ಮೈಸೂರು : ಸಂವಿಧಾನವನ್ನು ದುರ್ಬಲಗೊಳಿಸುವ ಶಕ್ತಿಗಳ ವಿರುದ್ಧ ಹೋರಾಡಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ರಕ್ಷಣೆ ಮಾಡುವುದೇ ಎಲ್ಲಾ ಮಹನೀಯರಿಗೆ ಸಲ್ಲಿಸುವ ಗೌರವ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಸೋಷಿಯಲ್ ಜಸ್ಟೀಸ್ ಫೌಂಡೇಶನ್, ಮೈಸೂರು ಇವರ ವತಿಯಿಂದ ಆಯೋಜಿಸಿರುವ ಡಾ. ಹರೀಶ್ ಕುಮಾರ್ ಅವರ “ ಆಧುನಿಕ ಭಾರತದ ನಿರ್ಮಾತೃ ಡಾ. ಬಾಬು ಜಗಜೀವನರಾಮ್” ಮತ್ತು
ಬಾಬೂಜಿ ಚಿತ್ರ ಸಂಪುಟ” ಕೃತಿ ಯನ್ನು ಬಿಡುಗಡೆಗೊಳಿಸಿದರು.
ಜಗಜೀವನ್ ರಾಂ ಅವರು ದೇಶ ಕಂಡ ಅಪ್ರತಿಮ ದೇಶಪ್ರೇಮಿ, ಮುತ್ಸದಿ ರಾಜಕಾರಣಿ ಹಾಗೂ ಪ್ರಜಾಪ್ರಭುತ್ವವಾದಿ. ದೇಶಕ್ಕೆ ಸ್ವಾತಂತ್ರ್ಯ ಬರಬೇಕೆಂದು ಹೋರಾಟ ಮಾಡಿದ ಎಲ್ಲರಿಗೂ ಈ ಮುಂದೆ ಎಂಥ ದೇಶ ನಿರ್ಮಾಣವಾಗಬೇಕೆಂಬ ಕನಸಿತ್ತು. ಇದಕ್ಕೆ ಪೂರಕವಾದ ಸಂವಿಧಾನದ ರಚನಾ ಸಮಿತಿ ಅಧ್ಯಕ್ಷರಾಗಿ ಸೂಕ್ತ ಸಂವಿಧಾನವನ್ನು ಬಾಬಾ ಸಾಹೇಬ್ ಅಂಬೇಡ್ಕರ್ ರಚನೆ ಮಾಡಿದ್ದಾರೆ ಎಂದರು.
ಸಮಾನಅವಕಾಶಗಳಿರುವಸಮಸಮಾಜನಿರ್ಮಾಣವಾಗಬೇಕು
ಸಮಾಜದಲ್ಲಿ ಹಸಿವು, ಬಡತನ, ನಿರುದ್ಯೋಗ, ದಾರಿದ್ರ್ಯ, ಅನಕ್ಷರತೆ ಎಲ್ಲವೂ ತೊಲಗಿ, ಸಮಾನ ಅವಕಾಶಗಳಿರುವ ಸಮಸಮಾಜ ನಿರ್ಮಾಣವಾಗಬೇಕು. ಅದಕ್ಕಾಗಿಯೇ ಪ್ರಯತ್ನ ಮಾಡಿದರು.
ಸಂವಿಧಾನದಉದ್ದೇಶಜಾರಿಮಾಡುವಪ್ರಯತ್ನನಮ್ಮದು :
ಇತಿಹಾಸ ತಿರುಚಿರುವುದನ್ನು ನಾವು ನೋಡಿದ್ದೇವೆ.ಮುಂದೆ ಏನಾಗಬೇಕೆಬುದನ್ನು ಚರ್ಚಿಸುವುದು ಉತ್ತಮ. ಅಂಬೇಡ್ಕರ್, ಗಾಂಧಿ, ನೆಹರು, ಜಗಜೀವನ್ ರಾಂ ಅವರು ಹೇಳಿದಂಥ ಭಾರತ ನಿರ್ಮಾಣವಾಗಬೇಕು. ನಮಗೆ ಅವಕಾಶ ಸಿಕ್ಕಿದಾಗ ಅಂಥ ಭಾರತ, ರಾಜ್ಯವನ್ನು ನಿರ್ಮಿಸಬೇಕು. ಆ ದಿಕ್ಕಿನಲ್ಲಿ ನಮ್ಮ ಸರ್ಕಾರ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಎಲ್ಲಾ ಸರ್ಕಾರಗಳ ಉದ್ದೇಶ ಆದೇ ಆಗಬೇಕು. ಸಂವಿಧಾನದ ಪೀಠಿಕೆ ಯಲ್ಲಿ ಹೇಳಿರುವುದೇ ಸಂವಿಧಾನದ ಉದ್ದೇಶ. ಅದನ್ನು ಜಾರಿ ಮಾಡುವ ಪ್ರಯತ್ನ ನಮ್ಮದು. ಅನೇಕ ಶಕ್ತಿ ಗಳು ಅದಕ್ಕೆ ವಿರುದ್ದವಾಗಿವೆ. ಅಂಥ ಶಕ್ತಿಗಳನ್ನು ವಿರುದ್ಧ ಹೋರಾಡುವ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು.
ಪಟ್ಟಭದ್ರಹಿತಾಸಕ್ತಿಗಳನ್ನುಗುರುತಿಸಬೇಕು
ಪಟ್ಟಭದ್ರ ಹಿತಾಸಕ್ತಿಗಳು ಹಿಂದೆಯೂ ಇದ್ದರು, ಈಗಲೂ ಇದ್ದಾರೆ. ಅವರನ್ನು ಗುರುತಿಸಿ ಅವರಿಗೆ ಶಕ್ತಿ ಬಾರದಂತೆ ನೋಡಿಕೊಳ್ಳುವ ಕೆಲಸವಾಗಬೇಕು ಎಂದರು.
ಸಮಾಜಮುಖಿ ಬರೆವಣಿಗೆ ಇರಲಿ ಎಂದು ಹರೀಶ್ ಕುಮಾರ ಅವರಿಗೆ ಹಾರೈಸಿದರು.