ಬೆಳಗಾವಿ: ಕರುನಾಡಿನ ಕುವರ ಬೈಲಹೊಂಗಲದಲ್ಲಿ ಜನಿಸಿದ ಅಕ್ಷಯ ಪಾಟೀಲ್ ಅವರನ್ನು ಬೆಳಗಾವಿ ಏರ್ಪೋರ್ಟಿನಲ್ಲಿ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಹಾಗೂ ರಾಜ್ಯ ಮಹಿಳಾ ಕಾಂಗ್ರೆಸಿನ ಉಪಾಧ್ಯಕ್ಷೆ ಶ್ರೀಮತಿ ವೀಣಾ ವಿಜಯಾನಂದ ಕಾಶಪ್ಪನವರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿವರು ಅಕ್ಷಯ ಪಾಟೀಲ ಅವರನ್ನು ನಾವು ಬಾಲ್ಯದಿಂದಲೂ ನೋಡಿದ್ದೇವೆ ನಮಗೆ ಹೆಮ್ಮೆ ಎನಿಸುತ್ತದೆ ನಾವು ದೀಕ್ಷೆಯನ್ನು ಕೊಟ್ಟ ಒಬ್ಬ ಹುಡುಗ ಇವತ್ತು ಪೈಲೆಟ್ ಆಗಿ ಸೇವೆ ಸಲ್ಲಿಸುವ ಮುಖಾಂತರ ಹಾಗೆ ಹುಬ್ಬಳ್ಳಿಯಿಂದ ದೆಹಲಿಯವರೆಗೆ ನಡೆದ ಇಂಡಿಗೋ ವಿಮಾನದಲ್ಲಿ ಉತ್ತರ ಕನ್ನಡದ ಭಾಷೆಯಲ್ಲಿ ಮಾತನಾಡಿ ಎಲ್ಲರ ಮೆಚ್ಚುಗೆ ಪಾತ್ರರಾದ ಅಕ್ಷಯ ಪಾಟೀಲ್ ಇವತ್ತು ಇಡೀ ಕರ್ನಾಟಕದಲ್ಲಿ ಹೆಸರಾಗಿದ್ದಾರೆ ಭಗವಂತ ಇವರಿಗೆ ಇನ್ನೂ ಹೆಚ್ಚಿನ ಶಕ್ತಿಯನ್ನು ಕೊಡಲಿ ಎಂದರು.
ರಾಜ್ಯ ಮಹಿಳಾ ಕಾಂಗ್ರೆಸ್ಸಿನ ಉಪಾಧ್ಯಕ್ಷೆ ಶ್ರೀಮತಿ ವೀಣಾ ಕಾಶಪ್ಪನವರ ಮಾತನಾಡುತ್ತಾ ನಮಗೆ ಹೆಮ್ಮೆ ಎನಿಸುತ್ತದೆ ಉತ್ತರ ಕರ್ನಾಟಕದ ಒಬ್ಬ ಯುವಕ ಕಷ್ಟಪಟ್ಟು ಇವತ್ತು ಪೈಲೇಟ ಆಗಿರುವುದು ಅತಿವ ಸಂತೋಷವನ್ನು ತಂದಿದೆ ಅವರ ತಂದೆ ಬಾಬುರಾವ ತಾಯಿ ಅನ್ನಪೂರ್ಣ ಅವರ ತ್ಯಾಗದ ಪ್ರತಿಫಲ ಇವತ್ತು ಅಕ್ಷಯಪಾಟೀಲ್ ಪೈಲೆಟ್ ಆಗಿರುವುದು ಎಂದು ಅಭಿಮಾನದಿಂದ ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅಕ್ಷಯ ಪಾಟೀಲ್ ಅವರು ನಾವು ಇಡೀ ಮನೆತನ ಹುಕ್ಕೇರಿ ಹಿರೇಮಠದ ಶಿಷ್ಯರಾಗಿ ಸೇವೆಯನ್ನು ಸಲ್ಲಿಸುತ್ತಿದ್ದೇವೆ ನಾನು ಮತ್ತು ನನ್ನ ಧರ್ಮಪತ್ನಿ ಪ್ರಿಯ ಇಂಡಿಗೋ ವಿಮಾನದಲ್ಲಿಯೇ ಸೇವೆಯನ್ನು ಸಲ್ಲಿಸುತ್ತಿದ್ದೇವೆ ಇಬ್ಬರಿಗೂ ಲಿಂಗ ದಿಕ್ಷೆಯನ್ನು ನೀಡಿದ ಗುರುಗಳು ಹುಕ್ಕೇರಿಯ ಚಂದ್ರಶೇಖರ್ ಶಿವಾಚಾರ್ಯ ಸ್ವಾಮಿಗಳು ಅಷ್ಟೇ ಏಕೆ ಜಗದ್ಗುರು ರೇಣುಕಾಚಾರ್ಯ ಜಯಂತಿಯಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಸದ್ಭಾವನ ಪ್ರಶಸ್ತಿಯನ್ನು ನೀಡಿ ಇನ್ನು ಮುಂದೆ ಹೋಗು ಎಂದು ಆಶೀರ್ವದಿಸಿರುವ ಗುರುಗಳು ಹುಕ್ಕೇರಿಯ ಚಂದ್ರಶೇಖರ್ ಶಿವಾಚಾರ್ಯ ಸ್ವಾಮಿಗಳು ಎಂದರು