ಎಸ್ಪಿ ಫೋನ್ ಇನ್ ಕಾರ್ಯಕ್ರಮಕ್ಕೆ ಜನರ ಮೆಚ್ಚುಗೆ

  • 15 Jan 2024 , 2:32 AM
  • Belagavi
  • 189

Hello... ☎️ ನಮಸ್ಕಾರ ರಿ...ನಾನ ಎಸ್ಪಿ ಮಾತಾಡಾತ್ತೇನಿ... 

ಬೆಳಗಾವಿ :ಶನಿವಾರ ಬೆಳಗ್ಗೆ 11 ಗಂಟೆಯಿಂದ ಆರಂಭವಾದ ಫೋನ್ ಇನ್ ಕಾರ್ಯಕ್ರಮದಲ್ಲಿ  ಎಂದಿನಂತೆ ನಮಸ್ಕಾರ್ರಿ.. ನಾನ ಎಸ್ಪಿ ಮಾತಾಡಾತ್ತೇನಿ ಹೇಳ್ರಿ ಎಂದ ಎಸ್ಪಿ ಅವರಿಗೆ, ಬಹುತೇಕ ಜನರು ದೂರವಾಣಿ ಕರೆ ಮಾಡಿ ಸಮಸ್ಯೆ‌ ಹೇಳಿಕೊಂಡರು. ಇದಕ್ಕೆ ಎಸ್ಪಿ‌ ಡಾ. ಸಂಜೀವ ಪಾಟೀಲ ಜನರ ಸಮಸ್ಯೆಯನ್ನು ಆಲಿಸಿ ತ್ವರಿತವಾಗಿ ಬಗೆ ಹರಿಸುವ ಕೆಲಸವನ್ನು ಮಾಡಿದರು.

ಗೋಕಾಕ ತಾಲೂಕಿನ‌ ಬಸವೇಶ್ವರ ವೃತ್ತದಿಂದ‌ ಕೋಟ್೯ ಗೇಟ್ ವರೆಗೆ ಬ್ಯಾರಿಕೆಡ್ ಅಳವಡಿಸುವಂತೆ ಮಹಿಳೆಯೊರ್ವರು ಕೇಳಿಕೊಂಡರು. ಗೋಕಾಕ ಪೊಲೀಸರಿಗೆ ತಿಳಿಸಿ ಅದನ್ನು ಅಳವಡಿಸಲಾಗುವುದು ಎಂದರು.

ನಗರದ ರೈಲ್ವೆ ನಿಲ್ದಾಣದ ಬಳಿ ಇರುವ ಟ್ರಾಫೀಕ್ ಸಿಗ್ನಲ್, ರೈಲ್ವೆ ನಿಲ್ದಾಣದ ಬಳಿ ಇರುವುದೇ ಇಲ್ಲ‌‌. ಆದ್ದರಿಂದ ಇಲ್ಲಿನ ಸಿಗ್ನಲ್ ಕಾರ್ಯನಿರ್ವಹಿಸುತ್ತಿಲ್ಲ ಎಂದು ದೂರಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಎಸ್ಪಿ ಡಾ. ಸಂಜೀವ ಪಾಟೀಲ ನಗರ ಪೊಲೀಸ್ ಇಲಾಖೆಗೆ ತಿಳಿಸಲಾಗುವುದು ಎಂದರು.

ಚಿಕ್ಕೋಡಿಯ ಶಾಲಾ ಆವರಣದ ಹೊರಗಡೆ ತಂಬಾಕು ಹಾಗೂ ಸಿಗರೆಟ್ ಮಾರಾಟ ಮಾಡುತ್ತಾರೆ ಕ್ರಮ ಕೈಗೊಳ್ಳಬೇಕೆಂದು ವ್ಯಕ್ತಿಯೊರ್ವ ಅಳಲು ತೋಡಿಕೊಂಡರು. ಇದಕ್ಕೆ ತತಕ್ಷಣವೆ ದಾಳಿ ನಡೆಸಿ ಬಂದ್ ಮಾಡಿಸಲಾಗುವುದು ಎಂದು ಎಸ್ಪಿ ತಿಳಿಸಿದರು.

ಅಥಣಿ ತಾಲೂಕಿನಿಂದಲೂ ಬಹುತೇಕ ಜನರು ಕರೆ ಮಾಡಿ ಎಸ್ಪಿ ಡಾ. ಸಂಜೀವ ಪಾಟೀಲ ಅವರಿಗೆ ಕರೆ ಮಾಡಿ ಅಕ್ರಮ ಸರಾಯಿ ಮಾರಾಟ ಮಾಡುತ್ತಿದ್ದಾರೆ. ದೇವಸ್ಥಾನದ ಆವರಣದ ಪಕ್ಕದಲ್ಲಿಯೇ ಅಕ್ರಮ ಸರಾಯಿ ಮಾರಾಟ ಮಾಡುತ್ತಿದ್ದಾರೆ ಎಂದು ದೂರಿದರು. ಇವರಿಗೆ ಉತ್ತರಿಸಿದ ಎಸ್ಪಿ ಡಾ. ಸಂಜೀವ ಪಾಟೀಲ ಅವರು, ತತಕ್ಷಣ ಅದರ ಮೇಲೆ‌ ದಾಳಿ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಖಾನಾಪುರ‌ ತಾಲೂಕಿನಲ್ಲಿ ಬಸ್ಸಿನ ಸಮಸ್ಯೆ ಬಗೆ ಹರಿಸಿ. ಇಲ್ಲಿ ಸಾಕಷ್ಟು ಜನರಿಗೆ ತೊಂದರೆಯಾಗುತ್ತಿದೆ ಎಂದು ದೂರಿದರು. ಇದಕ್ಕೆ ಸ್ಪಂದಿಸಿದ ಎಸ್ಪಿ ಕೆಎಸ್ ಆರ್ ಟಿಸಿ ಡಿಸಿ ಅವರೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿದರು.

Read All News