ಬೆಳಗಾವಿ :ಜಿಲ್ಲೆಯಲ್ಲಿ 29 ಸಕ್ಕರೆ ಕಾರ್ಖಾನೆಗಳಿಗೆ ಸಭೆಗೆ ಕರೆದಿದ್ದೇವೆ ಆದೇಶ ಮಾಡಿಲ್ಲ. ಕಾರಣಾಂತರದಿಂದ ಬಂದಿಲ್ಲ ಎಂದು ತಿಳಿಸಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.
ಶುಕ್ರವಾರ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ರೈತರ ಸಮಸ್ಯೆಗಳ ಕುರಿತು ವಿವಿಧ ರೈತ ಸಂಘನೆಯ ಮುಖಂಡರ ಜತೆಗೆ ಕರೆಯಲಾದ ಸಭೆಯಲ್ಲಿ ಮಾತನಾಡಿದರು.
ಕಬ್ಬು ಬೆಳೆಗಾರರ ಸಮಸ್ಯೆ ಸಾಕಷ್ಟಿದೆ. ಜಿಲ್ಲಾಧಿಕಾರಿಗಳು ಸಭೆ ಕರೆದರೂ ಕೆಲ ಸಕ್ಕರೆ ಕಾರ್ಖಾನೆಯ ಮಾಲೀಕರು ಸಭೆಗೆ ಬಂದಿಲ್ಲ ಎಂದು ರೈತ ಮುಖಂಡ ಚುನ್ನಪ್ಪ ಪೂಜಾರಿ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ ಜಿಲ್ಲಾಡಳಿತದಿಂದ ಸಕ್ಕರೆ ಕಾರ್ಖಾನೆಯವರಿಗೆ ಆದೇಶ ಮಾಡಿಲ್ಲ ಆದ್ದರಿಂದ ಸಭೆ ಆರಂಭಿಸಲು ಅವಕಾಶ ಕೊಡಬೇಕು ಎಂದು ಹೇಳಿದರು.
ರೈತರ ಬೇಡಿಕೆಗೆ ಅನುಸಾರವಾಗಿ ಕಬ್ಬಿನ ದರ ಘೋಷಣೆ ಮಾಡಿದ ಬಳಿಕ ಕಬ್ಬು ನುರಿಸಲು ಕಾರ್ಖಾನೆ ಯವರಿಗೆ ಸೂಚಿಸಲಾಗುವುದು ಎಂದರು.
ಕಬ್ಬಿಗೆ ದರ ನಿಗದಿ ಪಡಿಸಿ ಕಬ್ಬು ನುರಿಸಲು ಆರಂಭಿಸಬೇಕು. ಕಬ್ಬಿನ ದರ ನಿಗದಿ ಮಾಡಿ ಕಾರ್ಖಾನೆಯನ್ನು ಆರಂಭಿಸಬೇಕು. ರೈತರ ಸಮಸ್ಯೆಯನ್ನು ಜಿಲ್ಲಾಡಳಿತ ಬಗೆ ಹರಿಸಬೇಕೆಂದು ರೈತರು ಆಗ್ರಹಿಸಿದರು.