ಪಂಚಮಸಾಲಿ ಶಾಸಕರ ಮನೆಗೆ ಮೀಸಲಾತಿ ಪತ್ರ ಚಳುವಳಿ

  • shivaraj bandigi
  • 5 Jul 2024 , 1:44 PM
  • Belagavi
  • 5114

ಬೆಳಗಾವಿ- 2020 ರ ಅಕ್ಟೋಬರ್ ನಲ್ಲಿ ಪಾದಯಾತ್ರೆ ಮೂಲಕ‌ 2ಎ ಮೀಸಲಾತಿ ಹೋರಾಟ ಪ್ರಾರಂಭ ಆಗಿತ್ತು, ಅದರ ಫಲವಾಗಿ ಪಂಚಸಾಲಿಗಳು ಎಂದು ಹೇಳಿಕೊಳ್ಳುವಷ್ಟು ಜಾಗೃತಿ ಆಗಿದೆ.

ಕೇವಲ‌ ಲಿಂಗಾಯತರು ಎಂದು ಹೇಳಿಕೊಳ್ಳುವ ಜನ ಈಗ ಪಂಚಮಸಾಲಿ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು. 

ಅವರು ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, 2ಎ ಮೀಸಲಾತಿ ಕೇಳಿದ್ದೇವು ಆದರೆ ನಮಗೆ 2 ಡಿ‌‌ ಮೀಸಲಾತಿ ಕೊಟ್ಟರೂ ಸಹ , ಅದು ಅನುಷ್ಠಾನಕ್ಕೆ‌ ಬರಲಿಲ್ಲ.

ಸಿದ್ದರಾಮಯ್ಯ ಸರ್ಕಾರ ಬಂದ‌‌‌‌ ಮೇಲೆಯೂ ಕೂಡಾ ನಾವು ಮನವಿ ಮಾಡಿದ್ದೇವು ಆಗ ನಾನು ಈಗ ಸಿಎಂ ಆಗಿದ್ದೇನೆ ಒಂದು ತಿಂಗಳು ಬಿಟ್ಟು ಮೀಟಿಂಗ್ ಕರೆಯುತ್ತೇನೆ ಎಂದು ಹೇಳಿದ್ದರು. ಆದರೆ ಸಿಎಂ ಸಿದ್ದರಾಮಯ್ಯ ಮೀಟಿಂಗ್ ಕರೆಯಲಿಲ್ಲ.

ಇಷ್ಟಲಿಂಗ ಪೂಜೆ ಮಾಡಿ ಸರ್ಕಾರದ‌ ಗಮನ ಸೆಳೆಯುವ ಪ್ರಯತ್ನವನ್ನು ಮಾಡಲಾಯಿತು ,ಆದರೂ ಸಹ ಸರ್ಕಾರ ಕಣ್ಣಿದ್ದರು ಕುರುಡಾಗಿ ಕಿವಿಯಿದ್ದು ಕಿವುಡಾಗಿದೆ ಎಂದು ಆರೋಪಿಸಿದರು. 

ಸುವರ್ಣಸೌಧದಲ್ಲಿ ಅಧಿವೇಶನ‌ ನಡೆದಾಗಲೂ ಸಿಎಂ ಮತ್ತೆ ಅವಕಾಶ ಕೇಳಿದರು.ಆಗಲೂ ಸಹ ನಾವು ಸರ್ಕಾರಕ್ಕೆ ಸಮಯಾವಕಾಶ ನೀಡಿದ್ದು, ಉಳುವಿಯಲ್ಲಿ ಸಂಕಲ್ಪ ಸಮಾವೇಶ ಮಾಡಿದ್ವಿ.

ಅಲ್ಲಿ ನಮ್ಮ ಜನ 20ಜನ ಶಾಸಕರು ಮುಂಗಾರು ಅಧಿವೇಶನದಲ್ಲಿ ಧ್ವನಿ‌ ಎತ್ತುವಂತೆ ಹೇಳಿದ್ದರು.ನಾವು ಕರ್ನಾಟಕದಲ್ಲಿರುವ ಶಾಸಕರ ಮನೆಗೆ ತೆರಳಿ ಪಂಚಮಸಾಲಿ ಆಗ್ರಹ ಪತ್ರ ಅಂತ ಚಳುವಳಿ ಮಾಡುತ್ತಿದ್ದು, 

ಈಗಾಗಲೇ ವಿನಯ ಕುಲಕರ್ಣಿಯವರ ಮನೆಗೆ ಹೋಗಿ ಒತ್ತಾಯ ಮಾಡಲಾಗಿದೆ.ಅವರು ವಿಡಿಯೋ ಕಾನ್ಪರೆನ್ಸ್ ಮೂಲಕ ಮಾತು ಕೊಟ್ಟ ನಂತರವೇ ಅಲ್ಲಿಂದ‌ ಹೊರ ಬರಲಾಯಿತು. 

ಲಕ್ಷ್ಮೀ ಹೆಬ್ಬಾಳ್ಕರ್, ಬಾಬಾಸಾಹೇಬ್ ಪಾಟೀಲ್ ರಾಜುಗೌಡ ಕಾಗೆ, ಅರವಿಂದ ಬೆಲ್ಲದ್, ಗಣೇಶ್ ಹುಕ್ಕೇರಿ ಸೇರಿ ಎಲ್ಲಾ ಪಂಚಮಸಾಲಿ ಶಾಸಕರ ಮನೆಗೆ ಹೋಗುತ್ತೇವೆ 

ಪಕ್ಷಾತೀತವಾಗಿ ಎಲ್ಲರೂ ಸದನದಲ್ಲಿ ಹೋರಾಟ ಮಾಡಲು ಮುಂದಾಗಬೇಕು. ಸರ್ಕಾರ ಇದಕ್ಕೆ ಕಿವಿಗೊಡಲಿಲ್ಲವಾದರೆ ಮತ್ತೆ ಹೋರಾಟ ಮಾಡುತ್ತೇವೆ ಎಂದರು.

Read All News