ಬೆಳಗಾವಿ :
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಹೋರಾಟಕ್ಕೆ ಸಂಬಂಧಿಸಿದಂತೆ ಪಕ್ಷಾತೀತವಾಗಿ ಎಲ್ಲ ಶಾಸಕ, ಸಚಿವರ ಜೊತೆಗೆ ಸಭೆಯಾಗಿದೆ. ಸಿಎಂ ಜೊತೆ ಸಭೆ ಬಳಿಕ ಮುಂದಿನ ಹೋರಾಟ ಕೈಗೊಳ್ಳಲಾಗುವುದು ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಹಾಗೂ ಲಿಂಗಾಯತ ಒಳಪಂಗಡಗಳಿಗೆ ಒಬಿಸಿ ಮೀಸಲಾತಿಗಾಗಿ ಸಭೆ ಮಾಡಿದ್ದೇವೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದೇವು.ಸಿಎಂ ಸಹ ಬಜೇಟ್ ಅಧಿವೇಶನದ ನಂತರ ಇದನ್ನ ಚರ್ಚೆ ಮಾಡಿ ಒಂದು ನಿರ್ಧಾರಕ್ಕೆ ಬರುತ್ತೇವೆ ಎಂದಿದ್ದರು. ಈಗಾಗಲೇ ಇಷ್ಠಲಿಂಗ ಪೂಜೆ ಮಾಡುವುದರ ಮೂಲಕ ಸ್ವಾಮೀಜಿ ಹೋರಾಟ ಮಾಡುತ್ತಿದ್ದಾರೆ. ಆದರೆ ಸಿಎಂ ಅವರ ಜತೆಗೆ ಮೀಟಿಂಗ್ ಮಾಡಬೇಕು ಎಂದು ಸಭೆಯಲ್ಲಿ ನಿರ್ಣಯ ಆಗಿದೆ.ಗೆ ಶೀಘ್ರವೇ ಸಭೆ ಮಾಡಿ ಅವರ ನಿರ್ಧಾರದ ಬಗ್ಗೆ ತಿಳಿದುಕೊಳುತ್ತೇವೆ ಎಂದರು.