ವಾಯವ್ಯ ಸಾರಿಗೆ ಸಂಸ್ಥೆ ರಜತ ಮಹೋತ್ಸವ: ಪ್ರಯಾಣಿಕರಿಗೆ ರಿಯಾಯಿತಿ ದರದಲ್ಲಿ ಪಾಸ್

  • 12 Jan 2024 , 7:49 PM
  • Belagavi
  • 173

ಬೆಳಗಾವಿ :ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು 25 ವಸಂತಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸಂಸ್ಥೆಯ ರಜತ ಮಹೋತ್ಸವದ ಕೊಡುಗೆಯಾಗಿ ನಿರಂತರವಾಗಿ ಸಂಸ್ಥೆಯ ವಾಹನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ರಿಯಾಯಿತಿಯೊಂದಿಗೆ ನಗರ,ಉಪನಗರ,ಸಾಮಾನ್ಯ, ವೇಗದೂತ, ತಡೆರಹಿತ ಸಾರಿಗೆಗಳಲ್ಲಿ ಒಂದು,ಎರಡು, ಹಾಗೂ ಮೂರು ತಿಂಗಳ ಅವಧಿಗೆ ರಿಯಾಯಿತಿ ಪಾಸುಗಳನ್ನು ವಿತರಿಸಲು ಯೋಜಿಸಲಾಗಿದೆ. 

ಪ್ರಥಮ ಹಂತವಾಗಿ ಒಂದು ತಿಂಗಳು ಪಾಸ್‌ ಪಡೆಯುವ ಪ್ರಯಾಣಿಕರಿಗೆ  32 ದಿನಗಳ ಕಾಲ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. (ಎರಡು ದಿನ ಹೆಚ್ಚುವರಿಯಾಗಿ) ಈ ರಿಯಾಯಿತಿ ಕೊಡುಗೆಯ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಎಲ್ಲ ವಿಭಾಗಗಳಲ್ಲಿ ದಿ.15.12.2022 ರಿಂದ ಅನ್ವಯವಾಗಲಿದೆ.

ಬಿ.ಆರ್.ಟಿ.ಎಸ್.‌ ಸ್ಮಾರ್ಟ್ ಕಾರ್ಡ್ ಹೊಂದಿರುವ ಪ್ರಯಾಣಿಕರಿಗೆ 02 ತಿಂಗಳು ದ್ವಿಮಾಸಿಕ ಪಾಸುಗಳನ್ನು ಪಡೆದರೆ 05 ದಿನಗಳ ಹೆಚ್ಚುವರಿ ರಿಯಾಯಿತಿ                        (60 ದಿನಗಳಿಗೆ 05 ದಿನ ಹೆಚ್ಚುವರಿ ಒಟ್ಟು 65 ದಿನಗಳು) 03 ತಿಂಗಳು, ತ್ರೈಮಾಸಿಕ ಪಾಸುಗಳನ್ನು ಪಡೆದರೆ 10 ದಿನಗಳ ಹೆಚ್ಚುವರಿ ರಿಯಾಯಿತಿ ನೀಡಲಾಗುವದು.              ( 90 ದಿನಗಳಿಗೆ 10 ದಿನಗಳ ಹೆಚ್ಚುವರಿ ರಿಯಾಯಿತಿ ಒಟ್ಟು100 ದಿನಗಳು). 

ಒಂದು ತಿಂಗಳ ಅವಧಿಯ ರಿಯಾಯಿತಿ ಯೋಜನೆಯು ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಎಲ್ಲ ವಿಭಾಗಗಳಿಗೆ ದಿ.15.12.2022 ರಿಂದ ಅನ್ವಯವಾಗಲಿದೆ. 02,03 ತಿಂಗಳುಗಳ ಪಾಸ್‌ ರಿಯಾಯಿತಿ ಯೋಜನೆಯನ್ನು ಹಂತ, ಹಂತವಾಗಿ ಎಲ್ಲ ವಿಭಾಗಗಳಿಗೆ ವಿಸ್ತರಿಸಲಾಗುವದು.

ಈ ವ್ಯವಸ್ಥೆಯಿಂದ ಈಗಾಗಲೇ ಮಾಸಿಕ ಪಾಸುಗಳನ್ನು ಪಡೆದವರಿಗೆ ಪ್ರಯಾಣ ವೆಚ್ಚದಲ್ಲಿ ಇರುವ 40 % ರಿಯಾಯತಿಯ ಜೊತೆಗೆ ಒಂದು ತಿಂಗಳು ಪಾಸು ಪಡೆದವರಿಗೆ 32 ದಿನ, 02 ತಿಂಗಳಿಗೆ 65 ದಿನ. 03 ತಿಂಗಳಿಗೆ 100 ದಿನಗಳವರೆಗೆ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಆದ್ದರಿಂದ ಸಂಸ್ಥೆಯ ವ್ಯಾಪ್ತಿಯಲ್ಲಿ ಹೆಚ್ಚು, ಹೆಚ್ಚು ಮಾಸಿಕ ಪಾಸುಗಳನ್ನು ಪಡೆದು ಸಂಸ್ಥೆಯು ನೀಡಿರುವ ರಿಯಾಯಿತಿ ಯೋಜನೆಯನ್ನು ಸದುಪಯೋಗ ಪಡೆದುಕೊಳ್ಳುವದರೊಂದಿಗೆ  ಸುರಕ್ಷಿತ, ಸುಖಕರ, ಮಿತವ್ಯಯ ಪ್ರಯಾಣಕ್ಕಾಗಿ ಸಂಸ್ಥೆಯು 25 ವರ್ಷಗಳನ್ನು ಪೂರೈಸುತ್ತಿರುವ ಈ ಸಂದರ್ಭದಲ್ಲಿ ಸಂಸ್ಥೆಯ ಯೋಜನೆಗಳನ್ನು ಸದಯಪಯೋಗ ಪಡಿಸಿಕೊಳ್ಳುವದರೊಂದಿಗೆ ಪ್ರೋತ್ಸಾಹಿಸುವಂತೆ ವಾಕರಸಾ.ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿರುತಾರೆ.

Read All News