ಬೆಳಗಾವಿ:ಸಂಸದೆಯಾಗಿ ಮೊದಲ ಬಾರಿಗೆ ಬೆಳಗಾವಿಗೆ ಕಾಲಿಟ್ಟ ಪ್ರಿಯಾಂಕಾ ಜಾರಕಿಹೊಳಿ ಅವರ ಭೇಟಿ ಉತ್ಸಾಹಪೂರ್ಣ ಮತ್ತು ಅದ್ದೂರಿಯಾಗಿ ನಡೆಯಿತು. ನಾಗನೂರ್ ರುದ್ರಾಕ್ಷಿ ಮಠದ ಸ್ವಾಮಿಜಿಯವರ ಆಶೀರ್ವಾದ ಪಡೆದು, ಅವರು ತಮ್ಮ ಸಫರಿನ ಮೊದಲ ಹೆಜ್ಜೆಯನ್ನು ಇಟ್ಟರು.
ಸಂವಿಧಾನದ ಶಿಲ್ಪಿಗೆ ಗೌರವ:ಪ್ರಿಯಾಂಕಾ ಜಾರಕಿಹೊಳಿ ಅವರು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ ಅಂಬೇಡ್ಕರ್ ಅವರ ಮೂರ್ತಿಗೆ ಮಾಲಾರ್ಪಣೆ ಮಾಡಿ, ನಂತರ ಕಿತ್ತೂರ ರಾಣಿ ಚೆನ್ನಮ್ಮರವರ ಮೂರ್ತಿಗೆ ಮಾಲಾರ್ಪಣೆ ಮಾಡಿದರು. ನಾನು ಎಂಪಿ ಪ್ರಮಾಣ ವಚನವನ್ನು ಸಂವಿದಾನದ ಮೇಲೆ ಪ್ರಮಾಣ ಮಾಡುವ ಮೂಲಕ ಪ್ರಮಾಣವಚನ ಮಾಡಿದ್ದೇನೆ, ಎಂದು ಅವರು ಹೆಮ್ಮೆಯಿಂದ ತಿಳಿಸಿದರು.
ತಂದೆಯ ಹಾದಿಯಲ್ಲಿ:ಪ್ರಿಯಾಂಕಾ, ನಾನು ನನ್ನ ತಂದೆ ನಡೆದ ಹಾದಿಯಲ್ಲಿ ನಡುಯುತಿದ್ದೇನೆ,ಎಂದು ಹೇಳಿದ್ದಾರೆ. ನಮ್ಮ ಸಂವಿಧಾನ ಉಳಿಯಬೇಕು ಮತ್ತು ಎಲ್ಲರೂ ಸಂವಿಧಾನದ ಬದ್ದವಾಗಿ ನಡೆಯಬೇಕು ಎಂಬ ಸಂದೇಶವನ್ನು ಅವರು ಬಲವಾಗಿ ಸಾರಿದರು.
ಚಿಕ್ಕೋಡಿ ಜಿಲ್ಲೆ ರೂಪಿಸಲು ಸಂಕಲ್ಪ:ಚಿಕ್ಕೋಡಿಯ ಅಭಿವೃದ್ಧಿಗಾಗಿ ಅದನ್ನು ಜಿಲ್ಲೆಗಾಗಿಯೇ ಘೋಷಿಸುವುದು ಅಗತ್ಯ,ಎಂದು ಪ್ರಿಯಾಂಕಾ ಹೇಳಿದರು, ಜಿಲ್ಲೆಯ ಜನತೆಯ ಹಿತದೃಷ್ಠಿಯಿಂದ.
ರಾಜಕೀಯ ಪಯಣ:ನಾನು ದೊಡ್ಡ ರಾಜಕಾರಣಿಗಳು ಮಾತನಾಡುವ ಶೈಲಿ ಮತ್ತು ಡಿಬೇಟುಗಳಲ್ಲಿ ಭಾಗಿಯಾಗಿ ಮುಂದಿನ ನಡೆ ನಡುಯುತ್ತೇನೆ,ಎಂದು ಪ್ರಿಯಾಂಕಾ ಘೋಷಿಸಿದರು, ರಾಜಕೀಯದಲ್ಲಿ ಹೊಸ ಬದಲಾವಣೆಗಳಿಗೆ ಮುನ್ನುಡಿ ಬರೆಯಲು ಸಿದ್ಧರಾಗಿದ್ದಾರೆ.
ಈ ಮೂಲಕ, ಬೆಳಗಾವಿಯಲ್ಲಿ ಪ್ರಿಯಾಂಕಾ ಜಾರಕಿಹೊಳಿ ಅವರ ಸಂಸದೆಯಾಗಿ ಮೊದಲ ಭೇಟಿ ಯಶಸ್ವಿಯಾಗಿ ನಡೆಯಿತು.