ಬೆಳಗಾವಿ ಉತ್ತರದಲ್ಲಿ ವಿಭಿನ್ನ ರೀತಿಯಲ್ಲಿ ಮತ ಯಾಚಿಸಿದ ಪ್ರವೀಣ

  • Krishna Shinde
  • 15 Jan 2024 , 1:57 AM
  • Bengaluru
  • 197

ಬೆಳಗಾವಿ: ಬೆಳಗಾವಿ ಉತ್ತರ ಮತ ಕ್ಷೇತ್ರದಲ್ಲಿ ವಿಭಿನ್ನ ರೀತಿಯಲ್ಲಿ ಮತ ಯಾಚಿಸುತ್ತಿರುವ ಪ್ರವೀಣ ಹಿರೇಮಠ ಮನೆ ಮನೆಗೆ ತೆರೆಳಿ ಗುರು ಹಿರಿಯರನ್ನು ಭೇಟಿಯಾಗಿ ಮತಯಾಚಿಸುತಿದ್ದಾರೆ.

ಗಾಲಿ ಜನಾರ್ಧನ ರೆಡ್ಡಿಯವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಪ್ರವೀಣ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಪ್ರಣಾಳಿಕೆ ಮತ್ತು ಅದರ ಮುಂದಿನ ಯೋಜನೆಗಳ ಬಗ್ಗೆ ತಿಳಿಹೇಳಿ ಮತಯಾಚಿಸಿದ್ದಾರೆ.

ಇನ್ನು ಐಟಿ ಬಿಟಿ ಫುಲ್ ಹೈಲೈಟ್ ಮಾಡಿದ ಪ್ರವೀಣ ಮುಂಬರುವ ದಿನಗಳಲ್ಲಿ ಬೆಳಗಾವಿಯಲ್ಲಿ ಐಟಿ ಬಿಟಿ ಹಾಗು ಅನೇಕ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದಾರೆ.

ಇನ್ನು NRI ಕ್ಯಾಂಡಿಡೇಟ ಎಂದೇ ಪ್ರಖ್ಯಾತಿ ಪಡೆದಿರುವ ಪ್ರವೀಣ ತಮ್ಮ ವಿಚಾರ ಧಾರೆ ಮತ್ತು ನಡೆ ನುಡಿಗಳ ಮೂಲಕ ಜನ ಮನ ಗೆಲ್ಲುತ್ತಿರುವ ಪ್ರವೀಣ ಮತಾಧಾನ ನಿಮ್ಮದು ಅಭಿವೃದ್ಧಿ ನಮ್ಮದು ಎಂದು ಹೇಳಿ ತಮ್ಮ ಪಕ್ಷದ ಚಿನ್ಹೆ ಫುಟ್ಬಾಲ ಹಾಗು ಕ್ರಮ ಸಂಖ್ಯೆ 6ಕ್ಕೆ ಮತ ಚಲಾಯಿಸುವಂತೆ ಮತದಾರರಲ್ಲಿ ಕೋರಿದ್ದಾರೆ.

Read All News