ಬೆಳಗಾವಿ : ಜಿಲ್ಲೆ ಕಾಗವಾಡ ತಾಲೂಕಿನ ಮೋಳೆ ಗ್ರಾಮದ ಹೊರವಲಯದಲ್ಲಿ ನಿಯಂತ್ರಣ ತಪ್ಪಿ ಹಾರೂಗೇರಿ ಮೂಲದ ವ್ಯಕ್ತಿ ಒಬ್ಬ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.
ಪ್ರಶಾಂತ್ ಕನ್ನೇಶ ಸೇಡಬಾಳೆ (25) ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ನಿವಾಸಿ
ಸಾವನ್ನಪ್ಪಿದ್ದಾನೆ.
ಮೊಳೆ ಗ್ರಾಮದ ಜಾತ್ರೆ ಮುಗಿಸಿಕೊಂಡು ಹಾರೂಗೇರಿಗೆ ತೆರಳುತ್ತಿದ್ದ ಇಬ್ಬರು ಸ್ನೇಹಿತರು ಕುಡಿದ ಅಮಲಿನಲ್ಲಿ ಬೈಕ್ಸ್ ಸ್ವಿಟ್ ಆಗಿ ಮೊಳೆ ತಂಗಡಿ ರಸ್ತೆ ಮಧ್ಯೆ ಅಪಘಾತಕ್ಕೆ ಒಳಗಾಗಿದ್ದಾರೆ.
ಅಪಘಾತ ಸಂಭವಿಸಿದ ನಂತರ ಸ್ನೇಹಿತರು ಅಥಣಿ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಆಸ್ಪತ್ರೆಯ ವೈದ್ಯರು ಪ್ರಥಮ ಚಿಕಿತ್ಸೆ ನಂತರ ಸ್ಕ್ಯಾನಿಂಗ್ ಮಾಡಲು ತಿಳಿಸಿದ್ದಾರೆ.
ಆದರೆ ಕುಡಿದ ಅಮಲಿನಲ್ಲಿದ್ದ ಗೆಳೆಯರು ಪ್ರಶಾಂತ್ ಗೆ ಏನು ಆಗಿಲ್ಲ ಎಂದು ಹೇಳಿ ಕೆಂಪವಾಡ ಬಳಿ ರಾತ್ರಿ ಬಿಟ್ಟು ಹೋಗಿದ್ದಾರೆ.
ರಾತ್ರಿ ಇಡಿ ತೀವ್ರ ರಕ್ತಸ್ರಾವದಿಂದ ಪ್ರಶಾಂತ ಸಾವು ಸಂಭವಿಸಿದೆ ಸುದ್ದಿ ತಿಳಿದ ಕಾಗವಾಡ ಪಿಎಸ್ಐ ಹಣಮಂತ ನೇರಳೆ ಸಿಪಿಐ ರವೀಂದ್ರ ನಾಯ್ಕೋಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ
ಈ ಸಂಬಂಧ ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ