ಹುಕ್ಕಾ ಬಾರ್ ಅಂಗಡಿಗಳ ಮೇಲೆ ಪೊಲೀಸರ ದಾಳಿ

  • shivaraj bandigi
  • 13 Mar 2024 , 5:37 PM
  • Belagavi
  • 550

ಬೆಳಗಾವಿ: ರಾಜ್ಯದಲ್ಲಿ ಹುಕ್ಕಾ ಬಾರ್ ನಿಷೇಧವಾಗಿದ್ದರೂ ನಗರದಲ್ಲಿ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾನೂನು ಬಾಹೀರವಾಗಿ ತಂಪಾಕು ಉತ್ಪನಗಳ ಹುಕ್ಕಾ ಬಾರ್ ಅಂಗಡಿಗಳ ಮೇಲೆ ಪೊಲೀಸರು ದಾಳಿ ನಡೆಸಿ 2,56,600 ರೂ.ಮೌಲ್ಯದ ವಿವಿಧ ಕಂಪನಿಯ ಹುಕ್ಕಾ ಹಾಗೂ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ‌. ಕೇಂದ್ರ ಸರಕಾರದಿಂದ ನಿಷೇಧವಾಗಿರುವ ಹುಕ್ಕಾ ಬಾರ್ ಹಾಗೂ ತಂಬಾಕು ಉತ್ಪನ್ನದ ಅಂಶಗಳನ್ನು ಯಾವುದೇ ಲೈಸನ್ಸ್ ಇಲ್ಲದೆ, ಎಲ್ಲಿಂದಲೋ ತಂದು ಗ್ರಾಹಕರಿಗೆ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಕಾನೂನು ಸುವ್ಯವಸ್ಥೆಯ ಡಿಸಿಪಿ ರೋಹನ್ ಜಗದೀಶ್ ಮಾರ್ಗದರ್ಶನದಲ್ಲಿ ಮಾಳಮಾರುತಿ, ಮಾರ್ಕೇಟ್ ಹಾಗೂ ಟಿಳಕವಾಡಿ ಪೊಲೀಸರು ಹುಕ್ಕಾ ಬಾರ್ ಮಳಿಗೆಯ ಮೇಲೆ ದಾಳಿ ಮಾಡಿದ್ದಾರೆ. ದಾಳಿಯ ವೇಳೆ 75,500 ರೂ. ಮೌಲ್ಯದ ವಿವಿಧ ಕಂಪನಿಯ 126 ಹುಕ್ಕಾಗಳು, 62 ಸಾವಿರ ಮೌಲ್ಯದ ವಿವಿಧ ಕಂಪನಿಯ 51 ರೋಲ್ ಪೇಪರ್, 15,500 ರೂ. ಮೌಲ್ಯದ 30 ವಿವಿಧ ಕಂಪನಿಯ ಚಾರ್ಕಕೋಲ್, 20,300 ರೂ. ಮೌಲ್ಯದ ವಿವಿಧ ಕಂಪನಿಯ 120 ಬಾಂಗ್ ಪೈಪ್ ಗಳು, 41,500 ರೂ. ಮೌಲ್ಯದ 25 ಪಾಕೀಟ್ ವಿದೇಶಿ ಸಿಗರೆಟ್, 25,300 ರೂ. ಮೌಲ್ಯದ ವಿವಿಧ ಕಂಪನಿಯ ತಂಬಾಕಿನ ಪಾಕೆಟ್ ಸೇರಿದಂತೆ 16, 500 ರೂ. ಮೌಲ್ಯದ ವಿವಿಧ ಕಂಪನಿಯ ಪ್ಲೇವರ್ಸ್ ಪಾಕೆಟ್ ಗಳು ಒಟ್ಟು 2,56,600ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡು, ಮಂಗಳೂರು ಮೂಲದ ಅನಗೋಳದ ರಹವಾಸಿಗಳಾದ ಅಬುಬಕ್ಕರ ಜೈನಾಭಾ ಸಿದ್ಧಿಕ್ (31) ಹಾಗೂ ಶಬಾಬ್ ಶಕೀಲ್ ಅಹ್ಮದ (22) ಆರೋಪಿಯನ್ನು ಬಂಧಿಸಿದ್ದಾರೆ‌. ಕಾರ್ಯಾಚರಣೆಯಲ್ಲಿ ಎಸಿಪಿ ಸದಾಶಿವ ಕಟ್ಟಿಮನಿ, ಕಪೀಲ್ ದೇವ ಭಾಗವಹಿಸಿದ್ದರು

Read All News