ಬೆಳಗಾವಿ :ಹೌದು ಬೆಳಗಾವಿಯ ಜನತೆಯಲ್ಲಿ ಹೊಸ ಚೈತನ್ಯ ಮತ್ತು ಹುಮ್ಮಸ್ಸು ತುಂಬಿರುವ ಪ್ರಧಾನಿ ಮೋದಿಯವರ ಆಗಮನ ಮನೆ ಮನೆಯಲ್ಲಿ ಪ್ರತಿ ಯುವಕ ಯುವತಿ ಪ್ರತಿಯೊಬ್ಬರ ಸ್ಟೇಟಸನಲ್ಲಿ ಪ್ರಧಾನಿ ಮೋದಿಯವರಿಗೆ ಬೆಳಗಾವಿಗೆ ವೆಲ್ಕಮ್ ಎನ್ನುವ ಸಂದೇಶ ಹರಿದಾಡುತ್ತಿದೆ.
ಇದರ ಮದ್ಯೆ ಶಾಸಕಿ ಮಂಗಳ ಸುರೇಶ ಅಂಗಡಿ ಮಾಡಿದ ಟ್ವೀಟ್ ಗೆ ಕೋಟ ರಿಟ್ವೀಟ ಮಾಡಿದ ಪ್ರಧಾನಿ
"Looking forward to being among the people of Belagavi tomorrow!" ಹೇಳಿದ್ದಾರೆ.
Looking forward to being among the people of Belagavi tomorrow! https://t.co/8w9vQRR6NG
— Narendra Modi (@narendramodi) February 26, 2023
ಪ್ರಯಾಣಿಕರಿಗೆ ಸುಲಭವಾದ ಜೀವನ ಮತ್ತು ಪ್ರಯಾಣವನ್ನು ಖಾತ್ರಿಪಡಿಸುವುದು, ಪುನರಾಭಿವೃದ್ಧಿಗೊಂಡ ಬೆಳಗಾವಿ ರೈಲು ನಿಲ್ದಾಣವು ಅಮೃತ್ ಕಾಲ್‌ನಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮರು ವ್ಯಾಖ್ಯಾನಿಸುತ್ತದೆ.
ಆಧುನೀಕರಿಸಿದ ರೈಲು ನಿಲ್ದಾಣವು ನೆರೆಯ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳೊಂದಿಗೆ ಕುಂದಾ-ನಗರಿಯ ಸಂಪರ್ಕವನ್ನು ವಿಸ್ತರಿಸುತ್ತದೆ.
ಅನ್ನದಾತರಿಗೆ ಆರ್ಥಿಕವಾಗಿ ಬೆಂಬಲ ನೀಡುವುದು ನಮ್ಮ ರೈತರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶದ ಅವಿಭಾಜ್ಯ ಅಂಗವಾಗಿದೆ.
PM-KISAN ನ 13ನೇ ಕಂತು ರೂ. 8 ಕೋಟಿಗೂ ಅಧಿಕ ಅನ್ನದಾತರಿಗೆ ಅನುಕೂಲವಾಗಲಿರುವ 16,000 ಕೋಟಿ ರೂ.ಗಳನ್ನು ನಾಳೆ ಬಿಡುಗಡೆ ಮಾಡಲಾಗುವುದು.
ಇದು ಪ್ರಧಾನಿ ಮೋದಿಜಿ ಅವರು 'ಜನರ ಸಬಲೀಕರಣ'ದಿಂದ 'ಜನರ ನೇತೃತ್ವದ ಸಬಲೀಕರಣ'ಕ್ಕೆ ಮಾದರಿಯಾಗಿದ್ದಾರೆ ಮಂಗಳ ಅಂಗಡಿ ಹೇಳಿದ್ದಾರೆ.