ದೇವರ ದಾಸಿಮಯ್ಯನವರ ವಚನ, ಸಿದ್ಧಾಂತಗಳನ್ನು ತಿಳಿದುಕೊಳ್ಳಬೇಕು : ಶಾಸಕ ಅಭಯ್

  • Shivaraj Bandigi
  • 15 Jan 2024 , 2:27 AM
  • Belagavi
  • 228

ಬೆಳಗಾವಿ :  ದೇವರ ದಾಸಿಮಯ್ಯನವರು ಸಮಾಜದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದರು. ಇಂತಹ ಅನೇಕ ಶರಣರ ಜಯಂತಿಗಳು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರದೆ ಇಡೀ ನಮ್ಮ ಜೀವನದುದ್ದಕ್ಕೂ ಅವರ ಜೀವನ ಶೈಲಿಯನ್ನು ವಚನ, ವಿಚಾರಗಳನ್ನು, ತತ್ವಸಿದ್ಧಾಂತಗಳನ್ನು ಅಳವಡಿಸಿಕೊಂಡಾಗ ಮಾತ್ರ ಎಲ್ಲ ಶರಣರ ಜಯಂತಿಗಳು ಅರ್ಥಪೂರ್ಣವಾಗುತ್ತವೆ  ಎಂದು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ್ ಪಾಟೀಲ ಹೇಳಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನರ ಪಾಲಿಕೆಯ ವತಿಯಿಂದ  ನಗರದ ವಡಗಾವಿ ಸಪಾರ ಗಲ್ಲಿಯ ಶ್ರೀ ಬನಶಂಕರಿ ದೇವಸ್ಥಾನದಲ್ಲಿ   ರವಿವಾರ ಏರ್ಪಡಿಸಲಾಗಿದ್ದ ದೇವರ ದಾಸಿಮಯ್ಯ ಅವರ ಜಯಂತಿ  ಕಾರ್ಯಕ್ರಮನ್ನು ಉದ್ಘಾಟಿಸಿ  ಮಾತನಾಡಿದರು.

ಇವತ್ತಿನ ಯುವ ಪೀಳಿಗೆಗೆ ಸಿನಿಮಾ ಮತ್ತು ಮೊಬೈಲ್ ಗಳ ಮೇಲೆಯೇ ಹೆಚ್ಚಿನ ಆಸಕ್ತಿ ಇರುವುದರಿಂದ ಅವರಿಗೆ ಶರಣರ  ವಚನಗಳ ಬಗ್ಗೆ  ಯಾವುದೇ ಮಾಹಿತಿ ಇರುವುದಿಲ್ಲ. ಅಂತಹ ಯುವಕರಿಗೆ ದೇವರ ದಾಸಿಮಯ್ಯನವರು ಮತ್ತು ಅನೇಕ ಮಹಾನ್ ಶರಣರ  ವಚನಗಳ ಬಗ್ಗೆ, ಅವರ ತತ್ವ ಸಿದ್ಧಾಂತ ಗಳ ಬಗ್ಗೆ ತಿಳಿಸುವ ಕೆಲಸ ಮಾಡಬೇಕಿದೆ ಎಂದರು.

ಇದೇ ಸಂರ್ಭದಲ್ಲಿ ವಿಶೇಷ ಉಪನ್ಯಾಸ ನೀಡಿದ ಮಾರುತಿ ಶರಣ ಅವರು, ದೇವರ ದಾಸಿಮಯ್ಯನವರೂ ಸಮಸ್ತ ಜನರ ಅಭಿವೃದ್ಧಿಗಾಗಿ ಶ್ರಮಿಸಿದವರು; ಅವರ ವಚನಗಳ ಮೂಲಕ ಎಲ್ಲರನ್ನೂ ಜಾಗೃತ ಗೊಳಿಸಿದವರು. ಕಾಯಕವೇ ಕೈಲಾಸ  ಎಂಬಂತೆ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡವರು ಎಂದು ಹೇಳಿದರು.

ಶಿವ ಶರಣರ ವಿಚಾರ ಮತ್ತು ತತ್ವ ಸಿದ್ಧಾಂತಗಳನ್ನು ಹಾಗೇ ಅವರ ವಚನಗಳನ್ನ ತಿಳಿದು ಅರಿತು ನಡೆಯಬೇಕು, ಮನುಷ್ಯ ಜೀವನ ಉತ್ತಮವಾದದ್ದು. ಅದರಿಂದ ನಾವುಗಳು ಎಲ್ಲರೂ ಇಂತಹ ಮಹಾನ್ ವ್ಯಕ್ತಿಗಳ ಇತಿಹಾಸ ಜೀವನ ಶೈಲಿಯನ್ನು ತಿಳಿಯುವುದು ಅವಶ್ಯಕವಾಗಿದೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಮಹಾನಗರ ಪಾಲಿಕೆ ಉಪಯುಕ್ತರಾದ ಭಾಗ್ಯಶ್ರೀ ಹುಗ್ಗಿ, ಕಾರ್ಪೊರೇಟರ್ ದೀಪಾಲಿ ಟೋಪಿಗಿ, ರೇಷ್ಮಾ ಶಾಮಕರ, ವಡಗಾವಿ ಹಠಗರ ಸಮಾಜದ ಅಧ್ಯಕ್ಷರಾದ ವೇಕಟೇಶ ನವಹಳ್ಳಿ, ಕಾಸಬಾಗ ಹಠಗರ ಸಮಾಜದ ಅಧ್ಯಕ್ಷರಾದ ನಾರಾಯಣ ಕುಲಗೋಡ, ದೇವಾಂಗ ಸಮಾಜದ ಮಖಂಡರಾದ ಬಸವರಾಜ್ ಉಪರ, ಎಂ ಪಿ. ಛಗೋಡಿ, ಪ್ರಶಾಂತ ಕುಲಗೋಡ, ಸಮಾಜದ ಮುಖಂಡರು ಹಾಗೂ ಮಹಿಳೆಯರು ಉಪಸ್ಥಿತರಿದ್ದರು. 

ಇದಕ್ಕೂ ಮುನ್ನ ಆದ್ಯ ವಚನಕಾರ ಶ್ರೀ ದೇವರ ದಾಸಿಮಯ್ಯನವರ ಭಾವಚಿತ್ರದ ಭವ್ಯ ಮೆರವಣಿಗೆಗೆ ಶಾಸಕರಾದ  ಅಭಯ್ ಪಾಟೀಲ ಅವರು ಚಾಲನೆ ನೀಡಿದರು. ಭಾಗ್ಯಶ್ರೀ ಹುಗ್ಗಿ, ವಿದ್ಯಾವತಿ ಭಜಂತ್ರಿ ಹಾಗೂ ಸಮಾಜದ ಮುಖಂಡರು  ಉಪಸ್ಥಿತರಿದ್ದರು. 

ಶಹಾಪೂರ ನಾಥಪೈ ವೃತ್ತದಿಂದ ರಸ್ತೆ ಮಾರ್ಗವಾಗಿ ಸಂಚರಿಸಿದ ಮೆರವಣಿಗೆಯು  ಶ್ರೀ ಬನಶಂಕರಿ ದೇವಸ್ಥಾನ ತಲುಪಿತು. ಮೆರವಣಿಗೆಯಲ್ಲಿ ಸಮಾಜದ ಗಣ್ಯರು, ಮಹಿಳೆಯರು ಪಾಲ್ಗೊಂಡಿದ್ದರು.

Read All News