ಲೋಕಸಭೆಯಲ್ಲಿ ವಿಪಕ್ಷಗಳ ಚಳಿ ಬಿಡಿಸಿದ ಪ್ರಧಾನಿ ಮೋದಿ

  • Krishna Shinde
  • 14 Jan 2024 , 11:25 PM
  • Delhi
  • 230

ದೆಹಲಿ: ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಕುರಿತು ಭಾಷಣ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳ ವಿರುದ್ಧ ಕಿಡಿಕಾರಿದ್ದಾರೆ.

ನಮ್ಮ ಸರ್ಕಾರದ ಮೇಲೆ ದೇಶದ ಜನರ ನಂಬಿಕೆಯನ್ನು ಮತ್ತೆ ಮತ್ತೆ ತೋರಿಸಲಾಗಿದೆ - ದೇಶದ ಕೋಟ್ಯಂತರ ಜನರಿಗೆ ನನ್ನ ಕೃತಜ್ಞತೆಯನ್ನು ತೋರಿಸಲು ನಾನು ಇಲ್ಲಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಒಂದು ರೀತಿಯಲ್ಲಿ ಹೇಳುವುದಾದರೆ, ಪ್ರತಿಪಕ್ಷಗಳ ವಿಶ್ವಾಸವಿಲ್ಲದಿರುವುದು ನಮಗೆ ಯಾವಾಗಲೂ ಅದೃಷ್ಟ. 2024 ರ ಚುನಾವಣೆಯಲ್ಲಿ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು, ಜನರ ಆಶೀರ್ವಾದದೊಂದಿಗೆ ಎನ್‌ಡಿಎ ಮತ್ತು ಬಿಜೆಪಿ ಮಹಾ ವಿಜಯದೊಂದಿಗೆ ಮತ್ತೆ ಬರಲಿದೆ ಎಂದು ಪ್ರಧಾನಿ ಮೋದಿ “NoConfidenceMotionDebate”ಗೆ ಉತ್ತರಿಸಿದ್ದಾರೆ.

ನಮ್ಮ ಗಮನವು ದೇಶದ ಅಭಿವೃದ್ಧಿಯತ್ತ ಇರಬೇಕು,ಇದು ಇಂದಿನ ಅಗತ್ಯವಾಗಿದೆ. ನಮ್ಮ ಯುವಕರು ಕನಸುಗಳನ್ನು ನನಸಾಗಿಸುವ ಶಕ್ತಿ ಹೊಂದಿದ್ದಾರೆ.ನಾವು ಭ್ರಷ್ಟಾಚಾರ ಮುಕ್ತ ಸರ್ಕಾರ, ಆಕಾಂಕ್ಷೆಗಳನ್ನು ನೀಡಿದ್ದೇವೆ ಮತ್ತು ದೇಶದ ಯುವಕರಿಗೆ ಅವಕಾಶಗಳನ್ನು ನೀಡಿದ್ದೇವೆ ಎಂದು ಪ್ರಧಾನಿ ಹೇಳಿದ್ದಾರೆ.

ನಾವು ಭಾರತದ ಕೀರ್ತಿಯನ್ನು ಎತ್ತರಕ್ಕೆ ಕೊಂಡೊಯ್ದಿದ್ದೇವೆ ಆದರೆ ಜಗತ್ತಿನಲ್ಲಿ ನಮ್ಮ ದೇಶದ ಘನತೆಗೆ ಕಳಂಕ ತರಲು ಕೆಲವರು ಪ್ರಯತ್ನಿಸುತ್ತಿದ್ದಾರೆ ಆದರೆ ಇಂದು ಭಾರತದ ಮೇಲೆ ವಿಶ್ವದ ನಂಬಿಕೆ ಹೆಚ್ಚುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಈ ಅವಿಶ್ವಾಸ ಗೊತ್ತುವಳಿಯಲ್ಲಿನ ಕೆಲವು ವಿಷಯಗಳು ತುಂಬಾ ವಿಚಿತ್ರವಾಗಿದ್ದು, ಹಿಂದೆಂದೂ ಕೇಳಿಲ್ಲ ಅಥವಾ ನೋಡಿಲ್ಲ, ಊಹಿಸಲೂ ಇಲ್ಲ ಎಂದು ಪ್ರಧಾನಿ ಹೇಳಿದ್ದಾರೆ.

ಕೆಲವು ವಿರೋಧ ಪಕ್ಷಗಳು ಅವರಿಗೆ ಪಕ್ಷವು ರಾಷ್ಟ್ರಕ್ಕಿಂತ ಮೇಲಿದೆ ಎಂದು ಸಾಬೀತುಪಡಿಸಿದೆ. ನೀವು ಬಡವರ ಹಸಿವಿನ ಬಗ್ಗೆ ಕಾಳಜಿ ವಹಿಸುವುದಿಲ್ಲ ಆದರೆ ಅಧಿಕಾರದ ಹಸಿವು ನಿಮ್ಮ ಮನಸ್ಸಿನಲ್ಲಿದೆ ಎಂದು ನಾನು ಭಾವಿಸುತ್ತೇನೆ ಎಂದು ಪ್ರಧಾನಿ ವಿರೋಧ ಪಕ್ಷಗಳ ಕಾಲೆಳಿದಿದ್ದರೆ.

"ವಿಪಾಕ್ಷ್ ಕೆ ಲೋಗೋನ್ ಕೋ ಏಕ್ ಸೀಕ್ರೆಟ್ ವರ್ದಾನ್ ಮಿಲಾ ಹುವಾ ಹೈ ಕಿ ಜಿಸ್ಕಾ ಭಿ ಯೇಲೋಗ್ ಬುರಾ ಚಾಹೆಂಗೆ ಉಸ್ಕಾ ಭಲಾ ಹಿ ಹೋಗಾ" (ವಿಪಕ್ಷಗಳಿಗೆ ಒಂದು ವರಧಾನ ಸಿಕ್ಕಿದೆ,ವಿಪಕ್ಷಿಗಳು ಇನ್ನೊಬ್ಬರ ಬಗ್ಗೆ ಎಷ್ಟು ಕೆಟ್ಟದನ್ನು ಬಯಸುವರೋ ಅಷ್ಟು ಇನ್ನೊಬ್ಬರಿಗೆ ಒಳ್ಳಯದೆ ಆಗುತ್ತದೆ) ಎಂದು ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳ ಹಾಸ್ಯ ಮಾಡಿದ್ದಾರೆ.

2024 ರ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ, ಬಿಜೆಪಿ ಎಲ್ಲಾ ದಾಖಲೆಗಳನ್ನು ಮುರಿದು ಭವ್ಯ ವಿಜಯದೊಂದಿಗೆ ಮರಳುತ್ತದೆ ಎಂದು ನೀವು ನಿರ್ಧರಿಸಿದ್ದೀರಿ ಎಂದು ಪ್ರಧಾನಿ ಹೇಳಿದ್ದಾರೆ .

Read All News