ಹಲುವು ಬೇಡಿಕೆಗಳಿಗಾಗಿ ಭಾರತೀಯ ಕೃಷಿಕ ಸಮಾಜ ಕರ್ನಾಟಕ ವತಿಯಿಂದ ಪ್ರತಿಭಟನೆ

  • 14 Jan 2024 , 10:49 PM
  • Belagavi
  • 234

ಬೆಳಗಾವಿ : ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಜಾನುವಾರುಗಳ ಚರ್ಮಗಂಟು ರೋಗದಿಂದಾಗಿ ಸಾವಿರಾರು ಎತ್ತು, ಹಸು, ಹೋರಿಗಳು ಸಾವನ್ನಪ್ಪುತ್ತಿದ್ದು, ಅದೇ ರೀತಿಯಾಗಿ ಇತ್ತೀಚಿನ ದಿನಗಳಲ್ಲಿ ಕೊಯ್ದು ಹಂತದಲ್ಲಿರುವ ಭತ್ತದ ಬೆಳೆಗೆ ಬೆಂಕಿ ರೋಗ ಹರಡುತ್ತಿರುವುದನ್ನು ನಿಯಂತ್ರಿಸಲು ಕೊರಿದ್ದಾರೆ.

ಬೆಳಗಾವಿ ಸುತ್ತಲಿನ ವರ್ತುಲ ರಸ್ತೆ ನಿರ್ಮಾಣಕ್ಕೆ ರೈತರ ಫಲವತ್ತಾದ ಭೂಸ್ವಾಧೀನಕ್ಕೆ ರೈತರ ಸಂಪೂರ್ಣ ವಿರೋಧವಿದ್ದು ಭೂಸ್ವಾಧೀನವನ್ನು ಕೈ ಬಿಡಲು ಆಗ್ರಹಿಸಿದ್ದಾರೆ, ಪ್ರಸಕ್ತ 2022- 23ನೇ ಸಾಲಿನಲ್ಲಿ ಸಕ್ಕರೆ ಕಾರ್ಖಾನೆಗಳು ಪ್ರಾರಂಭವಾಗಿದ್ದರೂ ಕೂಡ ರಾಜ್ಯ ಸರ್ಕಾರ ಕಬ್ಬುದರ ನಿಗದಿಪಡಿಸದಿರುವುದು ಸೇರಿದಂತೆ ರೈತರ ಈ ಕೆಳಗಿನ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕೆಂದು ಒತ್ತಾಯಿಸಿ ಭಾರತೀಯ ಕೃಷಿಕ ಸಮಾಜ (ಸಂಯುಕ್ತ)ಕರ್ನಾಟಕ ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನೆ ಮುಖಾಂತರ ಮನವಿ ಸಲ್ಲಿಸಿದ್ದಾರೆ.

1) ಚರ್ಮ ಗಂಟು ರೋಗದಿಂದ ಮರಣ ಹೊಂದಿದ ಎತ್ತು ಮತ್ತು ಹಸುಗಳಿಗೆ ಕನಿಷ್ಠ ರೂ.75,000.ದಿಂದ ರೂ.1,00,000.ವರೆಗೆ ಪರಿಹಾರ ಕೂಡಲೇ ವಿತರಿಸಬೇಕು ಎಂದು ಆಗ್ರಹಿಸಿದ್ದಾರೆ.

2) ಕೊಯ್ದು ಹಂತದಲ್ಲಿರುವ ಭತ್ತದ ಬೆಳೆಗೆ ಬೆಂಕಿ ರೋಗ ಹರಡಿದ್ದು ಅಪಾರ ಪ್ರಮಾಣದ ಭತ್ತದ ಬೆಳೆ ಹಾನಿಯಾಗಿದೆ. ಹಾನಿಯಾದ ಪ್ರತಿ ಎಕರೆಗೆ ಸರ್ಕಾರದಿಂದ ಕನಿಷ್ಠ 450 ಸಾವಿರ ಪರಿಹಾರ ನೀಡಬೇಕು ಹಾಗೂ ಕೂಡಲೇ ವಿಮಾ ಹಣವನ್ನು ಬಿಡುಗಡೆಗೊಳಿಸಬೇಕು. 

3)ಬೆಳಗಾವಿ ಸುತ್ತಲೂ ನಿರ್ಮಿಸುವ ವರ್ತುಲ ರಸ್ತೆಗೆ ರೈತರ ಫಲವತ್ತಾದ ಭೂಮಿಯನ್ನು ಸ್ವಾಧೀನ ಪಡಿಸಿ ಕೊಳ್ಳುತ್ತಿರುವುದಕ್ಕೆ ರೈತರ ಸಂಪೂರ್ಣ ವಿರೋಧವಿದ್ದು ಸದರಿ ಭೂಸ್ವಾಧೀನ ಕಾರ್ಯವನ್ನು ಕೈಬಿಡಬೇಕು.

4)ಪ್ರಸಕ್ತ 2022-23 ನೇ ಸಾಲಿನ ಹೆಚ್ಚುವರಿ ಕಬ್ಬು ದರವನ್ನು ರಾಜ್ಯ ಸರ್ಕಾರ ಕೂಡಲೇ ನಿಗದಿಪಡಿಸಬೇಕು. 

5) ಖಾನಾಪುರ ತಾಲೂಕಿನ ಪಶ್ಚಿಮ ಭಾಗದಲ್ಲಿ ವನ್ಯಪ್ರಾಣಿಗಳಿಂದ ಹಾನಿಯಾದ ಬೆಳೆಗಳಿಗೆ ಕೂಡಲೇ ಪರಿಹಾರ ಧನ ವಿತರಿಸಬೇಕು .ಬೆಳ ರಕ್ಷಣೆಗಾಗಿ ಆನೆ ಕಾರಿಡಾರ್ ಯೋಜನೆ ಅಳವಡಿಸಬೇಕು.

6)ಅರಣ್ಯ ಭಾಗದಲ್ಲಿ ಹಾನಿಯಾದ ಬೆಳೆಗಳಿಗೆ ಪರಿಹಾರ ಧನ ಹಾಗೂ ವನ್ಯಪ್ರಾಣಿಗಳ ದಾಳಿಗೆ ತುತ್ತಾಗಿ ಉಂಟಾದ ಪ್ರಾಣಹಾನಿಗೆ ಪರಿಹಾರ ಧನ ಹಾಗೂ ಚಿಕಿತ್ಸಾ ವೆಚ್ಚದ ಕುರಿತಂತೆ ಸರಕಾರ ಸನ್ 2011-12ನೇ ಸಾಲಿನ ಪರಿಹಾರದನದ ಆದೇಶವನ್ನು ಪ್ರಸಕ್ತ ಹಣದುಬ್ಬರಕ್ಕನುಗುಣವಾಗಿ ಪರಿಷ್ಕರಿಸಿ ಆದೇಶವನ್ನು ಹೊರಡಿಸಬೇಕು.

ಮೇಲಿನ ಎಲ್ಲಾ ಅಂಶಗಳನ್ನು ತುರ್ತಾಗಿ ಪರಿಗಣಿಸಿ ಹೊಸದಾಗಿ ಪರಿಹಾರ ಧನ ಮಾರ್ಗಸೂಚಿಯನ್ನು ಹೊರಡಿಸಬೇಕು. ಇಲ್ಲವಾದಲ್ಲಿ ಭಾರತೀಯ ಕೃಷಿಕ ಸಮಾಜ ಸಂಯುಕ್ತ ಕರ್ನಾಟಕ ವತಿಯಿಂದ ಮುಂಬರುವ ದಿನಗಳಲ್ಲಿ ಬೃಹತ್ ಪ್ರತಿಭಟನೆ ಹಮ್ಮಿ ಕೊಳ್ಳಲಾಗುವುದೆಂದು ತಿಳಿಸಿದ್ದಾರೆ.

Read All News