ಬೆಳಗಾವಿ :ಕಾನೂನು ಬಾಹಿರ ಮತ್ತು ಅಕ್ರಮವಾಗಿ 400ಕ್ಕೂ ಹೆಚ್ಚು ಕಾರ್ಮಿಕರನ್ನು ಲಕ್ನೋ ಘಟಕಕ್ಕೆ ವರ್ಗಾವಣೆ ಮಾಡಿದ್ದನ್ನು ಹಿಂಪಡೆಯವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಟಾಟಾ ಮಾರ್ಕೊಪೋಲೊ ಕ್ರಾಂತಿಕಾರಿ ಸಂಘಟನೆ ಸುವರ್ಣ ವಿಧಾನಸೌಧದ ಬಸ್ತವಾಡದ ಬಳಿ ಪ್ರತಿಭಟನೆ ನಡೆಸಿದರು.
ಕಂಪನಿಯು ದುರುದ್ದೇಶದಿಂದ 27 ಕಾರ್ಮಿಕರ ಅಮಾನತ್ತಿನ ವಿಚಾರಣೆಯನ್ನು ತಡೆಯಬೇಕು. ಕಾರ್ಮಿಕರಿಗೆ ಕಾರ್ಖಾನೆ ಕೆಲಸದಲ್ಲಿನ ನಿತ್ಯ ಕಿರುಕುಳ, ಮಾನಸಿಕ ಹಿಂಸೆ ತಪ್ಪಿಸಬೇಕು ಹಾಗೂ ಕಾರ್ಮಿಕ ಇಲಾಖೆಯ ಅಪರ ಕಾರ್ಮಿಕ ಆಯುಕ್ತ ಮಂಜುನಾಥ ಜಿ ಇವರ ಕಾರ್ಮಿಕ ವಿರೋಧಿ, ಅಧಿಕಾರ ದುರುಪಯೋಗದ ಮೇಲೆ ತನಿಖೆ ಮಾಡಲು ಅಮಾನತು ಮಾಡಬೇಕೆಂದು ಆಗ್ರಹಿಸಿದರು.
ಮಲ್ಲಿಕಾರ್ಜುನ ಮರಮ್ಮನವರ, ಸಿದ್ದಗೌಡ ಪಾಟೀಲ, ಕೆ.ಬಿ.ಗೋನಾಳ, ಶಿವಯೋಗಿ ಹಾಲಬಾವಿ, ವಿರೇಶ ಪಾಟೀಲ, ಭೀಮಾಶಂಕರ ಪೂಜಾರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.