ಕಾಲ್ನಡಿಗೆ ರ್ಯಾಲಿ ಮೂಲಕ ಶಕ್ತಿ ಪ್ರದರ್ಶಿಸಿದ ಪ್ರವೀಣ ಹಿರೇಮಠ

  • Krishna Shinde
  • 14 Jan 2024 , 9:34 PM
  • Belagavi
  • 225

ಬೆಳಗಾವಿ : ಗಾಲಿ ಜನಾರ್ಧನ್ ರೆಡ್ಡಿಯವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಯಾಗಿ ಬೆಳಗಾವಿ ಉತ್ತರಕ್ಕೆ ಕಣಕ್ಕಿಳಿದಿರುವ ಪ್ರವೀಣ ಹಿರೇಮಠ ಇಂದು ಭಾನುವಾರ ಭೃಹತ್  ಶಕ್ತಿ ಪ್ರದರ್ಶನ ನಡೆಸಿದ್ದಾರೆ.

ಬೆಳಗಾವಿಯ ಚೆನ್ನಮ್ಮ ವೃತ್ತದ ಮಹಾ ಗಣಪತಿ ದೇವಸ್ಥಾನಕ್ಕೆ ನಮಸ್ಕರಿ ರಾಣಿ ಚೆನ್ನಮ್ಮರವರ ಪಾದಕ್ಕೆ ನಮನ ಸಲ್ಲಿಸಿ ಚುನಾವಣಾ ಕಾಲ್ನಡಿಗೆ ರ್ಯಾಲಿ ಪ್ರಾರಂಭಿಸಿದ ಪ್ರವೀಣ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಶಕ್ತಿ ಪ್ರದರ್ಶಿಸಿದ್ದಾರೆ.

ಸರ್ವರಿಗೂ ಸಮ ಬಾಳು ಸರ್ವರಿಗೂ ಸಮ ಪಾಲು ಎಂದು ಹೇಳುವ ಮೂಲಕ ಬೆಳಗಾವಿ ಉತ್ತರಲ್ಲಿ ತನ್ನ ಪಕ್ಷದ ಪರ ಕಾಲ್ನಡಿಗೆ ರ್ಯಾಲಿ ನಡೆಸಿದ ಪ್ರವೀಣ ನಾವ ಯಾರುಗೂ ಕಮ್ಮಿ ಇಲ್ಲ ಎಂದು ಹೇಳಿ ಮುನ್ನುಗ್ಗಿದ್ದಾರೆ.

ಬೆಳಗಾವಿಯಲ್ಲಿ ಐಟಿ ಬಿಟಿ ಕನಸು ಕಂಡಿರುವ ಪ್ರವೀಣ ಬೆಳಗಾವಿಯನ್ನು ಐಟಿ ಬಿಟಿ ಹಬ ಮಾಡೆ ಮಾಡುತ್ತೇನೆ ಎಂದು ಹೇಳಿದ್ದಾರೆ.

ಬೆಳಗಾವಿ ಉತ್ತರದ ಸರ್ದಾರ ಕಾಲೇಜನಿಂದ ಪ್ರಾರಂಭವಾದ ರ್ಯಾಲಿ ಕಾಕತಿವೇಸ,ಶನಿವಾರ ಕೂಟ,ಗಣಪತಿ ಗಲ್ಲಿ ,ಮಾರುತಿ ಗಲ್ಲಿ ,ಸಮಾದೇವಿ ಗಲ್ಲಿ ,ಗಣಾಚಾರಿ ಗಲ್ಲಿ ,ಕಂಗ್ರಾಳ ಗಲ್ಲಿಯಿಂದ ಸನ್ಮಾನ ಹೋಟೆಲ ಹತ್ತಿರ ಮುಕ್ತಾಯ ಗೊಂಡಿದೆ.

Read All News