ಒನ್ MLA ಒನ್ ಪೆನ್ಷನ್ ಕಾಯ್ದೆ ಜಾರಿಗೆ ತಂದ್ ಪಂಜಾಬ್ ಸರ್ಕಾರ್

  • 15 Jan 2024 , 12:46 AM
  • Punjab
  • 130

ಪಂಜಾಬ :ರಾಜ್ಯಪಾಲರಾದ ಬನ್ವಾರಿ ಲಾಲ್ ಪುರೋಹಿತ್ ಒಪ್ಪಿಗೆಯ್ ಮೇರಿಗೆ ಪಂಜಾಬ್ ಸರ್ಕಾರವು 'ಒಬ್ಬ ಶಾಸಕ ಒಂದು ಪಿಂಚಣಿ ಕಾಯ್ದೆ'ಯನ್ನು ಜಾರಿಗೆ ತಂದಿದೆ.

ಪಂಜಾಬ್ ಅಸೆಂಬ್ಲಿ ಜೂನ್ 30 ರಂದು ಪಂಜಾಬ್ ರಾಜ್ಯ ಶಾಸಕಾಂಗ ಸದಸ್ಯರ (ಪಿಂಚಣಿ ಮತ್ತು ವೈದ್ಯಕೀಯ ಸೌಲಭ್ಯಗಳ ನಿಯಂತ್ರಣ) ತಿದ್ದುಪಡಿ ಮಸೂದೆ, 2022 ಅನ್ನು ಅಂಗೀಕರಿಸಿದೆ.

ಮುಖ್ಯಮಂತ್ರಿ ಭಗವಂತ್ ಮಾನ್ ಶನಿವಾರ ಟ್ವೀಟ್‌ನಲ್ಲಿ, ಗೌರವಾನ್ವಿತ ರಾಜ್ಯಪಾಲರು "ಒಬ್ಬ ಶಾಸಕ - ಒಬ್ಬ ಪಿಂಚಣಿ" ಮಸೂದೆಯನ್ನು ಅನುಮೋದಿಸಿದ್ದಾರೆ ಎಂದು ಪಂಜಾಬಿಗಳಿಗೆ ತಿಳಿಸಲು ನನಗೆ ತುಂಬಾ ಸಂತೋಷವಾಗಿದೆ...ಸರ್ಕಾರವು ಅಧಿಸೂಚನೆಯನ್ನು ಹೊರಡಿಸಿದೆ. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ತೆರಿಗೆ ಉಳಿತಾಯವಾಗಲಿದೆ ಎಂದು ಪಂಜಾಬ್ ಸಿಮ್ ಟ್ವಿಟ್ ಮೂಲಕ ತಿಳಿಸಿದ್ದಾರೆ .

ಈ ಕ್ರಮದ ಮೂಲಕ ರಾಜ್ಯ ಸರ್ಕಾರವು ವಾರ್ಷಿಕವಾಗಿ ಸುಮಾರು 19.53 ಕೋಟಿ ರೂಪಾಯಿಗಳನ್ನು ಉಳಿಸುವ ನಿರೀಕ್ಷೆಯಿದೆ.

Read All News