ಬೆಳಗಾವಿ :
ಪಂಚಮಸಾಲಿ 2 ಎ ಮೀಸಲಾತಿ ಹೋರಾಟದ ವಿಚಾರದಲ್ಲಿ ಯತ್ನಾಳ ಅವರಿಗೆ ಬೇಸರ ಆಗಿದ್ದು ನಿಜ. ಹೀಗಾಗಿಯೇ ಅವರು ಕಳೆದ ತಿಂಗಳಿನಿಂದ ಹೋರಾಟದಿಂದ ದೂರು ಉಳಿದಿದ್ದರು ಎಂದು ಪಂಚಮಸಾಲಿ ಕೂಡಲಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಸೋಮವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕಾಂಗ್ರೆಸ್ ಶಾಸಕರು ಸಚಿವರು ಭೇಟಿಯಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡುತ್ತಿಲ್ಲ. ಎರಡು ಬಾರಿ ಸಭೆ ಮಾಡುತ್ತೇವೆ ಎಂದು ಅಂತ ಹೇಳಿ ಸಿಎಂ ದೂರ ಉಳಿದಿದ್ದಾರೆ. ಹಲವು ಕಡೆ ನಮ್ಮ ಸಮಾಜದ ಪ್ರತಿಭಟನೆ ಆದಾಗ ಯತ್ನಾಳ ಅವರನ್ನು ನಮ್ಮ ಸಮಾಜದ ಜನ ಕೇಳುತ್ತಿದ್ದರು. ಹೀಗಾಗಿ ಯತ್ನಾಳ ಭೇಟಿಗೆ ಆಗಮಿಸಿ ಅವರು ಬರಬೇಕು ಎಂದು ಹೇಳಿದ್ದೇವೆ.ಅವರೂ ಸಹ ಅದಕ್ಕೆ ಸಹಮತಿ ಸೂಚಿಸಿದ್ದಾರೆ ಅವರು ಹೋರಾಟಕ್ಕೆ ಬರುತ್ತಾರೆ ಎಂದರು.
ಡಿ.13 ನೇ ತಾರೀಕೂ ಚನ್ನಮ್ಮ ವೃತ್ತದಲ್ಲಿ ಸಾವಿರಾರು ಜನರ ನೇತೃತ್ವದಲ್ಲಿ ಪ್ರತಿಭಟನೆ ಆಗುತ್ತದೆ. ಸಿಎಂ ಬಂದು ನಮ್ಮ ಅಳಲು ಕೇಳಬೇಕು.ಇಲ್ಲವಾದರೆ ನಾವೇ ಸುವರ್ಣಸೌಧದತ್ತ ಹೋಗುತ್ತೇವೆ. ಸರಕಾರ ಎನು ಬೇಕಾದರೂ ಮಾಡಲಿ ಎಂದ ಸ್ವಾಮೀಜಿ ಹೇಳಿದರು.