ಬೆಳಗಾವಿ :ಬಿಜೆಪಿಯ 40% ಕಮಿಷನ್ ಸರ್ಕಾರ್ ಉದ್ಯೋಗ ಮತ್ತು ಅವಕಾಶಗಳನ್ನು ಅಳಿಸಿಹಾಕಿದೆ,ಕಾಂಗ್ರೆಸ್‌ನ ಯುವನಿಧಿ ಕರ್ನಾಟಕದ ನಿರುದ್ಯೋಗಿ ಯುವಕರಿಗೆ ಶಕ್ತಿ ತುಂಬಲಿದೆ
ಅದು ಕಾಂಗ್ರೆಸ್ ಗ್ಯಾರಂಟಿ! ಎಂದು ರಾಗಾ ಹೇಳಿದ್ದಾರೆ.
ಸೋಮವಾರ ನಗರದ ಸಿಪಿಎಡ್ ಮೈದಾನದಲ್ಲಿ ಯುವ ಕ್ರಾಂತಿ ಸಮಾವೇಶದಲ್ಲಿ ಘೋಷಣೆ ಮಾಡಿದರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ ರಾಜ್ಯದಲ್ಲಿ ಈಗ ಚುನಾವಣೆ ಬರುತ್ತಿದೆ. ಇದು ಕರ್ನಾಟಕಕ್ಕೆ ಹಾಗೂ ದೇಶಕ್ಕೆ ಒಂದು ಸಂದೇಶ ಕೊಡುವ ಚುನಾವಣೆ. ಅದಕ್ಕಾಗಿ ನಾವೆಲ್ಲರೂ ಒಗ್ಗಟ್ಟಾಗಿ ಚುನಾವಣೆ ಎದುರಿಸಬೇಕಿದೆ ಯುವಕರು ಮಾರ್ಗದರ್ಶನ ಸದಾ ಇರಬೇಕೆಂದು ಹೇಳಿದ್ದಾರೆ.