ಬೆಳಗಾವಿ : ಗಾಲಿ ಜನಾರ್ಧನ ರೆಡ್ಡಿಯವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಪ್ರವೀಣ ಹಿರೇಮಠ ಇಂದು ಬೆಳಗಾವಿ ಉತ್ತರದ ಕಣಬರ್ಗಿ,ರಾಮತೀರ್ಥ ನಗರ್ ,ಸಧಾಶಿವನಗರ್ ,ಹನುಮಾನ್ ನಗರ್ ,ಶಿವಬಸವ ನಗರ್ ,ನೆಹರು ನಗರ್ ,ವಿಶ್ವೇಶ್ವರಯ್ಯ ನಗರ್ ,ಗ್ಯಾಂಗವಾಡಿ ಹಾಗು ಟಿವಿ ಸೆಂಟರ್ ಮತ್ತು ಮುಂತಾದ ನಗರಗಳಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ.
ಕೆಆರಪಿಪಿಯ ಪ್ರಣಾಳಿಕೆ ಹಾಗು ತಮ್ಮ ಮುಂದಿನ ಯೋಜನೆಗಳನ್ನು ನಿವಾಸಿಗಲ್ಲಿ ತಿಳಿಹೇಳುತ್ತ ಪ್ರಚಾರ ನಡೆಸುತ್ತಿರುವ ಪ್ರವೀಣ ಜನ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.
ಗುರುಹಿರಿಯರನ್ನು ಕಾಲ್ನಡಿಗೆಯಲ್ಲೇ ಭೇಟಿಯಾಗಿ ಪ್ರಚಾರ ನಡೆಸುತ್ತಿರುವ ಪ್ರವೀಣ ಪಕ್ಷವನ್ನು ಮತ್ತಷ್ಟು ಗಟ್ಟಿ ಗೊಳಿಸುತ್ತಿರುವುದಾಗಿ ತಿಳಿಸಿದ್ದಾರೆ.
ಐಟಿ ಬಿಟಿ ಹಾಗು ಬೆಳಗಾವಿ ಉತ್ತರದ ಬಗ್ಗೆ ಅನೇಕ ಕನಸು ಕಂಡಿರುವುದಾಗಿ ತಿಳಿಸಿದ ಪ್ರವೀಣ ತಮ್ಮ ಪಕ್ಷದ ಪರ ಅಬ್ಬರಿಯಿಂದ ಪ್ರಚಾರ ನಡೆಸಿದ್ದಾರೆ.
ತನ್ನ ಮುಖ್ಯ ಗುರಿಗಳನ್ನು ಕೂಡ ಹಂಚಿಕೊಂಡಿರುವ ಪ್ರವೀಣ್
1)ಐಟಿ, ಬಿಟಿ ಕಂಪನಿಗಳನ್ನು ಒಂದೇ ವರ್ಷದಲ್ಲಿ ಬೆಳಗಾವಿಗೆ ತರುವುದು.
2) ಪ್ರತಿಯೊಂದು ವಾರ್ಡನಲ್ಲಿ ವೈದ್ಯಕೀಯ ಕೇಂದ್ರಗಳನ್ನು ಸ್ಥಾಪಿಸುವುದು.
3) ಬೆಳಗಾವಿಯನ್ನು ಮೆಟ್ರೋಪೋಲಿಟಿಯನ್ ಸಿಟಿ ಆಗಿ ಪರಿವರ್ತಿಸಲಾಗುವುದು
4) ಪರಿಸರವನ್ನು ಸಂರಕ್ಷಿಸುವುದಕ್ಕೆ ಹೆಚ್ಚಿನ ಆಧ್ಯತೆ ಕೊಡುವುದು ಎಂದು ತಿಳಿಸಿದ್ದಾರೆ.