ಕಾಗವಾಡ: ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನ ಉಗಾರ ಬುದ್ರುಕ್ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕಾಮಗಾರಿ ಮಾಡದೆ ಬಿಲ್ ತೆಗೆದ ಆರೋಪ ಕೇಳಿಬಂದಿದೆ.
ರಸ್ತೆ ರಿಪೇರಿ ಹಾಗೂ ಗೇಟ್, ಕಂಪೌಂಡ್ ನಿರ್ಮಾಣ ಹೆಸರಲ್ಲಿ ನಕಲಿ ಬಿಲ್ ತೆಗೆದು ವಂಚನೆ ಮಾಡಲಾಗಿದೆ ಜಿಲ್ಲಾ ಪಂಚಾಯತ ಹಾಗೂ ತಾಲೂಕು ಪಂಚಾಯತಿ ಅನುದಾನ ದುರ್ಬಳಕೆ ಮಾಡಿ ಕಾಮಗಾರಿ ಮಾಡದೆ ಬಿಲ್ ತೆಗೆದು ಭ್ರಷ್ಟಾಚಾರ ಮಡಲಾಗಿದ ಎಂಬ ಗಂಭೀರ ಆರೋಪ ಬೆನ್ನಲ್ಲೇ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೊದಲೆ ನೆರೆ ಹಾವಳಿ ಒಂದೇಡೆಯಾದರೆ ಈ ಬಾರಿ ಬರ ಗಡಿ ಜನರಿಗೆ ಆತಂಕ ಹುಟ್ಟಿಸಿದೆ ಇದರಲ್ಲಿ ಗ್ರಾಮದ ಸಮಗ್ರ ಅಭಿವೃದ್ಧಿ ಮಂತ್ರ ಸಾರುವ ಅಭಿವೃದ್ಧಿ ಅಧಿಕಾರಿಗಳೆ ಈ ರೀತಿ ಭ್ರಷ್ಟಾಚಾರವೆಸಗಿರೋದು ದುರಂತವಾಗಿದೆ.
ವರದಿ : ರಾಹುಲ್