ಬೆಳಗಾವಿ :
ಏನಿಲ್ಲ, ಏನಿಲ್ಲ ಭಿಕ್ಷುಕರಿಗೆ ನಿರಾಶ್ರಿತ ಕೇಂದ್ರದಲ್ಲಿ ಸರಿಯಾಗಿ ಊಟ ಕೊಡುತ್ತಿಲ್ಲ. ನಿರಾಶ್ರಿತರ ಪರಿಹಾರ ಕೇಂದ್ರದ ಅಧೀಕ್ಷಕ ಮನುಷ್ಯನಲ್ಲ. ಮಾನವೀಯತೆ ಅವನಿಗೆ ಗೊತ್ತಿಲ್ಲ. ಇಲ್ಲಿ ಏನಿಲ್ಲ. ಏನೇನಿಲ್ಲ ಎಂದು ಯುವ ಕರ್ನಾಟಕ ಭೀಮ ಸೇನೆ, ಯುವ ಶಕ್ತಿ ಸಂಘ ಸೋಮವಾರ ಇಲ್ಲಿನ ಚನ್ನಮ್ಮ ವೃತ್ತದಲ್ಲಿ ವಿನೂತನವಾಗಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ನಿರಾಶ್ರಿತರ ಕೇಂದ್ರದಲ್ಲಿ ನಿತ್ಯ ಇಲ್ಲಿರುವ ಜನರು ಬದುಕಲು ಹರಸಾಹಸ ಪಡುತ್ತಿದ್ದಾರೆ. ಇಲ್ಲಿನ ಅಧಿಕಾರಿಗಳು ಬೇಕಾಬಿಟ್ಟಿ ವರ್ತನೆ ತೋರುತ್ತಿದ್ದಾರೆ ಎಂದು ಆರೋಪಿಸಿದರು.