ಬೆಳಗಾವಿ :ಸುವರ್ಣ ವಿಧಾನಸೌಧದಲ್ಲಿ ನಡೆಯುವ ಚಳಿಗಾಲ ಅಧಿವೇಶನದಲ್ಲಿ ಕೃಷಿ ಸಮಸ್ಯೆಗೆ ಪರಿಹಾರ ನೀಡುವುದರೊಂದಿಗೆ ಕೊರೊನಾದಲ್ಲಿ ಮೃತಪಟ್ಟ ಕುಟುಂಬಕ್ಕೆ ಪರಿಹಾರ ಕೊಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡ ಪ್ರಕಾಶ ನಾಯಕ ಒತ್ತಾಯಿಸಿದರು.
ಮಂಗಳವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಅಧಿವೇಶನದ ಸಂದರ್ಭದಲ್ಲಿ ದುಂದುವೆಚ್ಚ ಕಡಿವಾಣ ಹಾಕುವಲ್ಲಿ ಶಾಸಕ, ಸಚಿವರು ಖಾಸಗಿ ಹೋಟೆಲ್ ನಲ್ಲಿ ವಾಸ್ತವ್ಯ ಹೂಡುವ ಬದಲು ಹಳ್ಳಿಯ ರೈತರ ಮನೆಯಲ್ಲಿ ವಾಸಿಸಬೇಕು ಎಂದರು.
ಅನಾವಶ್ಯಕವಾಗಿ ದುಂದುವೆಚ್ಚ ಮಾಡುವುದನ್ನು ಬಿಟ್ಟು ಈ ಸಾರಿಯಾದರೂ ನಮ್ಮ ಪ್ರೀತಿ ಗೌರವ ಆದಿತ್ಯವನ್ನು ಎಲ್ಲಾ ಜನಪ್ರತಿನಿಧಿಗಳಿಗೆ ಮತ್ತು ಉನ್ನತ ಅಧಿಕಾರಿಗಳಿಗೆ ರೈತರ ಮನೆಯಲ್ಲಿ ವಾಸ್ತವ್ಯ ಹೂಡಿ ನಮ್ಮ ಆದಿತ್ಯ ಸ್ವೀಕರಿಸಬೇಕು ಎಂದರು.