ಜಿಲ್ಲಾ ವಿಭಜನೆಗೆ ವಿರೋಧ ಬೆಳಗಾವಿ ಜಿಲ್ಲೆ ಅಖಂಡವಾಗಿರಲಿ

  • shivaraj bandigi
  • 15 Feb 2024 , 9:38 AM
  • Belagavi
  • 1050

ಬೈಲಹೊಂಗಲ :  ರಾಜ್ಯದ ಅತೀ ದೊಡ್ಡ ಜಿಲ್ಲೆ ಬೆಳಗಾವಿಯನ್ನು ರಾಜ್ಯ ಸರ್ಕಾರ ವಿಭಜಿಸುವ ಯೋಜನೆ ರೂಪಿಸುತ್ತಿದ್ದು ಜೇನುಗೂಡಿಗೆ ಕೈ ಹಾಕಲು ಹೊರಟಿದೆ. 

ಹಿಂದೊಮ್ಮೆ ಜೆ.ಹೆಚ್.ಪಟೇಲ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆ ವಿಭಜನೆ ಮಾಡಲು ಹೊರಟಾಗ ಭಾರಿ ವಿರೋಧ ವ್ಯಕ್ತವಾಗಿತ್ತು. 14 ತಾಲೂಕುಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಯನ್ನು ಆಡಳಿತಾತ್ಮಕ ದೃಷ್ಠಿಯಿಂದ ವಿಭಜನೆಗೆ ಮುಂದಾಗಿರುವ ಸರ್ಕಾರ ಮೊದಲು ಉಪವಿಭಾಗ ಕೇಂದ್ರಗಳನ್ನು ಜಿಲ್ಲೆಯಾಗಿ ಘೋಷಿಸಬೇಕು. 

3 ಉಪವಿಭಾಗ ಹೊಂದಿರುವ ಬೆಳಗಾವಿ ಜಿಲ್ಲೆಯಲ್ಲಿ ಅತೀ ದೊಡ್ಡ ಉಪವಿಭಾಗ ಕೇಂದ್ರವಾಗಿರುವ ಬೈಲಹೊಂಗಲ 6 ತಾಲೂಕುಗಳನ್ನು ಹೊಂದಿದೆ. 

ಐತಿಹಾಕಸಿವಾಗಿ ಪ್ರಸಿದ್ದಿ ಪಡೆದ ಬೈಲಹೊಂಗಲ ತಾಲೂಕನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸುವಂತೆ ಆಗ್ರಹಿಸಿ ಇಲ್ಲಿನ‌ ಹೋರಾಟಗಾರರು ಸತತ 30 ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ. 

ಕಳೆದ ಬಾರಿ ಜಿಲ್ಲಾ ವಿಭಜನೆ ಸಂದರ್ಭದಲ್ಲಿ ಅಖಂಡ ಬೆಳಗಾವಿ ಜಿಲ್ಲೆಗೆ ಒತ್ತಾಯಿಸಿ ಈ ಭಾಗದಿಂದ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಆಗಿನ ಸರ್ಕಾರ ಯೋಜನೆಯನ್ನು ಕೈಬಿಟ್ಟು ಲಿಖಿತವಾಗಿ ಬೈಲಹೊಂಗಲ ಭಾಗದ ಹೋರಾಟಗಾರರಿಗೆ ಭರವಸೆಯನ್ನು ನೀಡಿತ್ತು. 

ಆದರೆ ಈಗೀನ ಸರ್ಕಾರ ಮತ್ತೆ ಜಿಲ್ಲಾ ವಿಭಜನೆಗೆ ಕೈಹಾಕಿ ಜೇನುಗೂಡಿಗೆ ಕೈ ಹಾಕಿದಂತಾಗಿದೆ. 

30 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿರುವ ಬೈಲಹೊಂಗಲ ಭಾಗದ ಜನರ ಬೇಡಿಕೆ ಒಂದೇ ಅದು ಅಖಂಡ ಬೆಳಗಾವಿ ಜಿಲ್ಲೆ. ಅನಿವಾರ್ಯತೆ ಎದುರಾದರೆ ಉಪವಿಭಾಗ ಕೇಂದ್ರವಾದ ಬೈಲಹೊಂಗಲ ತಾಲೂಕನ್ನು ಮೊದಲು ಜಿಲ್ಲೆಯಾಗಿ ಘೋಷಿಸಲಿ ಇಲ್ಲಾವದಲ್ಲಿ ಉಗ್ರವಾದ ಹೋರಾಟಕ್ಕೂ ಸಿದ್ದ ಎಂದು ಸರ್ಕಾರಕ್ಕೆ ಎಚ್ಚರಿಕೆಯನ್ನು ಕೂಡಾ ರಹವಾನಿಸಿದ್ದಾರೆ.

ವರದಿ  : ರವಿಕಿರಣ್  ಯಾತಗೇರಿ

Read All News