ಕಟ್ಟೊದಿಲ್ಲ ಕಟ್ಟೊದಿಲ್ಲ ಕರೆಂಟ್ ಬಿಲ್ ಕಟ್ಟೋದಿಲ್ಲ

  • Shivaraj Bandigi
  • 15 Jan 2024 , 12:29 AM
  • Belagavi
  • 586

ಬೆಳಗಾವಿ : ವಿದ್ಯುತ್ ಬಿಲ್ ಹೆಚ್ಚಳ ಮಾಡಿರುವುದನ್ನು ಖಂಡಿಸಿ ಆಲ್ ಇಂಡಿಯಾ ವುಮನ್ ರೈಟ್ಸ್,  ಸೋಮವಾರ ಪ್ರತಿಭಟನೆ ನಡೆಸಿ ಹೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕಾಂಗ್ರೆಸ್ ಚುನಾವಣೆಯ ಪೂರ್ವದಲ್ಲಿ ರಾಜ್ಯದಲ್ಲಿ ಸರಕಾರ ರಚನೆಯಾದ ಮರುಕ್ಷಣ ವಿದ್ಯುತ್ ಬಿಲ್ ಉಚಿತ ಎಂದು‌ ಪ್ರಣಾಳಿಕೆಯಲ್ಲಿ ಹೇಳಿದ್ದರು. ಆದರೆ ಈಗ ವಿದ್ಯುತ್ ಬಿಲ್ ದುಪ್ಪಟ್ಟು ಬರುತ್ತಿದೆ. ಸರಕಾರ ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಹಚ್ಚುವ ಕೆಲಸ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.

ರಾಜ್ಯ ಸರಕಾರ ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಉಚಿತ ಎಂದು‌ ಘೋಷಣೆ ಮಾಡಿದೆ. ಆದರೆ ಕಳೆದ ಹದಿನೈದು ದಿನದಿಂದ ಪ್ರತಿ ಯುನಿಟ್ ಬಿಲ್ ದುಪ್ಪಟ್ಟು ಬರುತ್ತಿದೆ. ಇದು ಸರಕಾರದ ಇಬ್ಬಗೆಯ ನೀತಿ. ಇದೇ ತಿಂಗಳಿನಿಂದ ನಾವು ವಿದ್ಯುತ್ ಬಿಲ್ ಕಟ್ಟುವುದಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಚುನಾವಣೆಯ ಪೂರ್ವದಲ್ಲಿ ನಮ್ಮ ಬಿಲ್ ಸಹಜವಾಗಿ ಬರುತ್ತಿತ್ತು. ಆದರೆ ಚುನಾವಣೆ ಮುಗಿದ ಮೇಲೆ ಏಕಾಏಕಿ ಬಿಲ್ ಹೆಚ್ವಿಗೆ ಬರುತ್ತಿದೆ. ಮನೆಯ ಖರ್ಚು, ವೆಚ್ಚ, ಮಕ್ಕಳ ಶಾಲೆಯ ಖರ್ಚು ಸಾಕಷ್ಟು ಇರುತ್ತದೆ. ಇದರ ನಡುವೆ ಹೆಸ್ಕಾಂ ನಿಂದ ಮೂರು ತಿಂಗಳ ಬಿಲ್ ಒಮ್ಮೆಲೆ ಬಂದಿದೆ. ಯಾವುದೇ ಕಾರಣಕದಕೂ ಜೂನ ತಿಂಗಳಿಂದಲೇ ನಾವು ವಿದ್ಯುತ್ ಬಿಲ್ ಕಟ್ಟುವುದಿಲ್ಲ ಎಂದು ಆಗ್ರಹಿಸಿದರು.

ರಾಮ ಬನವಾನಿ, ದೀಪಾ ದೋಂಗಡೆ, ಸುವರ್ಣಾ ಕದಂ, ಮಾಲನ ಗೋಡ್ಸೆ, ರೇಣುಕಾ ಉದಯ, ರೇಖಾ ಪಾಟೀಲ, ಪ್ರಭಾವತಿ ಚವಾಣ, ಸಾವಿತ್ರಿ ಮೊಳವೆ ಸೇರಿದಂತೆ  ಇನ್ನಿತರರು ಉಪಸ್ಥಿತರಿದ್ದರು.

Read All News