾವುದೇ ದ್ರವ ಅಹಾರವಾಗಲಿ ಅಥವಾ ಘನ ಆಹಾರವಾಗಲಿ ಸ್ವೀಕರಿಸಬಾರದು. ‌ ‌ 

ಗ್ರಹಣ ಮೋಕ್ಷ ಕಾಲದ ನಂತರವೇ ಸ್ನಾನ, ಪೂಜೆ ಸಲ್ಲಿಸಿ, ಅಡುಗೆ ಮಾಡಿ, ಊಟ ಮಾಡಬೇಕು. ಗ್ರಹಣಕ್ಕಿಂತ ಮುಂಚೆ ಮಾಡಿಟ್ಟು ಅಥವಾ ಗ್ರಹಣಕಾಲದಲ್ಲಿ ಮಾಡಿಟ್ಟು ತಿನ್ನಬಾರದು. ‌

ಗ್ರಹಣ ಮೋಕ್ಷ ಕಾಲದ ನಂತರ ಅಗತ್ಯವಾಗಿ ಸ್ನಾನ ಮಾಡಲೇಬೇಕು. ಪವಿತ್ರ ಗಂಗಾಜಲ ಅಥವಾ ಶುದ್ದ ಜಲವನ್ನು ಮನೆಯ ಎಲ್ಲಾ ಭಾಗಗಳಲ್ಲಿಯೂ ಪ್ರೋಕ್ಷಿಸ ಬಹುದು.

ಗ್ರಹಣ ಕಾಲದಲ್ಲಿ ನದಿಗಳಲ್ಲಿ, ಮಹಾನದಿಗಳಲ್ಲಿ ಮಾಡುವ ಸ್ನಾನ ಅತೀ ಶ್ರೇಷ್ಠ. ಸಮುದ್ರ ಸ್ನಾನ ಸರ್ವೋತ್ತಮ.

ಯಾರ ಮನೆಯಲ್ಲಿ ಬಾವಿ ಮುಂತಾದವುಗಳಿಂದ ಗ್ರಹಣದ ನಂತರ ಶುದ್ಧ ನೀರನ್ನು ತೆಗೆದುಕೊಳ್ಳಲು ಸಾಧ್ಯವಿದೆಯೋ ಅಂತಹವರು ಹಾಗೆಯೇ ಮಾಡಬೇಕು. ಯಾರ ಮನೆಯಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಅನಿವಾರ್ಯತೆ ಇದೆ ಅಂತಹವರು ನೀರಿನ ಪಾತ್ರೆಗಳ (ಹಾಲು, ಮೊಸರು, ತುಪ್ಪ ಮತ್ತು ಎಣ್ಣೆಯಲ್ಲಿ ಕರಿದ ಪದಾರ್ಥಗಳು ಇತರೆ) ಮೇಲೆ ದರ್ಬೆ ಅಥವಾ ತುಳಸಿ ಅಥವಾ ಗರಿಕೆ ಯನ್ನು ಹಾಕಿರಬೇಕು.

ಗ್ರಹಣ ಆರಂಭದಿಂದ ಅಂತ್ಯದ ಕಾಲದವರೆಗೂ ದೇವರಸ್ಮರಣೆ, ನಮಸ್ಕಾರ, ಜಪ, ಪಾರಾಯಣಗಳನ್ನು ಮಾಡಬೇಕು. ರಾಹುಗ್ರಸ್ತ ಗ್ರಸ್ತೋದಯ ಚಂದ್ರ ಗ್ರಹಣದ ಸಮಯ:ಗ್ರಹಣ ಸ್ಪರ್ಶ ಕಾಲ. ಹಗಲು 02-39 pm
ಗ್ರಹಣ ಮಧ್ಯ ಕಾಲ: ಹಗಲು 04-29 pm ಗ್ರಹಣ ಮೋಕ್ಷ ಕಾಲ ಹಗಲು 06-19 pm
ಗ್ರಹಣವು ಸೂರ್ಯಾಸ್ತದ ನಂತರ ಮುಗಿಯುವುದರಿಂದ ಗ್ರಹಣ ಮೋಕ್ಷವು ಕಾಣಿಸುತ್ತದೆ.

ಈ ರಾಹುಗ್ರಸ್ತ ಗ್ರಸ್ತೋದಯ ಚಂದ್ರ ಗ್ರಹಣವು 
ಮೇಷ. ರಾಶಿಯಲ್ಲಿ ಭರಣಿ. ನಕ್ಷತ್ರದ ಮೂರನೆಯ ಚರಣದಲ್ಲಿ ನಡೆಯುತ್ತದೆ.
ಈ ಸಮಯದಲ್ಲಿ ಕುಂಭ, ಮೀನ ಮತ್ತು ಮೇಷ. ಲಗ್ನಗಳು ನಡೆಯುತ್ತದೆ.

ಕರ್ನಾಟಕ ರಾಜ್ಯದಲ್ಲಿ ಗ್ರಹಣ ಗೋಚರಿಸುವ ಸಮಯ : ಗ್ರಹಣ ಪ್ರಾರಂಭ : ಸಂಜೆ 05-11 pm ಗ್ರಹಣ ಮಧ್ಯ ಕಾಲ ಸಂಜೆ 05-49 pm ಗ್ರಹಣ ಅಂತ್ಯ ಕಾಲ: ಸಂಜೆ 06-19 pmಸೂತಕ ಅವಧಿಯು ಚಂದ್ರ ಗ್ರಹಣಕ್ಕೆ 9 ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ. ಗ್ರಹಣ ಮುಗಿದ ನಂತರ ಮಾತ್ರ ಕೊನೆಗೊಳ್ಳುತ್ತದೆ.

ಸೂತಕ ಸಮಯ ಪ್ರಾರಂಭ :ಸೂತಕ ಸಮಯ ಅಂತ್ಯ :   06:19 pm    ಧಾರ್ಮಿಕ ನಂಬಿಕೆಗಳ ಪ್ರಕಾರ, ಸೂತಕ ಅವಧಿಯಲ್ಲಿ ಯಾವುದೇ ಮಂಗಳಕರ ಅಥವಾ ಶುಭ ಕಾರ್ಯಗಳನ್ನು ಮಾಡಲಾಗುವುದಿಲ್ಲ. ವಿಶೇಷವಾಗಿ ಗರ್ಭಿಣಿಯರು ಈ ಸಮಯದಲ್ಲಿ ಹಲವಾರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಏಕೆಂದರೆ ಇದು ಹೊಟ್ಟೆಯಲ್ಲಿ ಬೆಳೆಯುವ ಮಗುವಿನ ಮೇಲೂ ಪರಿಣಾಮ ಬೀರುತ್ತದೆ.
ಚಂದ್ರ ಗ್ರಹಣದ ಸಮಯದಲ್ಲಿ, ಚಂದ್ರನು ಮೇಷ ರಾಶಿಯಲ್ಲಿರುತ್ತಾನೆ. ಈ ಕಾರಣದಿಂದಾಗಿ, ಮೇಷ ರಾಶಿಯ ಜನರ ಮೇಲೆ ಕೆಟ್ಟ ಪರಿಣಾಮವನ್ನು ಬೀರಬಹುದು. ಮೇಷ ರಾಶಿಯವರಿಗೆ ಚಂದ್ರ ಗ್ರಹಣದ ಸಮಯವು ಅನುಕೂಲಕರವಾಗಿರುವುದಿಲ್ಲ. ಚಂದ್ರ ಗ್ರಹಣವು ಕೆಲವು ರಾಶಿಚಕ್ರ ಚಿಹ್ನೆಗಳ ಮೇಲೆ ಶುಭ, ಮಿಶ್ರ ಮತ್ತು ಅಶುಭ ಪರಿಣಾಮ ಬೀರಲಿದೆ.

ದ್ವಾದಶ ರಾಶಿಗಳಿಗೆ ರಾಹುಗ್ರಸ್ತ ಚಂದ್ರ ಗ್ರಹಣ ಫಲಗಳು   ಶುಭ ಫಲ. ಮಿಥುನ, ಕಟಕ, ವೃಶ್ಚಿಕ, ಮಕರ ಮಿಶ್ರ ಫಲ. ಸಿಂಹ, ತುಲಾ, ಧನಸ್ಸು, ಮೀನ ಅಶುಭ ಫಲ. ಮೇಷ, ವೃಷಭ,ಕನ್ಯಾ, ಕುಂಭ ಗ್ರಹಣ ಪ್ರಾರಂಭವಾಗುತ್ತಿದ್ದಂತೆ ಮತ್ತು ಗ್ರಹಣ ಬಿಟ್ಟ ನಂತರ ಉಟ್ಟ ಬಟ್ಟೆಯಲ್ಲಿಯೇ ಸ್ನಾನ ಮಾಡಬೇಕು.ಗ್ರಹಣ ಸ್ಪರ್ಶ ಸಮಯದಲ್ಲಿ ಮಾಡುವ ಸ್ನಾನವು ಲಕ್ಷ ಸ್ನಾನಗಳ ಫಲವನ್ನು ಮೋಕ್ಷ ನಂತರ ಮಾಡುವ ಸ್ನಾನವು ಅನಂತ ಸ್ನಾನಗಳ ಫಲವನ್ನು ಕೊಡುತ್ತದೆ. ಗ್ರಹಣ ಸಮಯದಲ್ಲಿ ಮಾಡುವ ಜಪ-ತಪಾದಿ, ಹೋಮವು ಕೋಟಿ ಹೋಮಗಳು ಫಲವನ್ನು ಕೊಡುತ್ತದೆ.

ಪರಿಹಾರ : ಕಪ್ಪು ಅಥವಾ ಧೂಮ್ರ(ಬೂದು)  ವರ್ಣ (ಮಿಶ್ರ ಬಣ್ಣ) ಮತ್ತು .ಉದ್ದಿನಕಾಳು. ಹಾಗೂ .ಶ್ವೇತ ವಸ್ತ್ರ. ಮತ್ತು .ಅಕ್ಕಿ ಇವುಗಳನ್ನು ದಕ್ಷಿಣೆ ಸಮೇತವಾಗಿ ದೇವಾಲಯದಲ್ಲಿ / ಬ್ರಾಹ್ಮಣರಿಗೆ / ಸತ್ಪಾತ್ರರಿಗೆ ದಾನ ಮಾಡಿ. ಗ್ರಹಣ ಸಮಯದಲ್ಲಿ ದುರ್ಗಾದೇವಿ, ಈಶ್ವರ ಸುಬ್ರಹ್ಮಣ್ಯ, ನಾಗ ದೇವತೆ, ಕಾಳಿ ಮಂತ್ರ ಜಪ ಅಥವಾ ಸ್ತೋತ್ರ ಪಾರಾಯಣ, ದುರ್ಗಾ ಕವಚ, ಸಪ್ತಶತೀ ಮತ್ತು ಸಹಸ್ರನಾಮ ಸ್ತೋತ್ರ ಪಠಿಸಿರಿ.

Read All News