ಬೆಳಗಾವಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪಿಎಂ-ಕಿಸಾನ್ ಯೋಜನೆಯ ಮುಂದಿನ ಕಂತುಗಳ ನೆರವು ಪಡೆಯಲು ಇ-ಕೆವೈಸಿ ಕಡ್ಡಾಯವಾಗಿದೆ ಮತ್ತು ಇದಕ್ಕೆ 7ಸೆಪ್ಟೆಂಬರ್ 2022 ಕೊನೆಯ ದಿನವಾಗಿದೆ.
ರೈತರೇ ಖುದ್ದಾಗಿ ಇ-ಕೆವೈಸಿ ಮಾಡಿಕೊಳ್ಳಲು ರೈತರು pmkisan.gov.in ಜಾಲತಾಣಕ್ಕೆ ಭೇಟಿ ನೀಡಿ ಫಾರ್ಮರ್ ಕಾರ್ನರ್ ನಲ್ಲಿ ಇ-ಕೆವೈಸಿ ಮಾಡಿಕೊಳ್ಳಬಹುದು ಮತ್ತು ಪಿಎಂ ಕಿಸಾನ್ ಹೆಲ್ಪ್ ಲೈನ್ ನಂಬರ್ 155261 ಮತ್ತು 011-24300606 ಗೆ ಕಾಲ್ ಮಾಡಬಹುದು .
ರೈತರು ಆಧಾರ್ ಸಂಖ್ಯೆಗೆ ನೊಂದಾಯಿಸಿದ ಮೊಬೈಲ್ ಸಂಖ್ಯೆಯನ್ನು ದಾಖಲಿಸಿ ಮೊಬೈಲ್ ಗೆ ಬರುವ ಓ ಟಿ ಪಿ ಗಳನ್ನು ದಾಖಲಿಸಿ ಇ-ಕೆವೈಸಿ ಮಾಡಿಕೊಳ್ಳಬಹುದಾಗಿದೆ.
ಒಂದು ವೇಳೆ ಮೊಬೈಲಗೆ ಓ ಟಿ ಪಿ ಸ್ವೀಕೃತವಾಗದಿದ್ದಲ್ಲಿ ರೈತರು ಸಾಮಾನ್ಯ ಸೇವಾ ಕೇಂದ್ರಗಳಿಗೆ ತೆರಳಿ 15 ರೂ ಶುಲ್ಕ ಪಾವತಿಸಿ ಬಯೋಮೆಟ್ರಿಕ್ ಆಧಾರಿತ ಇ-ಕೆವೈಸಿ ಮಾಡಿಕೊಳ್ಳಬಹುದು.
ರೈತಬಾಂಧವರು ಪಿಎಂ ಕಿಸಾನ್ ಯೋಜನೆಯ ಮುಂದಿನ ಕಂತುಗಳನ್ನು ಪಡೆಯಲು 7 ಸೆಪ್ಟೆಂಬರ್ 2022 ರೊಳಗೆ ಇ-ಕೆವೈಸಿ ಮಾಡಿಕೊಳ್ಳಲು ಜಂಟಿ ಕೃಷಿ ನಿರ್ದೇಶಕರು ಬೆಳಗಾವಿ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.