ಬೈಲಹೊಂಗಲ : ಪಟ್ಟಣದ ಎ.ಪಿ.ಎಂ.ಸಿ ಮಾರುಕಟ್ಟೆಯಿಂದ ಸಂಗೊಳ್ಳಿ ರಾಯಣ್ಣ ವೃತ್ತದ ವರೆಗೆ ರೈತರು ಚಕ್ಕಡಿಗಳ ಮೆರವಣಿಗೆಯ ಮುಕಾಂತರ ಪಕ್ಷೇತರ ಅಭ್ಯರ್ಥಿ ವಿಶ್ವನಾಥ ಪಾಟೀಲರವರಿಗೆ ರೈತ ಸಂಘಟನೆಗಳು ಸ್ವಾಭಿಮಾನಿ ನಾಡಿನ ರೈತರು ಬಾರಿ ಬೆಂಬಲ ವ್ಯಕ್ತ ಪಡಿಸಿದರು.ವೀರರಾಣಿ ಕಿತ್ತೂರು ಚೆನ್ನಮ್ಮಾಜಿ ಪುತ್ತಳಿಗೆ ಮಾಲಾರ್ಪಣೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಸುಮಾರು 400ಚಕ್ಕಡಿಗಳ ಮೂಲಕ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ರೈತರು ಹಸಿರು ಶಾಲು ಹೊತ್ತು ಎತ್ತುಗಳಿಗೆ ಸಿಂಗರಿಸಿ ಈ ಬಾರಿ ರೈತ ಚಿನ್ಹೆಗೆ ನಮ್ಮ ಮತ ಮೆ 10 ಹೊಡಿ ಒಂಬತ್ತು ಎನ್ನುವ ಘೋಷಣೆ ಕೂಗುತ್ತ ಮೆರವಣಿಗೆಯಲ್ಲಿ ಬಾಗಿಯಾದರು.
ಯಾವುದೇ ಅಪೇಕ್ಷೆ ಇಲ್ಲದೆ ಹಲವಾರು ಜನ ರೈತರು ತಮ್ಮ ಮನೆಯಿಂದಲೇ ಬುತ್ತಿ ಕಟ್ಟಿಕೊಂಡು ಬಂದು ಈ ಒಂದು ಮೆರವಣಿಗೆಯಲ್ಲಿ ಭಾಗಿಯಾಗಿದ್ದು ವಿಶೇಷ ಎನಿಸಿತು.. ನಗರದ ಸಂಗೊಳ್ಳಿ ರಾಯಣ್ಣ ಪ್ರತಿನಿಗೆ ಮಾಲಾರ್ಪಣೆ ಮಾಡಿ ಮಾಧ್ಯಮದವರಿಗೆ ಪ್ರತಿಕ್ರಿಸಿದ ವಿಶ್ವನಾಥ್ ಪಾಟೀಲ್ ಅವರು ಪಕ್ಷ ನನಗೆ ಟಿಕೆಟ್ ನೀಡದೆ ಮೋಸ ಮಾಡಿದ್ದು ಆದರೆ ನಾನು ನಂಬಿದ ನನ್ನ ಸ್ವಾಭಿಮಾನಿ ಕಾರ್ಯಕರ್ತರು ಅಭಿಮಾನಿ ಬಳಗದವರು ಹಾಗೂ ದೇಶದ ಬೆನ್ನೆಲುಬದ ರೈತರು ನನ್ನ ಕೈ ಬಿಡಲಿಲ್ಲ ಅವರ ಆಶೀರ್ವಾದದಿಂದ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ.
ಎಲ್ಲ ರೈತರು ನನ್ನನ್ನ ಬೆಂಬಲಿಸುವ ದೃಷ್ಟಿಯಿಂದ ಇವತ್ತಿನ ದಿನ ಎತ್ತಿನ ಬಂಡಿಗಳನ್ನ ತಂದು ಮೆರವಣಿಗೆಯಲ್ಲಿ ಭಾಗವಹಿಸುವ ಮೂಲಕ ನನಗೆ ಬೆಂಬಲವನ್ನ ಸೂಚಿಸಿದ್ದಾರೆ ಎಂದು ತಿಳಿಸಿದರು.
ವರದಿ ಸುದರ್ಶನ್