ಪೊಲೀಸ್ ಸೇವೆ ಎಂದೂ ಮರೆಯಲು ಸಾಧ್ಯವಿಲ್ಲ: ಜಿಲ್ಲಾ ಸತ್ರ ನ್ಯಾಯಾಧೀಶ ಮುಸ್ತಫಾ

  • 14 Jan 2024 , 9:58 PM
  • Belagavi
  • 122

ಬೆಳಗಾವಿ: ಪೊಲೀಸ್ ಕೆಲಸ ಜವಾಬ್ದಾರಿಯ ಕೆಲಸ. ಎಲ್ಲ ರೀತಿಯ ಕೆಲಸದಲ್ಲಿಯೂ ಮಂಚೂಣಿಯಲ್ಲಿರುತ್ತಾರೆ ಎಂದು‌ ಬೆಳಗಾವಿ ‌ಜಿಲ್ಲಾ ಸತ್ರ ನ್ಯಾಯಾಧೀಶ ಮುಸ್ತಫಾ ಅಜೀಜ್ ಹೇಳಿದರು.

ಶುಕ್ರವಾರ ನಗರದ ಜಿಲ್ಲಾ ಪೊಲೀಸ್ ಕ್ರೀಡಾಂಗಣದಲ್ಲಿ ಪೊಲೀಸ್ ಹುತಾತ್ಮ ದಿನಾಚರಣೆಯಲ್ಲಿ ಮಾತನಾಡಿದರು. 21 ಅ. 1959ರಲ್ಲಿ ದೇಶದ ಸೇನೆಯ ಗಡಿಯಲ್ಲಿ ನಡೆದ ಘಟನೆಯಲ್ಲಿ 9 ಜನ ಸೈನಿಕರು ಪ್ರಾಣವನ್ನು ಕಳೆದುಕೊಂಡು ಹುತಾತ್ಮರಾದರು.

ಜತೆಗೆ ಸಾಕಷ್ಟು ಸಿಬ್ಬಂದಿಗಳಿಗೆ ಗಾಯಗೊಂಡಿದ್ದರು. ಈ ಒಂದು ದಿನವನ್ನು ದೇಶದ್ಯಾಂತ ಪೊಲೀಸರ ಹುತಾತ್ಮ ದಿನಾಚಾರಣೆ ಎಂದು ಮಾಡಿಕೊಂಡು ಬರುತ್ತಿದ್ದೇವೆ ಎಂದರು.

ಕೇವಲ ಕಾನೂನು ಸುವ್ಯವಸ್ಥೆ ಕಾಪಾಡುವುದು ಮಹತ್ವದ ಜವಾಬ್ದಾರಿ ಪೊಲೀಸರ ಮೇಲಿದೆ. ಈ ಜವಾಬ್ದಾರಿಯನ್ನು ನಮ್ಮ ಪೊಲೀಸರು ಸಮರ್ಥವಾಗಿ ನಿಭಾಯಿಸಿಕೊಂಡು ಬಂದಿದ್ದಾರೆ.

ಕೆಲವೊಂದು ಸಲ ಗಂಭೀರ ಸ್ವರೂಪದ ಪಡೆದುಕೊಳ್ಳುತ್ತದೆ ಎಂದ ಅವರು, ದೇಶದ, ಸಮಾಜದ ಸುರಕ್ಷತೆಗಾಗಿ ಪ್ರಾಣವನ್ನು ತೆತ್ತಿರುವ ಉದಾರಣೆ ಇದೆ.

ಸಮಾಜದಲ್ಲಿರುವ ಸಾಕಷ್ಟು ವಿಷಯಗಳ ಬಗ್ಗೆ ನೋಡಿಕೊಳ್ಳುವ ಜವಾಬ್ದಾರಿ ಪೊಲೀಸ್ ಇಲಾಖೆಯ ಮೇಲೆ ಇದೆ. ಅದನ್ನು ನಿಭಾಯಿಸುತ್ತಿದ್ದಾರೆ. ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹುತಾತ್ಮರಾದವರ ಸೇವೆಯನ್ನು ಎಂದಿಗೂ ಮರೆಯುವುದಿಲ್ಲ ಎಂದು ಸ್ಮರಿಸಿದರು.

Read All News