ಆನಂದ ಅಪ್ಪುಗೊಳ ಸೊಸೈಟಿ ವಿರುದ್ಧ ಪ್ರತಿಭಟನೆ

  • shivaraj bandigi
  • 15 Jan 2024 , 2:48 AM
  • Belagavi
  • 884

ಬೆಳಗಾವಿ

ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಕ್ರೆಡಿಟ್ ಸೊಸೈಟಿಯಲ್ಲಿ ಠೇವಣಿ ಇಟ್ಟ ಗ್ರಾಹಕರಿಗೆ ಮೋಸವಾಗಿ ಸುಮಾರು ವರ್ಷಗಳ ಕಳೆದರೂ ನಮಗೆ ನ್ಯಾಯ ಸಿಕ್ಕಿಲ್ಲ ಎಂದು ನಿತಿನ್ ಸಿಂಗ್ ರಜಪೂತ ಹೇಳಿದರು.

ಗುರುವಾರ ಸುವರ್ಣ ಗಾರ್ಡನ್ ಪ್ರತಿಭಟನಾ ಸ್ಥಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು‌.ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಸೊಸೈಟಿಯ ಸಂಸ್ಥಾಪಕ ಆನಂದ ಅಪ್ಪುಗೋಳ ಆಸ್ತಿಯನ್ನು ಸರಕಾರ ಮುಟ್ಟುಗೋಲು ಹಾಕಿಕೊಂಡಿದೆ. ಆದರೆ ಠೇವಣಿದಾರರಿಗೆ ಸರಿಯಾದ ಹಣ ಸಿಕ್ಕಿಲ್ಲ. ನಮ್ಮ ಹಣ ಕೇಳಿದರೆ ಬೆಂಗಳೂರಿಗೆ ಬಂದು ದಾಖಲಾತಿ ಸಲ್ಲಿಸಿ ಎಂದು ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸರಕಾರ ಜವಾಬ್ದಾರಿಯಿಂದ ಠೇವಣಿದಾರರ ಹಣವನ್ನು ಮರಳಿಸಬೇಕು. ಈಗಾಗಲೇ ಸರಕಾರಕ್ಕೆ ನಾವು ದಾಖಲೆಗಳನ್ನು ಸಲ್ಲಿಸಲಾಗಿದೆ. ವಿನಾಕಾರಣ ನಮ್ಮ ಮೇಲೆ ದಾಖಲಾತಿಗಾಗಿ ಕಿರುಕುಳ ನೀಡುತ್ತಿದ್ದಾರೆ ಎಂದರು.

ಇದು ಸರಕಾರದ ಸಪರ್ದಿಗೆಯಲ್ಲಿ ಬರುತ್ತೆ

Read All News