ಚಿಕ್ಕೋಡಿ : ಮಹಾರಾಷ್ಟ್ರ, ಪಶ್ಚಿಮ ಘಟ್ಟಗಳಲ್ಲಿ ಮುಂದುವರೆದ ಮಳೆಯ ಅಬ್ಬರದಿಂದ ಕೃಷ್ಣಾ ನದಿಯ ಒಳಹರಿವಿನಲ್ಲಿ ಬಾರಿ ಏರಿಕೆ ಕಂಡು ಬಂದಿದ್ದು, ಅಂದಾಜು 65 ಸಾವಿರ ಕ್ಯೂಸೆಕ್ಸ್ ಒಳಹರಿವು ಇರುವ ಹಿನ್ನೆಲೆಯಲ್ಲಿ ನದಿ ತೀರದ ಗ್ರಾಮಗಳಿಗೆ ರಾಯಬಾಗ ತಹಶೀಲ್ದಾರ್ ಭೇಟಿ ನೀಡಿ, ಪ್ರವಾಹ ಪರಿಸ್ಥಿತಿಯನ್ನು ತಹಶೀಲ್ದಾರ್ ಮುಂಜೆ. ಅವಲೋಕಿಸಿದರು.
ಪ್ರವಾಹ ಎದುರಿಸಲು ಸಕಲ ರೀತಿಯಲ್ಲೂ ತಾಲೂಕಾ ಆಡಳಿತ ಸನ್ನದವಾಗಿದ್ದು, ಜನರು ಯಾವುದೇ ಆತಂಕ,ಭೀತಿ ಪಡಬೇಕಾಗಿಲ್ಲ.
ರಾಯಬಾಗ ತಾಲೂಕಿನಲ್ಲಿ 13 ಹಳ್ಳಿಗಳು ಕೃಷ್ಣಾ ನದಿತೀರದಲ್ಲಿವೆ.40 ಕಾಳಜಿ ಕೇಂದ್ರಗಳು, 40 ಗೋಶಾಲೆ ತೆರೆಯಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ನೋಡಲ್ ಅಧಿಕಾರಿಗಳ ನೇಮಕ ಕೂಡಾ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.