ಡಿ ಎಸ್ ಎಸ್ ರಾಜ್ಯ ಸಮೀತಿ ವತಿಯಿಂದ ಪ್ರೊ.ಬಿ.ಕೃಷ್ಣಪ್ಪ ನವರ ಹುಟ್ಟು ಹಬ್ಬ ಅಂಗವಾಗಿ ರಾಜ್ಯ ಮಟ್ಟದ ಐಕ್ಯತೆ ಸಮಾವೇಶ

  • Shivaraj Bandigi
  • 14 Jan 2024 , 10:28 PM
  • Belagavi
  • 361

ಗಂಗಾವತಿ  : ಬಳ್ಳಾರಿ ಜಿಲ್ಲಾ ಸಮಿತಿ ಡಿ ಎಸ್ ಎಸ್ ವತಿಯಿಂದ ಪ್ರೊ.ಬಿ.ಕೃಷ್ಣಪ್ಪ ನವರ ಹುಟ್ಟು ಹಬ್ಬ ಅಂಗವಾಗಿ ರಾಜ್ಯ ಮಟ್ಟದ ಐಕ್ಯತೆ ಸಮಾವೇಶವನ್ನು ಉದ್ದೇಶಿಸಿ  ಸಾಮಾಜಿಕ ಹೋರಾಟಗಾರ್ತಿ  ಕುಮಾರಿ ಅಕ್ಷತಾ ಮಾತನಾಡಿ ಬಿ. ಕೃಷ್ಣಪ್ಪನವರು 1938ರ ಜೂನ್ 9ರಂದು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿಯಲ್ಲಿ ಬಸಪ್ಪ ಮತ್ತು ಚೌಡಮ್ಮನವರ ಮೊದಲನೆ ಮಗನಾಗಿ ಹುಟ್ಟಿದರು.

ಪ್ರಾಥಮಿಕ ಮಾಧ್ಯಮಿಕ ಹಾಗೂ ಪ್ರೌಢಶಾಲೆ ಶಿಕ್ಷಣವನ್ನು ಹರಿಹರದಲ್ಲೇ ಮುಗಿಸಿದರು. ಚಿತ್ರದುರ್ಗದಲ್ಲಿ ಕಾಲೇಜು ಶಿಕ್ಷಣವನ್ನು ಪ್ರಾರಂಭಿಸಿದರು. 1963ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡ ಸ್ನಾತ್ತಕೋತ್ತರ ಪದವಿ ಪಡೆದರು.

ಬಿ. ಕೃಷ್ಣಪ್ಪ ಅವರು ಸಮಾಜವನ್ನು ಪರಿವರ್ತಿಸುವ ಕ್ರಾಂತಿಕಾರಕ ವಿಚಾರಧಾರೆಯನ್ನು ಹೊಂದಿದ್ದರು. ರಾಷ್ಟ್ರಮಟ್ಟದಲ್ಲಿ ತಮ್ಮನ್ನು ಗುರುತಿಸಿಕೊಂಡ ಬಿ. ಕೃಷ್ಣಪ್ಪನವರು ದಲಿತರ ಉದ್ಧಾರ ಅಸ್ಪೃಶ್ಯತೆ ಸಾಮಾಜಿಕ ತಾರತಮ್ಯಗಳ ನಿರ್ಮೂಲನೆ ಮತ್ತು ಮಲಹೊರುವ ಪದ್ಧತಿ ನಿಷೇಧ, ಆರ್ಥಿಕ ಸಮಾನತೆಯಾ ಚಿಂತನೆ ನಡೆಸಿದರು.

ಅಖಿಲ ಕರ್ನಾಟಕ ವ್ಯಾಪ್ತಿಯನ್ನು ಹೊಂದಿದ ಈ ರಾಜ್ಯದಲ್ಲಿ ಬೆತ್ತಲೆ ಸೇವೆ, ದೇವದಾಸಿ ಪದ್ಧತಿಗೆ ತಿಲಾಂಜಲಿಯಿಡಲು ದಲಿತ ಸಂಘರ್ಷ ಸಮಿತಿ ಹೋರಾಡಿದ್ದು ಐತಿಹಾಸಿಕ ಮಹತ್ವದ ಘಟನೆ ಎಂದರೆ ತಪ್ಪಾಗಲಾರದು. ದಲಿತರಿಗಾಗಿ ಭೂಹೋರಾಟಗಳನ್ನು, ದೌರ್ಜನ್ಯದ ವಿರುದ್ಧ, ಜಾತಿಪದ್ಧತಿ, ಅಸಮಾನತೆ, ಅಸ್ಪೃಶ್ಯತೆ, ಬೆತ್ತಲೆ ಸೇವೆ, ದೇವದಾಸಿ ಪದ್ಧತಿ, ಮಲಹೊರುವ ಪದ್ಧತಿ ವಿರುದ್ಧ ಸಂಘಟಿತ ಹೋರಾಟಗಳನ್ನು ನಡೆಸಿದರು.

ದಲಿತ ಸಂಘರ್ಷ ಸಮಿತಿ ಪ್ರಧಾನವಾಗಿ ಕಾಣಿಸಿಕೊಂಡ ದೇವರಾಜ ಅರಸು ಕಾಲದಲ್ಲಿ 1977ರಲ್ಲಿ 'ಭೂ' 'ಪರಬಾಕಿ' ಶಾಸನ ಜಾರಿಗೊಂಡಿತ್ತು. ಇದರಿಂದ ಭೂಹೀನದಲಿತರಿಗೆ ಭೂಮಿಯು ದೊರಕಿದ್ದು, ದಲಿತ ಸಂಘರ್ಷ ಸಮಿತಿ ಭೂ ಹೋರಾಟಗಳಿಗೆ ದೊರತ ಜಯ ಎಂದೇ ಹೇಳಬಹುದು.
ಬಿ. ಕೃಷ್ಣಪ್ಪ ರವರ ಮುಖ್ಯವಾಗಿ ಒಂದು ಹೋರಾಟ ನೆನಪಾಗುತ್ತದೆ.

ಚಂದ್ರಗುತ್ತಿಯಲ್ಲಿ ಬೆತ್ತಲೆ ಮೆರವಣಿಗೆ ನಿಲ್ಲಿಸಬೇಕು ಎಂದು ಹೋರಾಟ ಮಾಡಿದಾಗ ಬಿ. ಕೃಷ್ಣಪ್ಪನವರ ಮೇಲೆ ಹಲ್ಲೆಯಾಯಿತು. ಆ ಸಂದರ್ಭದಲ್ಲಿ ರಾಜ್ಯದಲ್ಲಿ ಜನತಾ ಸರ್ಕಾರ ಇತ್ತು. ಬೆಂಗಳೂರಿನಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಧರಣಿ ಮಾಡಿರುತ್ತಾರೆ. ರಾಯಚೂರಿನ ಜಿಲ್ಲಾ ಸಂಚಾಲಕರಾಗಿ ಉರುಂದಪ್ಪ ಅವರು ಆಗಿದ್ದರು. ಅಂದು ಬರಿಕಾಲಿನಲ್ಲಿ ಹತ್ತು ಜನರೊಂದಿಗೆ ಬೆಂಗಳೂರಿಗೆ ಬಂದಿದ್ದರು.

ಅಂದಿನ ಕಂದಾಯ ಸಚಿವರಾಗಿದ್ದ -ಎಸ್‌.ಆರ್‌. ಬೊಮ್ಮಾಯಿ ಅವರ ಮನೆಯ ಮುಂದೆ ನಿಂತು ಚಪ್ಪಲಿ ಇಲ್ಲದೇ ರಾಯಚೂರಿನಿಂದ ನಿಮ್ಮ ಮನೆಗೆ ಬಂದಿದ್ದೇವೆ. ನಿಮಗೆ ಓಟ್ ಹಾಕಿದ ಜನರು ಬಂದಿದ್ದೇವೆ. ನಿಮಗೆ ಮಾನ ಮಯ್ಯಾದೆ ಇದ್ದರೆ ಹೊರಗಡೆ ಬಾ! ಎಂದಿದ್ದರು.

ಅಂದು ದಲಿತ ಚಳುವಳಿಗೆ ಅಂತಹ ಶಕ್ತಿ ಇತ್ತು, ಅಂದು ಸಂಘಟನೆಯನ್ನು ಆ ರೀತಿ ಬೆಳಸಿದವರು ಬಿ. ಕೃಷ್ಣಪ್ಪನವರು, ಅಧಿಕಾರ ರಾಜಕಾರಣದ ಹೊರಗೆ ಸ್ವಾರ್ಥವಿಲ್ಲದೆ ಜನರ ಸೇವೆ ಮಾಡಿದ ವ್ಯಕ್ತಿ ಎಂದರೆ ಬಿ. ಕೃಷ್ಣಪ್ಪನವರು, ಇವರು ಪ್ರಬುದ್ಧ ಭಾರತ ಸ್ವಾತಂತ್ರ್ಯದ ಸಮಬಾಳ್ವೆ ರಾಜಕಾರಣದ ಕನಸನ್ನು ಕಂಡಿದ್ದರು. ಅದರಿಂದ ನಾವೆಲ್ಲರೂ ನಮ್ಮ ಮನಸ್ಸುಗಳನ್ನು ಓದದ್ದಾರೆ ನಾವು ಈ ದೇಶವನ್ನು ಅಳುವುದಕ್ಕೆ ಸಾಧ್ಯ ಎಂದು ಹೇಳಿದರು ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದಂತ  ಆಯುಷ್ಮಾನ್ ಜ್ಞಾನ ಪ್ರಕಾಶ್ ಸ್ವಾಮೀಜಿಗಳು, ಪೀಠಾಧ್ಯಕ್ಷರು, ಉರಿಅಂಗ ಪೆದ್ದ ಮಠ ಮೈಸೂರು.

ಉದ್ಘಾಟನೆ ಅಧ್ಯಕ್ಷತೆ  ಪರಶುರಾಮ ನೀಲನಾಯಕ್ ರವರು,ರಾಜ್ಯ ಸಂಚಾಲಕರು, ಕರ್ನಾಟಕ ದಲಿತ ಸಂಘರ್ಷ ಸಮಿತಿ, (ಭೀಮವಾದ)
ಭಾವಚಿತ್ರಕ್ಕೆ ಮಾಲಾರ್ಪಣೆ ಡಿ. ನಾರಾಯಣ್‌. ರಾಜ್ಯ ಸಂಘಟನಾ ಸಂಚಾಲಕರು, ಸಂಪಾದಕರು, “ರಾಮನಗರ ನ್ಯೂಸ್ ಕನ್ನಡ ದಿನಪತ್ರಿಕೆ. ಗ್ಯಾನಪ್ಪ ಬಡಿಗೇರ, ಮತ್ತು ಕೊಪ್ಪಳ ಜಿಲ್ಲಾ ಅಧ್ಯಕ್ಷರಾದ ಸಿ ಕೆ ಮರಿಸ್ವಾಮಿ. ಶ್ರೀನಿವಾಸ್ .ಎಂ.ಸಿ. ನಾರಾಯಣ್ .ದೇವಣ್ಣ ಗಂಗಾವತಿ  ಸೇರಿದಂತೆ ಇತರ ಅನೇಕ ಕಾರ್ಯಕರ್ತರು ಮುಖಂಡರು ಭಾಗವಹಿಸಿದರು

Read All News