ವಿಶ್ವ ಯೋಗ ದಿನದ ಕುರಿತು ಮಾತನಾಡಿದ ಪ್ರವೀಣ ಹಿರೇಮಠ

  • Krishna Shinde
  • 15 Jan 2024 , 2:58 AM
  • Belagavi
  • 259

ಬೆಳಗಾವಿ : ಅಂತರಾಷ್ಟ್ರೀಯ ಯೋಗ ದಿನದ ಬಗ್ಗೆ ಮಾತುಗಳನ್ನು ಹಂಚಿ ಕೊಂಡಿರುವ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಪ್ರವೀಣ್ ಹಿರೇಮಠ ಯೋಗಾಭ್ಯಾಸದ ಮಹತ್ವ ಮತ್ತು ಅದರ ಮಾನವನ ಜೀವನ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಕೆಲ ಮಾತುಗಳನ್ನು ಹಂಚಿಕೊಂಡಿದ್ದಾರೆ. 

ಯೋಗದ  ಮಹತ್ವವನ್ನು ವಿಶ್ವಸಂಸ್ಥೆಯ ಮುಂದೆ ಇಟ್ಟ ಪ್ರಧಾನಿ ಮೋದಿಯವರು ಯೋಗಕ್ಕೆ ಒಂದು ದಿನ ಘೋಷಿಸಲು ವಿಶ್ವಸಂಸ್ಥೆ ಮುಂದೆ ಕೇಳಿಕೊಂಡಿದ್ದರು ಅದರಂತೆ ವಿಶ್ವಸಂಸ್ಥೆ ಜೂನ್ 21ನ್ನು ಅಂತಾರಾಷ್ಟ್ರೀಯ ಯೋಗ ದಿನ ಎಂದು ಘೋಷಿಸಿ ಯೋಗದ  ಮಹತ್ವವನ್ನು ಇಡೀ ಜಗತ್ತಿಗೆ ಸಾರಿತು ಎಂದು ಪ್ರವೀಣ್ ಹೇಳಿದ್ದಾರೆ.

ಯೋಗ ನಮ್ಮ ಪೂರ್ವಜರು ನೀಡಿರುವ ಒಂದು ಅತುಮುಲ್ಯ ಕೊಡುಗೆ ಮತ್ತು ನಾವು ಪ್ರತಿಯೊಬ್ಬರು ಯೋಗದಿಂದ ನಮ್ಮ ಜೀವನ ಶೈಲಿಯನ್ನು ಬದಲಿಸಿಕೊಳ್ಳಬೇಕು ಎಂದು ಪ್ರವೀಣ್ ಹೇಳಿದ್ದಾರೆ.

Read All News