ಶಾಲಾ ಹೆಣ್ಣು- ಗಂಡು ಮಕ್ಕಳಿಗೆ ಒಂದೇ ಶೌಚಾಲಯ :ಬುದ್ದಿ ಎಲ್ಲಿಟ್ಟಿದ್ರಿ ಇಂಜಿನಿಯರ್ ಸಾಹೇಬ್ರೆ

  • 14 Jan 2024 , 6:01 PM
  • Belagavi
  • 340

ಅಥಣಿ :ಒಂದು ಶಾಲೆ ಅಂದರೆ ವೆವಸ್ಥಿತ ಕೊಠಡಿ ಶಾಲಾ ಕಾಂಪೌಂಡ್ ಗಂಡು ಹಾಗೂ ಹೆಣ್ಣು ಮಕ್ಕಳಿಗೆ ಪ್ರತ್ತೇಕ ಶೌಚಾಲಯ ವ್ಯವಸ್ಥೆ ಇರಬೇಕು.

ಆದರೆ ಇಲ್ಲೊಬ್ಬ ಮಹಾಶಯ ಮಾಡಿದ ಘನಂಧಾರಿ ಕೆಲಸದಿಂದ ಶಾಲಾ ಮಕ್ಕಳು ನರಕ ಯಾತನೆ ಅನುಭವಿಸುವಂತಾಗಿದೆ ಶಾಲಾ ಹೆಣ್ಣು- ಗಂಡು ಮಕ್ಕಳಿಗೆ ಒಂದೇ ಶೌಚಾಲಯ ವೆವಸ್ಥೆ ಮಾಡಿ ಸ್ಥಳೀಯರ ನಗೆ ಪಾಟಲಿಗೆ ಒಳಗಾಗಿದ್ದಾನೆ 

15ನೇ  ಹಣಕಾಸಿನ ಯೋಜನೆ ಅಡಿಯಲ್ಲಿ ಜಿಲ್ಲಾ ಪಂಚಾಯತ್ ಇಲಾಖೆ ವತಿಯಿಂದ ಮಾಡಲಾದ 
ಹೆಣ್ಣು ಮಕ್ಕಳ ಶೌಚಾಲಯಕ್ಕೆ ಎತ್ತರದ ಸಿಂಕ್ ಅಳವಡಿಸಿ ಪೋಷಕರ ಕೆಂಗಣ್ಣಿಗೆ ಕಾರಣವಾಗಿದ್ದಾನೆ 

ಇದರಿಂದ ಹೆಣ್ಣು ಮಕ್ಕಳಿಗೆ ಶೌಚಕ್ಕೆ ಹೋಗಲು ಸಾಕಷ್ಟು ಸಮಸ್ಯೆಯಾಗುತ್ತಿದೆ ಶಾಲಾ ಶಿಕ್ಷಕರು ಅಧಿಕಾರಿಗಳಿಗೆ ಮನವಿ ಮಾಡಿದರು ಕ್ಯಾರೇ ಅನ್ನದ ಅಧಿಕಾರಿಗಳು ಜಾಣ ಮೌನರಂತೆ ವರ್ತಿಸುತ್ತಿದ್ದಾರೆ. 

ಬುದ್ದಿ ಎಲ್ಲಿಟ್ಟಿದ್ರಿ ಇಂಜಿನಿಯರ್ ಸಾಹೇಬ್ರೆ....ಎಂದು ಪೋಷಕರ ಆಕ್ರೋಶ ಹೊರ ಹಾಕುತಿದ್ದಾರೆ

ಅಷ್ಟೇ ಅಲ್ಲದೆ ಶಾಲಾ ಆವರಣದಲ್ಲಿ ಗ್ರಾಮ ಪಂಚಾಯತ್ ವತಿಯಿಂದ ನಡೆಯುತ್ತಿದ್ದ ಶಾಲಾ ಆವರಣ ಅಭಿವೃದ್ಧಿ ಕಾರ್ಯ ಅರ್ಧಕ್ಕೆ ನಿಂತಿದೆ.

ಇದರಿಂದ ಮಕ್ಕಳ ಅಟೊಟಕ್ಕೆ ಸಮಸ್ಯೆ ಯಾಗುತ್ತಿದೆ
ಇದರಿಂದ ರೋಸಿ ಹೋದ ಮಕ್ಕಳ ಪೋಷಕರು
ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ..

ಅಷ್ಟೇ ಅಲ್ಲದೆ ಮಕ್ಕಳ ಪ್ರಾಣಕ್ಕೆ ಸಂಚಾಕರ ತಂದೊಡ್ಡಬಲ್ಲ ಲೈಟ್ ಕಂಭ ಕೂಡ ಅವರಣದಲ್ಲೇ ಇದ್ದು ತೆರವಿಗೆ ಮನವಿ ಮಾಡಿದ್ದಾರೆ.

Read All News