ಬೆಳಗಾವಿ :
ಬೆಳಗಾವಿಯಲ್ಲಿಯೂ ಕನ್ನಡಿಗರಿದ್ದಾರೆ. ಇಲ್ಲಿಯವರು ನಮ್ಮವರು. ಆದ್ದರಿಂದ ಬ್ಯಾಡ್ ಮ್ಯಾನರ್ಸ್ ಕನ್ನಡ ಚಲನಚಿತ್ರ ನ.24 ರಂದು ಬಿಡುಗಡೆಯಾಗಲಿದೆ. ಪ್ರಮೋಷನ್ ಆಗಿ ಬಂದಿದ್ದೇನೆ ಎಂದು ನಟ ಅಭಿಷೇಕ ಅಂಬರೀಶ್ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಡ್ ಮ್ಯಾನರ್ಸ್ ಚಲನಚಿತ್ರ ಮೈಸೂರು, ಬೆಂಗಳೂರು ಸೇರಿದಂತೆ ವಿವಿಧ ಕಡೆ ಚಲನ ಚಿತ್ರದ ಚಿತ್ರೀಕರಣ ನಡೆದಿದೆ. ನ.24 ರಂದು ಚಿತ್ರ ಬಿಡುಗಡೆಯಾಗಲಿದೆ ಎಂದರು.
ಆ್ಯಕ್ಷನ್, ರೊಮ್ಯಾಂಟಿಕ್, ಅತ್ಯುತ್ತಮ ಫೈಟಿಂಗ್, ಕುಟುಂಬ ಸಮೇತ ಬಂದು ಸಿನಿಮಾ ನೋಡಬಹುದು. ಕಡಿಮೆ ವೆಚ್ಚದಲ್ಲಿ ಸಿನಿಮಾ ಮಾಡಿದ್ದು ಎಲ್ಲರೂ ಚಿತ್ರ ನೋಡಿ ಹಾರೈಸಿ ಎಂದರು.
ಉತ್ತರ ಕರ್ನಾಟಕದ ಜನರು ಸೌಮ್ಯ ಸ್ವಭಾವದವರು. ಕನ್ನಡ ಚಲನಚಿತ್ರ ಹಿಟ್ ಆಗಲು ಈ ಭಾಗದ ಜನರ ಕೊಡುಗೆ ಅಪಾರವಾಗಿದೆ. ಎಲ್ಲ ಚಲನಚಿತ್ರ ನಟರು ಬೆಂಗಳೂರಿನಲ್ಲಿ ಇರುವುದರಿಂದ ಕಾವೇರಿ ನದಿ ಹೋರಾಟಕ್ಕೆ ಮಹತ್ವ ಕೊಡುತ್ತೇವೆ. ಉತ್ತರ ಕರ್ನಾಟಕದಲ್ಲಿಯೂ ಮಹದಾಯಿ ವಿಚಾರ ಬಂದಾಗ ಎಲ್ಲ ಚಲನಚಿತ್ರ ನಟರು ಬಂದು ಹೋರಾಟ ಮಾಡಿದ್ದೇವೆ. ನಾಡು, ನುಡಿ, ಜಲ ವಿಚಾರ ಬಂದಾಗ ಎಲ್ಲರೂ ಒಗ್ಗಟಾಗುತ್ತೇವೆ. ಮಹದಾಯಿ ವಿಚಾರದಲ್ಲಿ ಕನ್ನಡ ಚಲನಚಿತ್ರ ನಟರಿಗೆ ಯಾರೂ ಸಂಪರ್ಕ ಮಾಡುವುದಿಲ್ಲ. ಸಮಸ್ಯೆ ಯಾವುದೇ ಇದ್ದರೂ ಖಂಡಿತವಾಗಿ ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡೋಣ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ರಾಜಕೀಯ ನಮ್ಮ ತಾಯಿ ಸುಮಲತಾ ಮಾಡುತ್ತಿದ್ದಾರೆ. ನಾನು ರಾಜಕೀಯಕ್ಕೆ ಬರೋಲ್ಲ. ಸಿನಿಮಾ ರಂಗದಲ್ಲಿಯೇ ಮುಂದುವರೆಯುತ್ತೇನೆ ಎಂದು ತಿಳಿಸಿದರು.