ರಾಹುಲ್ ಗಾಂಧಿ ಸಂಸತ್ತಿಗೆ ಅನರ್ಹ : ಮೋದಿ ಸರ್ಕಾರದ ವಿರುದ್ದ ಕೆಂಡಾ ಮಂಡಲವಾದ ಕಾಂಗ್ರೆಸ

  • Krishna Shinde
  • 15 Jan 2024 , 3:06 AM
  • Belagavi
  • 346

2019ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ದೋಷಾರೋಪಣೆಯಾದ ಮರುದಿನವೇ ರಾಹುಲ್ ಗಾಂಧಿ ಅವರನ್ನು ಸಂಸತ್ತಿನಿಂದ ಅನರ್ಹಗೊಳಿದ ಕಾರಣ ಕೆಂಡಾಮಂಡಲವಾದ ಕಾಂಗ್ರೆಸ್ ಗಣ್ಯರು ಬಿಜೆಪಿ ವಿರುದ್ದ ಕಿಡಿ ಕಾರಿದ್ದಾರೆ.

ಮೋದಿ ಸರ್ಕಾರವು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದಿಂದ ಹೆಚ್ಚು ಭಯಪಡುತ್ತಿದೆ.ಪ್ರಜಾಪ್ರಭುತ್ವವನ್ನು ಕೊಲ್ಲಲು, ಅವರು  ಗಾಂಧಿಯವರ ಸಂಸತ್ ಸದಸ್ಯತ್ವವನ್ನು ರದ್ದುಗೊಳಿಸಿದ್ದಾರೆ. ಅವರು ಸತ್ಯವನ್ನು ಮಾತನಾಡುವವರ ಬಾಯಿ ಮುಚ್ಚಿಸಲು ಬಯಸುತ್ತಾರೆ.ಈ ಸರ್ವಾಧಿಕಾರವನ್ನು ದೇಶವಾಸಿಗಳು ಸಹಿಸುವುದಿಲ್ಲ ಪ್ರಜಾಪ್ರಭುತ್ವವನ್ನು ರಕ್ಷಿಸಲು ನಾವು ಜೈಲಿಗೆ ಹೋಗುತ್ತೇವೆ ಎಂದು ಖರ್ಗೆ ಹೇಳಿದ್ದಾರೆ.

ನೀರವ್ ಮೋದಿ ಹಗರಣ - 14,000 ಕೋಟಿ
 ಲಲಿತ್ ಮೋದಿ ಹಗರಣ - 425 ಕೋಟಿ
 ಮೆಹುಲ್ ಚೋಕ್ಸಿ ಹಗರಣ - 13,500 ಕೋಟಿ

 ದೇಶದ ಹಣವನ್ನು ಲೂಟಿ ಮಾಡಿದವರ ರಕ್ಷಣೆಗೆ ಬಿಜೆಪಿಯವರೇಕೆ ಬಂದಿದ್ದಾರೆ?  ನಿಖೆಯಿಂದ ಓಡಿ ಹೋಗುತ್ತಿದ್ದಾರೆ?ಈ ಬಗ್ಗೆ ಪ್ರಶ್ನೆ ಎತ್ತುವವರ ಮೇಲೆ ಕೇಸು ಹಾಕಲಾಗುತ್ತದೆ,ಬಿಜೆಪಿ ಭ್ರಷ್ಟರನ್ನು ಬೆಂಬಲಿಸುತ್ತದೆಯೇ?
ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ನ್ಯಾಯಾಲಯದ ತೀರ್ಪಿನ 24 ಗಂಟೆಗಳ ಒಳಗೆ ಮತ್ತು ಮೇಲ್ಮನವಿ ಪ್ರಕ್ರಿಯೆಯಲ್ಲಿದೆ ಎಂದು ತಿಳಿದಾಗ ಈ ಕ್ರಮ ಮತ್ತು ಅದರ ವೇಗದಿಂದ ನಾನು ದಿಗ್ಭ್ರಮೆಗೊಂಡಿದ್ದೇನೆ.  ಇದು ಕೈಗವಸುಗಳನ್ನು ಮುಚ್ಚಿದ ರಾಜಕೀಯ ಮತ್ತು ಇದು ನಮ್ಮ ಪ್ರಜಾಪ್ರಭುತ್ವಕ್ಕೆ ಕೆಟ್ಟದ್ದನ್ನು ಸೂಚಿಸುತ್ತದೆ ಎಂದು ಶಶಿ ತರೂರ ಹೇಳಿದ್ದಾರೆ.
 

ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರ ವಿರುದ್ಧ ಕೈಗೊಳ್ಳಲಾದ ಕ್ರಮದಿಂದ ಕಾಂಗ್ರೆಸ್ ಪಕ್ಷದ ಲಕ್ಷಾಂತರ ಕಾರ್ಯಕರ್ತರ ಮನಸ್ಸಿಗೆ ನೋವಾಗಿರುವುದು ನಿಜವಾದರೂ ಈ ಸಂದರ್ಭದಲ್ಲಿ ಸಂಯಮದಿಂದ ವರ್ತಿಸುವುದು ಅಗತ್ಯ. 
ಯಾರೂ ಕೂಡಾ ಸಿಟ್ಟು-ಆಕ್ರೋಶದ ಕೈಗೆ ಬುದ್ದಿ ಕೊಡದೆ ಶಾಂತಿಯುತ ಪ್ರತಿಭಟನೆ ನಡೆಸಬೇಕೆಂದು ಕೋರುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Read All News