ದೇಶದ ಹೆಮ್ಮೆಯ ನಾಗರಿಕರಿಗೆ ಸುರಳಿತವಾಗಿ ರಾಷ್ಟ್ರಧ್ವಜಗಳನ್ನು ತಲುಪಿಸಲು ದೇಶಾದ್ಯಂತ ಅಂಚೆ ಕಚೇರಿಗಳಲ್ಲಿ ರಾಷ್ಟ್ರಧ್ವಜಗಳನ್ನು 25 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.
ಹೆಚ್ಚಿನ ಸಂಖ್ಯೆಯ ನಾಗರಿಕರು ಅಂಚೆ ಕಚೇರಿಯ ಆನ್ಲೈನ್ ಪೋರ್ಟಲ್ ಪೋಸ್ಟ ಆಫೀಸ್ ಆನ್ಲೈನ್ 🇮🇳ನಿಂದ ರಾಷ್ಟ್ರಧ್ವಜಕ್ಕಾಗಿ ಬೇಡಿಕೆ ಸಲ್ಲಿಸುತ್ತಿದ್ದಾರೆ .
ಅಂಚೆ ಇಲಾಖೆಯು ವಿತರಣಾ ಶುಲ್ಕ ಪಡೆಯದೇ ಧ್ವಜಗಳನ್ನು ದೇಶದ ಯಾವುದೇ ಭಾಗಕ್ಕೆ ವಿತರಣೆ ಮಾಡುತ್ತಿದೆ. ಆನ್ ಲೈನ್ ಮೂಲಕ ಬೇಡಿಕೆ ಸಲ್ಲಿಸುವ ನಾಗರಿಕರು 2022 ರ ಆಗಸ್ಟ್ 12 ರ ಮಧ್ಯ ರಾತ್ರಿಯೊಳಗಾಗಿ ಮುಂಗಡ ಕಾಯ್ದಿರಿಸಿದರೆ ಸೂಕ್ತ ಸಮಯಕ್ಕೆ ವಿತರಣೆ ಮಾಡುವುದನ್ನು ಖಚಿತಪಡಿಸಿಕೊಳ್ಳಬಹುದು ಎಂದು ಹೇಳಿದೆ .