ಬೆಳಗಾವಿ : ಪಾಲಿಟಿಕ್ಸನಲ್ಲಿ ಹೊಸ ಭರವಸೆ ಮತ್ತು ಹುಮ್ಮಸ್ಸಿನೊಂದಿಗೆ ಮುನ್ನುಗ್ಗುತ್ತಿರುವ ಪ್ರವೀಣ ಬಸವರಾಜ ಹಿರೇಮಠ ತಮ್ಮ ಮನದಾಳದ ಮಾತು ಹಂಚಿಕೊಂಡಿದ್ದಾರೆ.
ದೇಶ ವಿದೇಶ ಸುತ್ತಿರುವ ಪ್ರವೀಣ ಹಿರೇಮಠ ಅವರು ಒಬ್ಬ ಮರ್ಚೆಂಟ್ ನೆವಿ ಆಫೀಸರ ಆಗಿದ್ದರೂ ಕೂಡ ತಮ್ಮ ನಾಡಿನ ಒಳಿತಗಾಗಿ ಹಾಗು ಹೊಸ ಬದಲಾವಣೆಯನ್ನು ತಂದೆ ತರುತ್ತೇನೆ ಎಂದು ಶಪಥ ಮಾಡಿರುವುದಾಗಿ ತಿಳಿಸಿದ್ದಾರೆ.
ಬೆಳಗಾವಿ ಜನತೆಯೊಂದಿಗೆ ತಮ್ಮ ಮಾತುಗಳನ್ನು ಹಂಚಿಕೊಂಡ ಪ್ರವೀಣ , ಬೆಳಗಾವಿಯಲ್ಲಿ ಐಟಿ ಬಿಟಿ ಹಾಗು ಹೊಸ ಉದ್ಯೋಗಗಳನ್ನು ಸೃಷ್ಟಿವುದಾಗಿ ಮತ್ತು ಬೆಳಗಾವಿ ಉತ್ತರದ ಪ್ರಶ್ನೆಗಳಿಗೆ ಉತ್ತರವಾಗಿ ಇರುತ್ತೇನೆ ಎಂದು ಪ್ರವೀಣ ಹೇಳಿದ್ದಾರೆ.
ಸರ್ವರಿಗೂ ಸಮ ಬಾಳು ಸರ್ವರಿಗೂ ಸಮ ಪಾಲು ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಮುನ್ನುಗ್ಗುತ್ತಿದ್ದು ಪ್ರತಿ ನಾಗರಿಕರು ಆಶಿರ್ವಾದಿಸಲು ಕೋರಿದ್ದಾರೆ.