ಬೆಳಗಾವಿ ಉತ್ತರದಲ್ಲಿ ಬಿರುಸಿನ ಪ್ರಚಾರ ನಡೆಸಿದ ಪ್ರವೀಣ ಹಿರೇಮಠ

  • Krishna Shinde
  • 14 Jan 2024 , 11:15 PM
  • Belagavi
  • 202

ಬೆಳಗಾವಿ : ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಪ್ರವೀಣ ಹಿರೇಮಠ ಇಂದು ಬೆಳಗಾವಿ ಉತ್ತರದ ಆಂಜನೇಯ ನಗರ,ಮಹಾಂತೇಶ್ ನಗರ ಹಾಗೂ  ವಂಟಮುರಿ ಕಾಲೋನಿಯಲ್ಲಿ  ಬಿರುಸಿನ ಪ್ರಚಾರ ನಡೆಸಿದ್ದಾರೆ.

ಬೆಳಗಾವಿ ಉತ್ತರದ ಪ್ರತಿ ಮನೆ ಮನೆಗೆ ತೆರೆಳಿ ತಮ್ಮ ಪಕ್ಷದ ಬಗ್ಗೆ ಹೇಳಿ ಮತ ಯಾಚಿಸುತ್ತಿರುವ ಪ್ರವೀಣ ಫುಟ್ಬಾಲ್ ಚಿಹ್ನೆಗೆ ಮತ ಹಾಕಿ ತಮ್ಮ ಪಕ್ಷವನ್ನು ಬೆಂಬಲಿಸುವಂತೆ ಕೇಳಿಕೊಂಡಿದ್ದಾರೆ.

ಉತ್ತರದ ನಿವಾಸಿಗಳೊಂದಿಗೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡ ಪ್ರವೀಣ NRE ಆಗಿ ಕೆಲಸ ಮಾಡಿ 86 ದೇಶ ಸುತ್ತಿ ಅಲ್ಲಿಯ ಅಭಿವೃದ್ಧಿ ನೋಡಿ ನಮ್ಮ ಬೆಳಗಾವಿಯನ್ನು ಅದೆ ತರಹ ಅಭಿವೃದ್ಧಿ ಮಾಡಬೇಕು ಎಂದು ಆಸೆ ಹೊತ್ತು ಬಂದಿರುವ ನನಗೆ ಬೆಳಗಾವಿ ಉತ್ತರ ಮತಕ್ಷೇತ್ರದ ಜನತೆ ಆಶೀರ್ವದಿಸಬೇಕೆಂದು ಕಳಕಳಿಯಿಂದ ವಿನಂತಿಸುತ್ತೇನೆ ಎಂದು ಕೇಳಿಕೊಂಡಿದ್ದಾರೆ.

ಹಾಗು ತನ್ನ ಮುಖ್ಯ ಗುರಿಗಳನ್ನು ಕೂಡ ಹಂಚಿಕೊಂಡಿರುವ ಪ್ರವೀಣ್ 

1)ಐಟಿ, ಬಿಟಿ ಕಂಪನಿಗಳನ್ನು ಒಂದೇ ವರ್ಷದಲ್ಲಿ ಬೆಳಗಾವಿಗೆ ತರುವುದು. 
2) ಪ್ರತಿಯೊಂದು ವಾರ್ಡನಲ್ಲಿ ವೈದ್ಯಕೀಯ ಕೇಂದ್ರಗಳನ್ನು ಸ್ಥಾಪಿಸುವುದು. 
3) ಬೆಳಗಾವಿಯನ್ನು ಮೆಟ್ರೋಪೋಲಿಟಿಯನ್ ಸಿಟಿ ಆಗಿ ಪರಿವರ್ತಿಸಲಾಗುವುದು
4) ಪರಿಸರವನ್ನು ಸಂರಕ್ಷಿಸುವುದಕ್ಕೆ ಹೆಚ್ಚಿನ ಆಧ್ಯತೆ ಕೊಡುವುದು ಎಂದು ತಿಳಿಸಿದ್ದಾರೆ.

View this post on Instagram

A post shared by Praveen Hiremath (@praveenhiremath_krpp)

Read All News