ಬೆಳಗಾವಿ: ಪಂಚ ರಾಜ್ಯ ಚುನಾವಣೆಯ ನಾಲ್ಕು ರಾಜ್ಯದ ಚುನಾವಣೆ ಫಲಿತಾಂಶದಲ್ಲಿ ಮೂವರಲ್ಲಿ ಬಿಜೆಪಿ ಅಭೂತಪೂರ್ವ ಜಯಗಳಿದ್ದು ಮುಂಬರುವ ಲೋಕಸಭಾ ಚುನಾವಣೆಯ ದಿಕ್ಸೂಚಿಯಾಗಲಿದೆ ಎಂದು ಬೆಳಗಾವಿ ಬಿಜೆಪಿ ಉತ್ತರ ಮತಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ಸದಾನಂದ ಗುಂಟೆಪ್ಪನವರ ಹೇಳಿದ್ದಾರೆ.
ಪಂಚರಾಜ್ಯ ಚುನಾವಣೆಯ ರಾಜಸ್ಥಾನ, ಛತ್ತಿಸಗಡ್, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಗ್ಯಾರಂಟಿಗೆ ಜನ ಧಿಕ್ಕರಿಸಿ ಪ್ರಧಾನಿ ನರೇಂದ್ರ ಮೋದಿ ಆಡಳಿದ ವೈಖರಿಗೆ ಮತ ನೀಡಿದ್ದಾರೆ. ಇದು ಮುಂಬರುವ ಲೋಕಸಭಾ ಚುನಾವಣೆಯ ದಿಕ್ಸೂಚಿಯಾಗಲಿದೆ ಈ ಫಲಿತಾಂಶ ಎಂದು ಭವಿಷ್ಯ ನುಡಿದಿದ್ದಾರೆ.