ಬೆಂಗಳೂರಿನ ಕರ್ನಾಟಕ ರಾಜ್ಯ ಅರಣ್ಯ ಪ್ರೇಕ್ಷಕರ ಸಂಘದಿಂದ ಪ್ರತಿಭಟನೆ

  • 1 Jan 2024 , 8:43 AM
  • Belagavi
  • 118

ಬೆಳಗಾವಿ :ನ್ಯಾಯಾಲಯಗಳ ಆದೇಶವನ್ನು ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಗುರುವಾರ ಸುವರ್ಣ ವಿಧಾನಸೌಧದ ಮುಂಭಾಗದಲ್ಲಿರುವ ಬಸ್ತವಾಡ ಗ್ರಾಮದ ಬಳಿ ಬೆಂಗಳೂರಿನ ಕರ್ನಾಟಕ ರಾಜ್ಯ ಅರಣ್ಯ ಪ್ರೇಕ್ಷಕರ ಸಂಘ ಪ್ರತಿಭಟನೆ ನಡೆಸಿದರು.

ಕರ್ನಾಟಕ ಅರಣ್ಯ ಇಲಾಖೆಯಲ್ಲಿ 1984-85 ರಿಂದ ಅರಣ್ಯ ಪ್ರೇಕ್ಷಕರಾಗಿ ಕಾರ್ಯನಿರ್ವಹಿಸುತ್ತ ಬಂದಿದ್ದೇವೆ. ನಮ್ಮ ಸೇವೆಯನ್ನು ಸರಕಾರ ಖಾಯಂಗೊಳಿಸಬೇಕು ಎಂದು 35 ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದರೂ ಸರಕಾರಗಳು ಮಾತ್ರ ನಮ್ಮ ಬೇಡಿಕೆಗೆ ಸ್ಪಂದಿಸಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಬೆಂಗಳೂರಿನ ಔಧ್ಯಮಿಕ ನ್ಯಾಯಾಧೀಕರಣದಲ್ಲಿ 2020ರಲ್ಲಿ ಕೈಗಾರಿಕಾ ವಿವಾದ ಆರಂಭಿಸಿದ್ದು ನ್ಯಾಯಾಲಯವು ಈ  ತೀರ್ಪನ್ನು ಹೊರಡಿಸಿ ನಮ್ಮ ಸೇವೆಯನ್ನು ಸೇರಿದ ದಿನಾಂಕದಿಂದ ಹಿಂಬಾಕಿ ವೇತನದೊಂದಿಗೆ ಖಾಯಂಗೊಳಿಸಲು ಆದೇಶಿದಿದೆ. ಕಲಬುರಗಿಯ ನ್ಯಾಯಾಲಯ ನಮ್ಮ ಸೇವೆಯನ್ನು ಪರಿಗಣಿಸಿ ಖಾಯಂ ಮಾಡಲು ಸೂಚನೆ ನೀಡಿದೆ ಅದರಂತೆ ಸರಕಾರ ಪಾಲನೆ ಮಾಡಬೇಕೆಂದು ಒತ್ತಾಯಿಸಿದರು.

ಮುನಿರಾಜಪ್ಪ ಎಂ, ರಾಜಣ್ಣ ಜಿ, ಸೌಭಾಗ್ಯ ಎಲ್.ಎಸ್., ಶಿವೇಗೌಡ ಟಿ.ಕೆ. ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Read All News