ಪ್ರಸಕ್ತ ಸಾಲಿನ ಬಜೆಟಿನಲ್ಲಿ ಉತ್ತರ ಕರ್ನಾಟಕಕ್ಕೆ ವಿಶೇಷ ಆದ್ಯತೆ ನೀಡಬೇಕು :ದೀಪಕ ಗುಡುಗನಟ್ಟಿ

  • 15 Jan 2024 , 12:50 AM
  • Belagavi
  • 160

ಬೆಳಗಾವಿ :ಹಲವಾರು ವಿಚಾರಗಳಲ್ಲಿ ಸರ್ಕಾರಗಳು ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಅನ್ಯಾಯ ಮಾಡುತ್ತಲೇ ಬಂದಿದ್ದು ಈ ಅನ್ಯಾಯ ಮತ್ತು ತಾರತಮ್ಯ ಮುಂದುವರೆದಿದೆ ಆದ್ದರಿಂದ ಈ ಭಾಗದ ಅಭಿವೃದ್ಧಿಗೆ ಪ್ರಸಕ್ತ ಸಾಲಿನ ಬಜೆಟಿನಲ್ಲಿ ವಿಶೇಷ ಆದ್ಯತೆ ನೀಡಬೇಕೆಂದು ಬೊಮ್ಮಾಯಿಯವರಲ್ಲಿ ಕೋರಿದ್ದಾರೆ.

ಬೇಡಿಕೆಗಳು ಕೆಳಗಿನಂತಿವೆ

1] ಬೆಳಗಾವಿಯ ಅದ್ಧೂರಿ ರಾಜ್ಯೋತ್ಸವದ ಆಚರಣೆಗೆ ಪ್ರತಿ ವರ್ಷ 2 ಕೋಟಿ ಅನುದಾನ ನೀಡುವ ನಿರ್ಧಾರವನ್ನು ಈ ಬಜೆಟನಲ್ಲಿ ಘೋಷಣೆಯನ್ನು ಮಾಡಬೇಕು ಹಾಗೂ ರಾತ್ರಿ ವೇಳೆ ಮೇರವಣಿಗೆಯ ಸಮಯವನ್ನು ವಿಸ್ತರಣೆಯನ್ನು ಮಾಡಬೇಕು.

2] ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಿಂದ ರದ್ದಾಗಿರುವ ಎಲ್ಲಾ ವಿಮಾನ ಸೇವೆಗಳನ್ನು ಪುನರಾರಂಭ ಮಾಡಲು ಸರ್ಕಾರ ಕೂಡಲೇ ಕೇಂದ್ರಕ್ಕೆ ನಿಯೋಗ ತೆಗೆದುಕೊಂಡು ಹೋಗಬೇಕು. 

3]ನಮ್ಮ ಬಹುದಿನಗಳ ಬೇಡಿಕೆಯಾಗಿರುವ ಬೆಳಗಾವಿ ಸುವರ್ಣ ವಿಧಾನ ಸೌಧಕ್ಕೆ ರಾಜ್ಯ ಮಟ್ಟದ ಕಚೇರಿಗಳನ್ನು ಸ್ಥಳಾಂತರಿಸುವ ನಿರ್ಧಾರವನ್ನು ಬಜೆಟನಲ್ಲಿ ಘೋಷಣೆ ಮಾಡಬೇಕು. 

4]ಉತ್ತರ ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೆ ನೀಡಲು ಹೊಸ ಒಂದು ಸಾವಿರ ಬಸಗಳನ್ನು ಖರೀದಿ ಮಾಡಬೇಕು.


5] ಉತ್ತರ ಕರ್ನಾಟಕದ ಜಿಲ್ಲೆಗಳ ಅಭಿವೃದ್ಧಿಗಾಗಿ ಪ್ರತಿಯೊಂದು ಜಿಲ್ಲೆಗೆ ತಲಾ 500 ಕೋಟಿ ರೂ ವಿಶೇಷ ಅನುದಾನ ನೀಡಿ ತಾರತಮ್ಯ ನಿವಾರಣೆ ಮಾಡಬೇಕು.

6] ಮಹಿಳೆಯರ ಉನ್ನತ ಶಿಕ್ಷಣಕ್ಕಾಗಿ ಸರ್ಕಾರದಿಂದ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವ ಯೋಜನೆಯನ್ನು ಬಜೆಟನಲ್ಲಿ ಘೋಷಣೆ ಮಾಡಬೇಕು.

7] ಬೆಳಗಾವಿಯಲ್ಲಿ ಬೃಹತ ಕೈಗಾರಿಕೆಗಳನ್ನು ಸ್ಥಾಪಿಸಲು ಉದ್ಯಮಿಗಳನ್ನು ಆಕರ್ಷಿಸಲು ವಿಶೇಷ ರೀಯಾಯತಿ ನೀಡುವ ಮಾರ್ಗ ಸೂಚಿಗಳನ್ನು ಬಜೆಟನಲ್ಲಿ ಘೋಷಿಸಬೇಕು.

8] ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣವನ್ನು ಅಂತರಾಷ್ಟ್ರ ವಿಮಾನ ನಿಲ್ದಾಣವನ್ನಾಗಿ ಮೇಲ್ದರ್ಜೆಗೆ ಎರಿಸುವ ನಿರ್ಧಾರವನ್ನು ಬಜೆಟನಲ್ಲಿ ಘೋಷಣೆ ಮಾಡಬೇಕು ಎಂದು ಕೋರಿದ್ದಾರೆ.

Read All News