ಬೈಲಹೊಂಗಲ : ರಾಜ್ಯಾದ್ಯಂತ ಇವತ್ತಿನಿಂದ ಮಾ.17 ರ ವರೆಗೆ ಪಿಯು ಪರೀಕ್ಷೆಗಳು ನಡೆಯಲಿದ್ದು, 1, 217 ಪರೀಕ್ಷಾ ಕೇಂದ್ರಗಳಲ್ಲಿ ಸುಮಾರು 7 ಲಕ್ಷ ವಿದ್ಯಾರ್ಥಿಗಳು ತಮ್ಮ ಪರೀಕ್ಷೆಯನ್ನು ಎದುರಿಸಲಿದ್ದಾರೆ.
ವಿದ್ಯಾರ್ಥಿ ಜೀವನದ ಪ್ರಮುಖ ಎರಡನೇಯ ಘಟ್ಟಕ್ಕೆ ತಲುಪಿರುವ ಪ್ರತಿಯೊಬ್ಬ ವಿದ್ಯಾರ್ಥಿಯೂ, ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಉತ್ತೀರ್ಣರಾಗಲಿ... ತಮ್ಮ ಪ್ರಮುಖ ಘಟ್ಟದ ಎರಡನೇಯ ಹಾದಿ ಸುಗಮವಾಗಿ ಮುಗಿಸಲಿ ಎಂದು ಶುಭ ಹಾರೈಕೆ..
ಪರೀಕ್ಷೆ ಎಂದಾಕ್ಷಣ ಭಯಭೀತರಾಗದೆ, ತಮಗೆ ಅರಿವು ಇರುವಷ್ಟು ಪರೀಕ್ಷೆ ಎದುರಿಸಿದರೆ ಪಾಸ ಆಗೂವ ಅವಕಾಶಗಳು ಇರುತ್ತವೆ. ಫಲಿತಾಂಶ ಯಾವುದೇ ಬರಲಿ ಧೈರ್ಯದಿಂದ ಉತ್ತರಿಸಬೇಕಾಗಿರುವದು ಎಲ್ಲ ವಿದ್ಯಾರ್ಥಿಗಳ ಹೊಣೆ.
ದೃತಿಗೆಡದೆ ಧೈರ್ಯದಿಂದ ಪರೀಕ್ಷೆ ಎದುರಿಸಿ, ತಮ್ಮ ಯಶಸ್ಸಿನ ಜೀವನ ಪಡೆದು ಉನ್ನತಮಟ್ಟದ ಸ್ಥಾನಮಾನಗಳು ಸಿಗಲಿ.
ವರದಿಗಾರ : ರವಿಕಿರಣ್ ಯಾತಗೇರಿ