ದೈಹಿಕ ಶಿಕ್ಷಕರೇ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚು : ಮೋಹನ ಜಿರಗ್ಯಾಳ

  • shivaraj bandigi
  • 13 Jan 2024 , 5:42 PM
  • Belagavi
  • 565

ಅಥಣಿ : ವಿದ್ಯಾರ್ಥಿ ಜೀವನದಲ್ಲಿ ಅಚ್ಚುಮೆಚ್ಚಿನ ಶಿಕ್ಷಕ ಎಂದರೆ ಅದು ದೈಹಿಕ ಶಿಕ್ಷಕ, ಏಕೆಂದರೆ ಇವರು ಆಟದ ಮೂಲಕ ಅವರಲ್ಲಿ ಶಿಕ್ಷಣಕ್ಕೆ ಪ್ರೋತ್ಸಾಹವನ್ನು ಉಂಟು ಮಾಡುವ ಕಲೆಯನ್ನು‌ ಹೊಂದಿರುತ್ತಾರೆ ಎಂದು ಚಿಕ್ಕೋಡಿ ವಿಭಗದ ಡಯಟ್ ಪ್ರಾಚಾರ್ಯ ಮೋಹನ ಜಿರಗ್ಯಾಳ ಅವರು ಹೇಳಿದರು.

ಅವರು ತಾಲೂಕಿನ ಸಪ್ತಸಾಗರ ಬನದಲ್ಲಿ ಜಿಲ್ಲಾ ಪಂಚಾಯತ ಬೆಳಗಾವಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಶಾಲಾ ಶಿಕ್ಷಣ ಇಲಾಖೆ ಅಥಣಿ ಹಾಗೂ ದರೂರ ವಲಯದ ಎಲ್ಲ ಪ್ರೌಡಶಾಲೆಗಳ ಸಹಯೋಗದಲ್ಲಿ ಹಮ್ಮಿಕೊಂಡ ತಾಲೂಕಾ ಮಟ್ಟದ ದೈಹಿಕ ಶಿಕ್ಷಣ ಶಿಕ್ಷಕರ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಾ ಪ್ರತಿಯೊಂದು ಶಾಲೆಯು ಸ್ವಚ್ಚವಾಗಿರಲು ದೈಹಿಕ ಶಿಕ್ಷಕರ ಪಾತ್ರ ಅತೀ ಅಮೂಲ್ಯವಾದದ್ದು, ಕಲಿಕೆಯನ್ನು ಮನರಂಜನಾತ್ಮಕವಾಗಿ ಮಾಡಿ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ದಿಯಲ್ಲಿ ದೈಹಿಕ ಶಿಕ್ಷಕರ‌ ಕೊಡುಗೆ ಅಪಾರ ಎಂದರು.

ಕೆಲವು ಶಾಲಾ ಕಾಲೇಜುಗಳಲ್ಲಿ ದೈಹಿಕ ಶಿಕ್ಷಕರ ನೇಮಕ ಮಾಡಿಕೊಳ್ಳುತ್ತಿಲ್ಲ, ಇತರ ಶಿಕ್ಷಕರು ಹಾಗೂ‌ ದೈಹಿಕ ಶಿಕ್ಷಣಕ್ಕೆ ಅಂತರ ಕಾಪಾಡಿಕೊಳ್ಳುತ್ತಿರುವವುದು ಹಾಗೂ‌ ದೈಹಿಕ ಶಿಕ್ಷಣಕ್ಕೆ ಸಮಯವನ್ನು ಹೊಂದಿಸದೇ ಇರುವುದು ದುರದೃಷ್ಠಕರ, ಈ ಎಲ್ಲ ಅಡಚಣೆಗಳ ಮಧ್ಯ ದೈಹಿಕ ಶಿಕ್ಷಕರು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿರುವುದು ಮಾದರಿ ಕಾರ್ಯ ಎಂದರು.

ಅನಂತರ ಕ್ಷೇತ್ರ ಶಿಕ್ಷಣಾಧಿಕಾರಿ ಎಮ್ ಬಿ ಮೊರಟಗಿ, ಎಮ್ ಆರ್ ಹಲಸಂಗಿ ಅವರು ಮಾತನಾಡಿದರು. ಈ ವೇಳೆ‌ ಜುನೇಧಿ ಪಟೆಲ್, ಜಿ ಎಮ್ ಅತ್ತಾರ, ಎಸ್ ಎಮ್ ಪಾಲಬಾಂವಿ, ಶಿವಾನಂದ ಅವರಾದಿ, ಪಾಂಡುರಂಗ ಮದಬಾಂವಿ, ಸಿ ಕೆ ಲಮಾಣಿ, ಸಿ ಜೆ ಗಸ್ತಿ,ವಾಯ್ ಎಸ್ ನಾಯಿಕ, ಚಿದಾನಂದ ಕಾಂಬಳೆ, ಎಸ್ ಬಿ ಕರೋಶಿ, ಶಾಂತಾರಾಮ ಜೋಗಳೆ, ಮದಗೌಡ ಪುಜಾರಿ, ಎಲ್ ಕೆ ತೋರನಗಟ್ಟಿ, ದಾವಲ ಮಕಾನದಾರ, ಉಮೇಶ ಮೇಲಿನಕೇರಿ, ಆರ್ ಎ ಪಾಟೀಲ, ರಾವಸಾಬ ಸಂಗಲಗಿ, ಕೆ ಪಿ ಖೋತ, ಬಿ ಎಸ್ ಕೋಳಿ, ಪಿ ಎನ್ ಆಲಗೂರ, ಬಿ ಎಲ್ ಸಸಾಲಟ್ಟಿ ಸೇರಿದಂತೆ ಅನೇಕರಿದ್ದರು.

Read All News